My long waited hunger,
You are no food,A great feast
how can i leave you with untold truths and unfinished fantasies.
Time to select a couch
for us to jump and poach
Nothing in beholders darkeness
everything that i want in crystal clear bowl ,
to hold and gulp every bit in nude.
Crazy nights with hungry skins
candle lights and tasty wine,
lips to sip, hands to hold
whoelse wanna crave for more,
sweating long at cozy shore..-
ಹಾಲಿನ ನೊರೆ ಯಂತವನೆ..,
ನೋರೆಹಾಲ ಪ್ರೀತಿ ನಮ್ಮದು,
ತುಟಿ ತಾಗಿಸಿ ಪ್ರೀತಿ ಸವಿವ ಮುನ್ನವೇ,
ನೊರೆ ನಿನ್ನ ಅದರ ಸವಿದಿದೆ...
ಸನಿಹದಲ್ಲಿ ನೀ ಬಿಡುವ ಬಿಸಿ ಉಸಿರ
ತಾಗಿಗಾಗಿ ಕಾದು ನೋಡಿದೆ...
ನೊರೆಗುಳ್ಳೆ ಒಳಗೆಲ್ಲ ನಮ್ಮ ಪ್ರೀತಿ ಬಿಂಬವೆ..
ಮೇಲ್ನೊರೆ ನಮ್ಮ ಪ್ರೀತಿ ಪೀಠಿಕೆ..
ಸವಿದು ಓಡಿಬಿದು ಪೂರ್ತಿ ಪ್ರೀತಿ ಹೊತ್ತಿಗೆ...
ಹಾಲಿನ ಕೆನೆಯಂತವಳು..!!-
ಮಾತು ಖಾಲಿ ಆದಾವು
ಮಲ್ಲೆ ಗಂಧ ಸೂಸೋದು ಬಿಟ್ಟಾಗ!!
ಮುತ್ತು ಖಾಲಿ ಆದಾವು
ಮಳೆ ಬಯಲಿಗೆ ಮುತ್ತಿಡದಾಗ!!
ನಿನ್ನ ಸುತ್ತ ಸುತ್ತುವುದ ಬಿಟ್ಟೇನು
ರವಿಯ ಸುತ್ತ ಇಳೆ ಸುತ್ತುವುದ ಬಿಟ್ಟಾಗ!!
ನಿನ್ನನೇ ಮರೆತೇನು
ಕೊಟ್ಟ ಹೃದಯ ಬಡಿಯುವುದ ಮರೆತಾಗ!!-
ಪ್ರತಿಬಾರಿ ಇಳೆಗೆ
ಮಳೆ ಮುತ್ತಿಟ್ಟಾಗ
ಅವನಿಗೂ ಮುತ್ತಿನ
ಖಾತೆ ತೆರೆಯುವ ಹುಚ್ಚು
ನೆನೆದು ತಂಪಾಗ
ಬಯಸಿದರು
ಉಸಿರಿಗು ಚಳಿ
ತಾಗದಂತೆ
ಬಿಡದೆ ಭಾಹುಗಳಲ್ಲಿ
ಬಿಗಿದಪ್ಪಿದ್ದಕ್ಕೆ
ಭುವಿ ಮುಟ್ಟದೆ
ಬಿಸಿತಾಗಿ
ಮತ್ತೆ ಮೊಡಗಳಾಗಿ
ಬಾನು
ಸೇರಿದ ಮಳೆ
ಹನಿಗಳೆಷ್ಟೋ-
ಚಿಲಿಪಿಲಿ ಇದ್ದರೂ
ಗಾಳಿ ಮೌನಿಯಾಗಿದೆ..
ಮಳೆ ಹನಿತರು
ಇಳೆಯು ಮೌನ ತಳೆದಿದೆ..
ಅಲೆಯ ಆರ್ಭಟ ಮೀರಿಯೂ
ಕಡಲು ಮೂಕವಾಗಿದೆ..
ತಂಗಾಳಿ ಸೂಸಿಯು
ಮರಗಳು ಮಂಕಾಗಿವೆ..
ನೀನಿಲ್ಲದಿರೆ ಸುತ್ತಲಿನ ಪ್ರಕೃತಿಯೇ
ಮಾತು ಮರೆತಿದೆ ಗೆಳತಿ..
-
ಅದೆಷ್ಟು ಭಾವನೆಗಳ
ಅಸಂಖ್ಯಾತ ಕನಸುಗಳ
ಎಣಿಸಲಾರದ ಕ್ಷಣಗಳ ಹೂಡಿ
ತೆರೆದೇನೋ
ನಮ್ಮ ನಾಳೆಗಳಿಗಾಗಿ
ಒಲವ ಜಂಟಿ ಖಾತೆಯ
ಮಾತಲ್ಲಿ ಹೇಳಲಾರೆ
ಎದೆ ಆಳದ ನಷ್ಟವ
ಕಾಲಿ, ದಿವಾಳಿ ಎಂದು
ಜೊತೆಗಿದ್ದ ಕಣ್ಣೀರು ಸಹ
ಊರು ಬಿಟ್ಟಿದೆ
ಬಿಕ್ಕಳಿಕೆಯು ಜಾಗ ಕಾಲಿ ಮಾಡಿದೆ
ಕೊನೆಗೆ ಉಳಿದದ್ದು
ಮುದ್ದೆ ಮಾಡಿ ನೀನೆಸೆದ
ಅಂದೊಮ್ಮೆ ಸೇರಿ ರುಜು ಮಾಡಿದ ಒಲವೆಂಬ ಅರ್ಜಿ ಒಂದೇ
ಉರಿವ ಪ್ರೀತಿ ಬೆಳಕಿಗೇನು ಗೊತ್ತಿತ್ತು
ಅತಿಯಾದ ಪ್ರೀತಿ ತೈಲ
ಬತ್ತಿಯನ್ನೆ ತನ್ನೊಳಗೆ ಸೆಳೆದು
ಬೆಳಕ ನುಂಗ ಬಹುದೆಂದು..!!-
ನಾನೆಂದೂ ಊಹಿಸಿರಲಿಲ್ಲ,
ಸಾದಾ ಹಾಳೆ - ಲೇಖನಿಗಳು..!
