ಸಂಜಯ್ ಗೌಡ   (ಸಂಜು)
259 Followers · 203 Following

ಅಆಇಈಉಊಋಎಏಐಒಓಔಅಂಅಃ..
#ಮೈಸೂರು
ಕನ್ನಡಿಗ
ಭಾವಜೀವಿ
ಕಲ್ಪನಾ‌ಕನಸುಗಾರ
ಕೊಂಚ ಮೌನಿ,ಕೊಂಚ ಯಾನಿ
Joined 21 November 2018


ಅಆಇಈಉಊಋಎಏಐಒಓಔಅಂಅಃ..
#ಮೈಸೂರು
ಕನ್ನಡಿಗ
ಭಾವಜೀವಿ
ಕಲ್ಪನಾ‌ಕನಸುಗಾರ
ಕೊಂಚ ಮೌನಿ,ಕೊಂಚ ಯಾನಿ
Joined 21 November 2018
5 NOV 2024 AT 12:14

ಒಬ್ಬ ವ್ಯಕ್ತಿ ಈ ಸಮಾಜದಲ್ಲಿ
ಉತ್ತಮ ವ್ಯಕ್ತಿತ್ವದೊಂದಿಗೆ
ಒಳ್ಳೆಯ ದಾರಿಯಲ್ಲಿ
ಸಾಗುತ್ತಿದ್ದಾನೆ ಎಂದರೆ ,
ಅದಕ್ಕೆ ಮುಖ್ಯ ಕಾರಣ
ಅವನಿಗೆ ವಿದ್ಯೆ
ಕಲಿಸಿದ ಗುರುಗಳು.
ಇಂತಹ ಶ್ರೇಷ್ಟಾತೆಯ
ಕಾಯಕದಲ್ಲಿ ತೊಡಗಿ,
ನಮ್ಮಂತ ನೂರಾರು
ವಿದ್ಯಾರ್ಥಿಗಳಿಗೆ ವಿದ್ಯೆ
ಕಲಿಸಿ ಜೀವನಕ್ಕೊಂದು
ದಾರಿ ತೋರಿದ
ನಿಮಗೆ ಕೋಟಿ ಕೋಟಿ
ನಮನಗಳು...
ಮೇಡಂ ನಿಮಗಿದೋ
ಹುಟ್ಟು ಹಬ್ಬದ ಶುಭಾಶಯ..
ಎಂದೆಂದಿಗೂ ನಗುತ
ಬಾಳಿರಿ ಇದೇ ನಮ್ಮ ಆಶಯ..

-


1 SEP 2024 AT 23:30

ಕಣ್ಣಂಚಿಗೆ ಕಾಡಿಗೆ ,,,,
ಮುಡಿಯಲ್ಲಿ ಮಲ್ಲಿಗೆ,,
ತೊಟ್ಟು ನೀ ನಿಂತರೆ,
ಮನವು ತೇಲಿದೆ
ಮರೆಯಲ್ಲೇ ಮೆಲ್ಲಗೆ......
ರೇಷ್ಮೆಯ ನೆರಿಗೆ ,,,
ಜೊತೆಯಾದರೆ ,
ಹಾಲ್ಗೆನ್ನೆಯ ಮೊಗಕ್ಕೆ...,,
ಈ ಸೊಬಗೆ ಸಾಕಲ್ಲವೇ ,,
ನಿನ್ನ ಕಾಣಬಯಸುವ ಈ ಕಣ್ಣಿಗೆ.....

-


14 JUN 2024 AT 10:03

....

-


18 FEB 2023 AT 22:54

ಅಂತರಂಗವು ಅರೆಘಳಿಗೆ ಮೌನವಾಯಿತು,
ಅವಳ ಕುಡಿ ನೋಟದ ಸೊಬಗಿಗೆ ಸೋತು...,
ಮನದ ಸಪ್ತಸಾಗರವು ಆಲಿಸಿದೆ ,
ಅವಳ ಕಣ್ಗಳ ಮೌನದ ಪಿಸುಮಾತು...

