ಅವಳು ಚಿಟಪಟ ಮಾತಿನ ಮಲ್ಲಿ...
ಮನಸ್ಸು ಹೂವಿನ ಹಾಗೆ, ಮುನಿಸು
ಮಾತ್ರ ಮೂಗಿನ ಮೇಲೆ.
ಕೋಪ ಇದ್ದರೂ ಕಣ್ ನೋಡಲು ಚೆಂದ.
ಹೂ ಎಂದರೆ ನನ್ನವಳಿಗೆ ಬಹಳ ಇಷ್ಟ,
ನನಗೆ ಹೂವಿನ ಜೊತೆ ಅವಳು ಇಷ್ಟ.-
ವಾದ ಮುಂದುವರಿಸಬಾರದು. ಹಗೆ ಸಾಧಿಸಬಾರದು. ಇದರಿಂದ ನಮ್ಮ ಹೃದಯ ಭಾರವಾಗುವುದಲ್ಲದೆ ಬೇರೇನೂ ಸಾಧನೆಯಾಗದು.
-
ಚಿಂತೆ ನಾಳೆಯ ಸಮಸ್ಯೆಯನ್ನು ಎಂದೂ ಪರಿಹರಿಸುವುದಿಲ್ಲ. ಆದರೆ, ಇವತ್ತಿನ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ.
-
ಖುಷಿಯ ಸಂದರ್ಭದಲ್ಲಿ ಕೈ ಕುಲುಕುವುದರಿಂದ ಸಂಬಂಧಗಳು ಅರಳುವುದಿಲ್ಲ. ಕಷ್ಟಕಾಲದಲ್ಲಿ ಕೈ ಹಿಡಿದಾಗ ಮಾತ್ರ ಅದು ಬೆಳಗುತ್ತದೆ.
-
ನಿಮ್ಮ ಕನಸುಗಳನ್ನು ನೀವು ಕಟ್ಟಿಕೊಳ್ಳದಿದ್ದರೆ, ಬೇರೆಯವರು ಅವರ ಕನಸು ಕಟ್ಟಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ.
-
ಅರ್ಥ ಮಾಡಿಕೊಳ್ಳವ ಮನಸು ಕ್ಷಮಿಸುವ ಗುಣ
ಕೈ ಜೊಡಿಸುವ ಸ್ನೇಹ ಸಮಾಧಾನ ಮಾಡುವ
ಹೃದಯ ಜೀವನಕ್ಕೆ ನಿಜವಾದ ಆಸ್ತಿಗಳು...!!
-
ಪ್ರಕೃತಿ ನಮಗೆ ಕೊಟ್ಟಿರೋದು ಎರಡೇ ಆಯ್ಕೆ
ಒಂದು ಕೊಟ್ಟು ಹೋಗಬೇಕು.
ಇನ್ನೊಂದು ಬಿಟ್ಟು ಹೋಗಬೇಕು.
ತೆಗೆದುಕೊಂಡು ಹೋಗುವ ಯಾವ
ಆಯ್ಕೆಯೂ ಇಲ್ಲ.....-
ಹುಡುಕಿದರೆ ಪ್ರತಿ ಮನೆಯಲ್ಲೂ
ಒಂದು ಕಥೆ ಸಿಗುತ್ತೆ.
ನಿಮ್ಮ ಮನೆಯೂ ಹೊರತಲ್ಲ
ಅದಕ್ಕೆ ಬೇರೆಯವರ ಮನೆಯ ಕಥೆ
ಕೇಳೋದನ್ನ ನಿಲ್ಲಿಸಿ.....-
ಸುಳ್ಳು ಹೇಳುವವರಿಗೆ
ಉಪಾಯ ಜಾಸ್ತಿ.
ಸತ್ಯ ಹೇಳುವವರಿಗೆ
ಅಪಾಯ ಜಾಸ್ತಿ.-
ಈ ಪ್ರೀತಿ ಪ್ರೇಮ
ಸೆಂಟಿಮೆಂಟ್
ಎಮೋಷನಗಳೆಲ್ಲಾ
ಆ ಕ್ಷಣದ ಸತ್ಯಗಳಷ್ಟೇ
ನಿಜವಾದ ಸತ್ಯ ಜೀವನ....!!-