ಅಟ್ಟದ ಕಾಲಿಗೊಡೆ..!
ಹಿತ್ತಲ ವರಟು ನೆಲ..!
ಮುಂಜಾವು ನಾ ಹಿಡಿದ ರಂಗೋಲೆ ಹಿಟ್ಟು..!
ಬಿಡಿಸಿಕೊಂಡ ಮದರಂಗಿ ..!
ಅಮ್ಮ ಆರಿಸೆ", ಎಂದು ಕೈ ಗಿಟ್ಟ
ಅಕ್ಕಿ ತುಂಬಿದ ಮರ...!
ಸುಮ್ಮನೆ ಹಗುರಾಗಿ ಕೇಳಿದ
ಯಾವುದೋ ಹಾಡು..!
ಈ ಎಲ್ಲದರಲ್ಲೂ ನೀನೇ ಮೂಡಿ
ಕಾಡ ಬಹುದೆಂದು..!!
ಜೀವವಿಲ್ಲದ ಸ್ನೇಹಿತರು
ಇಷ್ಟು ಆಪ್ತರಾಗುವರೆಂದು.. !!-
ಇಂತಹ ಒಬ್ಬನ/ಳ ಜೊತೆ ನಿಸ್ಸಂಕೋಚಾವಾಗಿ
ನಿಮ್ಮ ಕೆಲವು ಯಾರಿಗೂ ಹೇಳಲಾರದ
ಕಪ್ಪು ರಹಸ್ಯಗಳನ್ನ, ಮತ್ತವುದೋ
ಖಾಸಗಿ ಗೊಂದಲದ ವಿಷಯದ ಬಗ್ಗೆ ,
ಹೇಳಿಕೊಳ್ಳವಂತಹ ಸ್ವತ್ರಂತ್ಯ ಇಲ್ಲಿ
ಮಾತ್ರ ಸಿಗಬಹುದಾದ
ವಿಚಿತ್ರ ವಿಶೇಷ ವಿಷಯ (ಸಂಬಂಧ ಏನು ಕರೆಯಲಾರೆ) ಇದಾಗಿದೆ ...( ಸಂಬಂಧದಲ್ಲೆ ಬಂಧವಿದೆ ಇನ್ಯಲ್ಲಿ ಸ್ವಾತ್ರಂತ್ಯಕ್ಕೆ ಅವಕಾಶ)
ಅಡಿ ಬರಹ ಓದಿ-
ಹಣೆಯ ಮೇಲಿನ ಮುತ್ತಿನ ಹಸಿ
ಇನ್ನು ಹೋಗಿಲ್ಲ..
ನೀ ಸೋಕಿ ಆಡಿದ ಮುಂಗುರುಳ
ಸುರುಳಿ ಇನ್ನು ನೆಟ್ಟಗಾಗಿಲ್ಲ..
ಹೆಬ್ಬೆರಳ ಹಿಡಿದು ಗೀರಿ ಹೋದ
ಚಿತ್ರವಿನ್ನು ಮಾಸಿಲ್ಲ..
ನೆನಪೇ ಹಾಗೆ ಸತ್ತ ದೇಹಕ್ಕೂ,
ಸತ್ತ ಭಾವನೆಗಳಿಗೂ
ಜೀವ ತುಂಬಿ ಕ್ಷಣಕಾಲ ಕುಣಿಸಿ..
ಮನ ತಲ್ಲಣ ಗೊಳಿಸಿ..
ಮತ್ತೆ ನಿತ್ರಾಣಗೊಳಿಸಿ..
ಮುಗಿದೊಂದು ಕಥೆಯೊಳಗೆ ಕಥೆ ಹುಡುಕಿಸಿ..
ಮಾಸಿದ ಚಿತ್ರದಲ್ಲೂ ಏನೋ
ವಿಷಯವಿರಬಹುದೆಂಬ ಕಳ್ಳ ಕುತೂಹಲ ಹುಟ್ಟಿಸಿ..
ಅಲ್ಲೆಲ್ಲೋ ಕಾಂಕ್ರೀಟ್ ಕಟ್ಟಡದ
ಗೋಡೆ ಸೀಳಿ ಚಿಗುರುವ ಅರಳಿ ಎಲೆಯಂತೆ..
ನೀ ತೊರೆದೆ ಎಂದು
ಬಿರುಕು ಬಿಟ್ಟ ಎದೆ ಗೋಡೆ
ಇನ್ನು ನಿನ್ನ ಪ್ರೀತಿ ಚಿಗಿರಿಗಾಗಿ ಕಾಯುತಿದೆ ..-