-


20 JAN 2023 AT 23:17

ಇಲ್ಲಿಯೂ ಇರದ, ಅಲ್ಲಿಯೂ ಸಿಗದ,
ಚಂದ್ರಮುಖಿ ಇವಳು,,,
ಸಂಜೆಯ ಲಾಲಿಗೂ, ಸಂಜಯನ ಸಾಲಿಗೂ,
ಅನುಬಂಧ ಇವಳು,,,,
ಅಂಬರ ಚುಂಬಿಸುವ ಕನಸುಗಳಿಗೆ,
ಅಭಿಸಾರಿಕೆ ಇವಳು,,,
ಅಂಬಿಗನಿಲ್ಲದ ಮನಸ್ಸಿಗೆ ಅಂಕುಶ,
ಹಾಕಿದವಳು ಇವಳು....,,

-


12 JAN 2023 AT 23:13

ಸುಂದರ ಕಣ್ಗಳ ಬೆಳದಿಂಗಳ ಬಾಲೆ,,
ನಿನಗಾಗಿ ನನ್ನ ಈ ಪ್ರೀತಿಯ ಓಲೆ ...
ನೀ ಒಂದು ಅದ್ಭುತ ಚಿತ್ರಕಲೆ ,,
ನಿನ್ನ ಕಣ್ಣಲ್ಲಿದೆ ಸೆಳೆಯುವ ಸೆಲೆ....
ನೀ ಅಂದದ ಮುಗಿಲ ಮಾಲೆ,,,
ನೀ ನನ್ನ ಕವನಗಳ ಸಾಲೆ....

-


31 DEC 2022 AT 19:44

ಅವಳೆಂದರೆ ,
ಕನಸಿಲ್ಲೂ ಮೂಡುವ ಕಲ್ಪನೆ..
ಅವಳೆಂದರೆ ,
ಮನಸ್ಸು ಮಿಡಿಯುವ ಭಾವನೆ..
ಅವಳೆಂದರೆ ,
ಹುಣ್ಣಿಮೆಯ ಚಂದ್ರನ ವರ್ಣನೆ..
ಅವಳೆಂದರೆ ,
ನನ್ನೆದೆಯ ವೀಣೆಯ ನುಡಿಸುವ ಮೌನ ದೇವತೆ..
ಅವಳೆಂದರೆ ,
ಕಾಗುಣಿತದಿಂದ ಮೂಡಿದ ಅಂದದ ಕವಿತೆ..
ಅವಳೆಂದರೆ ,
ಕತ್ತಲೆ ಕವಿದ ಮನವ ಬೆಳಗುವ ಹಣತೆ.....

-


29 DEC 2022 AT 23:14

ಸ್ವಪ್ನಗಳ ಹೊಸ ಖಾತೆಯನ್ನು
ತೆರೆದ ಅವಳ ಕಣ್ಗಳು...
ಮೌನದಲೇ ಹೊಸ ಭಾಷೆಯನ್ನು
ಬರೆದ ಅವಳ ಕಣ್ಗಳು....
ಬಣ್ಣಗಳ ಹೊಸ ಲೋಕವನ್ನು
ಸೃಷ್ಟಿಸಿದ ಅವಳ ಕಣ್ಗಳು.....
ಒಂದೇ ನೋಟದಲ್ಲೇ ನನ್ನ
ಸೆರೆಹಿಡಿದ ಅವಳ ಕಣ್ಗಳು....

-


22 DEC 2022 AT 6:42

ಮುಗಿಲಿನ ಮಳೆ ಹನಿ
ಸೇರುವುದು ಭೂಮಿಯನ್ನು...
ಈ ಹೃದಯದ ಪ್ರತಿ ಬಡಿತ
ಹೇಳುವುದು ನಿನ್ನ ಹೆಸರನ್ನು...
ಕಂಡಂತೆ ಕಂಡು
ಮಾಯವಾಗೊ ಮಿಂಚು ನೀನು.
ನಿನ್ನ ಮನಸಿನ ಆಗಸದಲ್ಲಿ ಪ್ರೀತಿಯ
ಬಣ್ಣ ಬಳೆಯುವ ಕಾಮನಬಿಲ್ಲು ನಾನು...

-


19 DEC 2022 AT 23:19

ನನ್ನೊಲವ ಪುಟದ ಮುನ್ನುಡಿ,
ನಿನ್ನ ಮೊಗದ ಕನ್ನಡಿ...

ನೀನುಡಿವ ಪ್ರತಿ ಅಕ್ಷರದಲ್ಲೂ,
ಕಾಣುವೆನು ನನ್ನೊಲವ ಸಾಲು.....

-


Fetching ಸಂಜಯ್ ಗೌಡ Quotes