ಬದುಕಿನ ಭರವಸೆಗಳು
ಕನಸುಗಳ ಕಣಜದಲಿ
ನೆನಪುಗಳ ಒಡ್ಡೊಲಗದಲಿ
ತೂಗಾಡುತಿದೆ ಆಶಯ
ಜ್ಞಾನದ ತೊಟ್ಟಿಲಾಗಲಿ
ಭರವಸೆ!!!!!
-
ಪ್ರತಿಸ್ಪರ್ಧಿಯಾಗಬಯಸುತ್ತೇನೆ
ಮೊನಲಿಸಾಳೊಂದಿಗೆ
ಸೌಂದರ್ಯದಲಿ...
ಹಣದಲ್ಲಾದರೆ
ಜಗತ್ತಿನ/ ದೇಶದ
ಕೋಟ್ಯಾಧಿಪತಿಯೊಡನೆ
ಬುದ್ಧಿಯಲ್ಲಾದರೆ
ಜಗತ್ತು ಕಂಡ
ಬುದ್ದಿಜೀವಿಯೊಡನೆ.....
-
ಗುಡ್ಡಗಾಡು ಮರಗಿಡಗಳಲಿ
ಹಕ್ಕಿಗಳು ಚಿಲಿಪಿಲಿಗುಟ್ಟುತ
ಪ್ರಕೃತಿಯಲ್ಲಿ ಸ್ವಚ್ಛಂದವಾಗಿ
ಹಾರಾಡುತ್ತಿದ್ದವು...
ಹೋರಾಡುತ್ತಿರಲಿಲ್ಲ.......-
ಜಾಹೀರಾತು!
ಖರೀದಿಸಲಾಗದ
ಆನಂದವನ್ನು
ಮಾರಲಾಗದ
ನೋವುಗಳನ್ನು
ವಿನಿಮಯದ
ರಿಯಾಯಿತಿಯೊಂದಿಗೆ
ಮಾರುಕಟ್ಟೆಯಲ್ಲಿ
ಮಾರುತ್ತಿದ್ದಾರೆ.....!!!-
ಕಂಬನಿಯ
ಸ್ಮರಣಿಕೆಯೊಳಗೆ
ಮರೆವಲ್ಲೂ ನೆನೆಪ
ಹೆಡೆಯೆತ್ತಿ ಬುಸುಗುಡುವ
ಕನಸುಗಳಿಗೆ ಅನಾಥ
ಬಡಪಾಯಿಯ
ಅನಾದರ ಅವಮಾನ.....-
ನಿನ್ನೆಯ ನೋವುಗಳು
ನಾಳೆಯ ನೆನಪಾಗಲಿ
ಹೊಸ ನೋವುಗಳು
ನಾಳೆಗಳ ಆಶಯವಾಗಲಿ
ಮರೆಯದ ನೆನಪುಗಳು
ಮರೆತ ಮಧುರ
ಯಾತನೆಯಾಗುತ
ನಿತ್ಯ ನೂತನ
ಮುಂಜಾವಿನ ಹಕ್ಕಿಯ
ಆಲಾಪನವಾಗಿ
ಬದುಕು ಬಂಗಾರವಾಗಲಿ.....-
ನಿನ್ನೆಗಳ ನೋವುಗಳು
ನಾಳೆಗಳ ನೆನಪಾಗಲಿ
ಹೊಸ ನೋವುಗಳು
ನಾಳೆಗಳ ಆಶಯವಾಗಲಿ
ಮರೆಯದ ನೆನಪುಗಳು
ಮರೆತ ಮಧುರ
ಯಾತನೆಯಾಗುತ
ನವನವೀನ ನಿತ್ಯನೂತನ
ಮುಂಜಾನೆಯ ಹಕ್ಕಿಯ
ಆಲಾಪವಾಗಿ
ಬದುಕು ಬೃಂದಾವನವಾಗಲಿ.....
-