ಎಲ್ಲಾ ಭಾವಗಳ, ಮಿಡಿತ ತುಡಿತಗಳ ತನ್ನೋಡಲಲ್ಲಿರಿಸಿಹ ಬಿಳಿಹಾಳೆಯೇ ಒಂದು ಸುಂದರ ಅದ್ಭುತ ಕವಿತೆ.....
-
ಗಂಡು ಹೆಣ್ಣಿನ ಕಡೆಯವರೆಂಬ ಹಮ್ಮಿರದೆ ವರದಕ್ಷಿಣೆ ವರೋಪಚಾರದ ಹಂಗಿರದೆ. ಹೆಣ್ಣಿನ ಕಡೆಯವರ ನೋಯಿಸದೆ. ಗಂಡಿನ ಕಡೆಯವರ ಬಿಂಕವಿರದೆ. ಸಂತೋಷ, ಸೌಹಾರ್ದ ಎಲ್ಲೆಲ್ಲೂ ತುಂಬಿತ್ತು. ಇಂದಿನ ತುಳಸಿ ವಿವಾಹ ಸಂಪನ್ನವಾಯಿತು
-
ಅಂದು ಇದನ್ನೆಲ್ಲ ಸವಿದ ನೆನಪು
ಜೀವನದಲ್ಲಿ ತಂದಿತ್ತು ಹುರುಪು
ಮುಂಚಿನಂತಾಗುವುದೇ ಜೀವನ?
ಇಲ್ಲದಂತಾಗುವುದೇ ಕೊರೋನ?
ಎಲ್ಲೆಡೆ ಓಡಾಡಬಲ್ಲ ಸಮಯ
ಅದಕ್ಕಾಗಿ ಕಾದಿದೆ ನಮ್ಮೆಲ್ಲರ ಹೃದಯ.-
ಕೇಳು ನೀನು ಬುದ್ಧಿಯ ನುಡಿಯ
ಕಣ್ಣಲ್ಲಿ ತೋರದಿರು ನೋವಿನ ಎಳೆಯ
ಬಂಧುಗಳ ಯಾವುದೇ ಮಾತಿಗೂ ನಗುವ ಬೀರು
ಬೈವರ ಮುಂದೆ ಸಹನೆಯ ತೋರು
ಆಡಿ, ಜರಿವರಿಗೆ ಸಾಧನೆಯೇ ಉತ್ತರವಾಗಿಸು
ಪ್ರೀತಿ, ವಿಶ್ವಾಸ ತೋರುವವರ ಮನದಲ್ಲಿ ನಂಬಿಕೆಯಾಗಿ ನೆಲೆಸು-
75ನೇ ಸ್ವಾತಂತ್ರ್ಯೋತ್ಸವ ಇಂದು
ಹೆಜ್ಜೆಯನ್ನಿಡೋಣ ಅಭಿವೃದ್ಧಿಯೆಡೆಗೊಂದು
ಜಾತಿ, ಮತ, ಧರ್ಮವ ಮರೆತು ಘೋಷಿಸೋಣ ನಾವು ಭಾರತೀಯರೆಂದು
ಇಂದು, ಮುಂದು, ಎಂದೆಂದೂ ಭಾರತೀಯರೆಂದು.-
-----ನನ್ನ ಕಡಿದೆ ನೀನೂ ಮಡಿದೆ------
ಎಂಥ ಕಾಲ ಬಂತು ನೋಡು
ಕ್ರಿಮಿಯು ತಂದ ಈ ಪಾಡು
ಹಚ್ಚ ಹಸಿರ ಒಡಲ ಬಗಿದೆ
ನಗರಕಾಗಿ ನನ್ನ ತೆಗೆದೆ
ನನ್ನ ಕಡಿದೆ ನೀನೂ ಮಡಿದೆ
ಉಸಿರ ಉಳಿಸೆ ಬೇಕು ಗಾಳಿ
ಬಿಡಲೇ ಇಲ್ಲ ನಿನ್ನ ಚಾಳಿ
ದೊಡ್ಡ ಮರವ ಕಡಿದು
ಸುಖದಿ ಇದ್ದೆ ತಿಂದು ಕುಡಿದು
ನನ್ನ ಕಡಿದೆ ನೀನೂ ಮಡಿದೆ
ಇಂದು ಬೇಕೆ ನಿನಗೆ ಆಮ್ಲಜನಕ
ಅಂದು ಕೊಡಲಿ ಪೆಟ್ಟು ಕೊಟ್ಟೆ ನನ್ನ ಬುಡಕ
ಪ್ರಾಣ ವಾಯುವಿಗೆ ಇಂದು ಹೋರಾಟ
ಇನ್ನಾದರೂ ಸಾಕು ಮಾಡು ನಿನ್ನ ಹಾರಾಟ
ನನ್ನ ಕಡಿದೆ ನೀನೂ ಮಡಿದೆ.
-Sri Raksha G Bhat
-
ಅಪ್ಪ ಕಟ್ಟಿದ್ದ ಪ್ರೀತಿಯ (ಅರ)ಮನೆ
ಅಮ್ಮ ಅನ್ನಪೂರ್ಣೇಶ್ವರಿಯಾಗಿದ್ದ ಸುರಮನೆ-
ವರ್ಷದ ಮೊದಲ ಹಬ್ಬ
ಎಳ್ಳು, ಬೆಲ್ಲದ ಜೊತೆ ಸವಿಯುವ ಕಬ್ಬ
ಆಡುವ ಒಳ್ಳೆಯ ಮಾತು
ಕಹಿ ಘಟನೆ, ನೋವನ್ನೆಲ್ಲ ಮರೆತು.-
ನಿದ್ದೆಯಿಂದ ಎದ್ದು ನೋಡಿದೆ
ಅಳುತ್ತಿದ್ದ ಮಗುವ ಕಾಣದೆ
ಅದರ ಧ್ವನಿಯ ಕೇಳದೆ
ನಿಲ್ಲುವಂತಾಯಿತು ನನ್ನೆದೆ
ತಂದೆಯ ತೋಳಲಿ ಅವನು ನಗುವುದ ನೋಡಿ
ನನ್ನೆ ನಾನು ಮರೆತೆ ಆದಂತೆ ಮೋಡಿ.-