ಒಳ ಹೊಕ್ಕಾಗಲೇ ತಿಳಿಯುವುದು ಅದೆಷ್ಟು ರಹಸ್ಯಗಳ ಗೂಡು ಇದು ಎಂದು....
-
ಮಲೆನಾಡಿನ ಸೊಬಗನ್ನು ಪ್ರತಿ ದಿನ ಕಣ್ಣ್ತುಂಬಿಕೊಳ್ಳೋ ಹುಡುಗಿ
ಮನಸಿನ ಮಾತ ಅರಿಯುವವರಾರು ಇಲ್ಲವೋ?
ಅಥವಾ ನಾನು ನನಗೇ ಅರ್ಥವಾಗುತ್ತಿಲ್ಲವೋ ?
ತಿಳಿಯದಾಗಿದೆ !!!-
ಪ್ರೀತಿಗಾಗಿ ಪ್ರೀತಿಯನ್ನು ಪ್ರೀತಿಸುವರ ಬಳಿ ಬೇಡುವ ಪರಿಸ್ಥಿತಿ ಯಾರಿಗೂ ಬಾರದಿರಲಿ.....
-
ಮನದಲ್ಲಿ ನಡೆಯುತ್ತಿರುವ ಸಾವಿರ ತೊಳಲಾಟವನ್ನು ಹೇಳಬೇಕೆನಿಸುತ್ತಿದೆ ಆದರೆ ಯಾಕೋ ಮನದಲ್ಲಿ
ಯಾರು ಅರ್ಥೈಸಿ ಕೊಳ್ಳುತ್ತಾರೆ?
ಎಂಬ ಪ್ರಶ್ನೆ ಮೂಡುತ್ತಿದೆ.-
ಸಹನೆ ಅನ್ನೋದು ಹೆಣ್ಣು ಮಕ್ಳಿಗೆ ಜಾಸ್ತಿ ಅಂತಾರೆ ಎಷ್ಟು ಸತ್ಯ ಅಲ್ವಾ,
ಎಷ್ಟೇ ನೋವಾದರೂ ಮತ್ತೆ ಪ್ರೀತಿಗಾಗಿ ಪರಿತಪಿಸುವವರು ಹೆಣ್ಣೇ ಅಲ್ವಾ-
ಅಂತರಂಗದ ಗೂಡಲ್ಲಿ
ನಾ ಕಂಡ ಕನಸು ನುಚ್ಚು ನೂರಾಗಿದೆ,
ಆದರೆ ಒಂದೇ ಒಂದು ಸಣ್ಣ ಬೆಳಕು
ಮತ್ತೆ ಕನಸ ಸಾಕಾರಗೊಳಿಸುವ
ಭರವಸೆ ಮೂಡಿಸುತ್ತಿದೆ.-
*ಸ್ವಂತಿಕೆ (ಯಾವುದೇ ಬರಹವಿರಲಿ ನಿಮ್ಮ ಭಾವನೆ ಮುಖ್ಯವೇ ಹೊರತು ಬೇರೆಯವರ ಬರೆದ ಬರಹದ ಕನ್ನಡಿಯಂತಿರಬಾರದು)
*ಭಾಷಾ ಹಿಡಿತ ಅಥವಾ ಶಬ್ಧಗಳ ಹಿಡಿತ (ಭಾಷೆಯಲ್ಲಿ ಸ್ಪಷ್ಟತೆ)
*ನಿರ್ಜೀವ ಪದಗಳಿಗೆ ಭಾವ ಕೊಡುವಷ್ಟು ಚಾತುರ್ಯ.
ಈ ಮೂರು ಗುಣಗಳಿದ್ದರೆ ಬರಹ ಅತ್ಯದ್ಭುತ-
ಪ್ರೀತಿಯ ಅರ್ಥ ತಿಳಿದಾಗ ತಾನೇ
ಕೋಟಿ ಹುಚ್ಚು ಕನಸುಗಳು
ಮನಸಿಗೆ ದಾಳಿ ಮಾಡೋದು!!-