ಸಂದೀಪ ಶೆಟ್ಟಿ   (ಸಂದೀಪ ಶೆಟ್ಟಿ ಕೆರಾಡಿ)
12 Followers · 9 Following

Joined 15 January 2020


Joined 15 January 2020

ಹೋಲಿಕೆಗಳನ್ನು ಮೆಚ್ಚಿಕೊಳ್ಳುವುದು ಮತ್ತು ವ್ಯತ್ಯಾಸಗಳನ್ನು ಗೌರವಿಸುವುದು ಒಂದು ಅದ್ಭುತ ಬಾಂಧವ್ಯದ ಸಂಕೇತ🥰😍

-



ಸೋಲು ಯಾರಿಗೂ ಶಾಶ್ವತ ಅಲ್ಲ;
ಇಂದಲ್ಲ ನಾಳೆ ಗೆದ್ದೇ ಗೆಲ್ಲುವೆ...
ಸೋತಾಗ ಮೌನವೇ ಅಂದ;
ಗೆದ್ದಾಗ ಮಾತೇ ಚಂದ...

-



"ಯಾರಿಗೆ ಯಾರು ಈ ಜಗದಲಿ...
ಸಮಯದ ಸಂಧಿಯೊಳಗೆ ಬಂಧಿಯು ಮನುಜನು..."

-



ಒಬ್ಬ ವ್ಯಕ್ತಿಯ ನಿಜವಾದ ಸಾಮರ್ಥ್ಯ ತಿಳಿಯುವುದು ಕಷ್ಟಗಳು ಬಂದಾಗ;
ಪ್ರತಿ ಕಷ್ಟವೂ ನಮ್ಮನ್ನ ಮಾನಸಿಕವಾಗಿ,ದೈಹಿಕವಾಗಿ,ಭೌತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮತ್ತಷ್ಟು ಬಲಪಡಿಸುತ್ತದೆ.

-



ನಮ್ಮನ್ನ ಯಾರು ಪ್ರೀತಿಸ್ತಾರೋ..
ಅವರ ಜೊತೆ ಜೀವನ ಮಾಡ್ಬೇಕೇ ಹೊರತು...
ನಾವು ಪ್ರೀತಿಸೋರ ಜೊತೆ ಬಲವಂತವಾಗಿ ಅಲ್ಲ....

-



"-ಆಕಾಶದ ನೀಲಿಯಲ್ಲಿ..
ಚಂದ್ರತಾರೆ ತೊಟ್ಟಿಲಲ್ಲಿ..
ಬೆಳಕನಿಟ್ಟು ತೂಗಿದಾಕೆ..
ನಿನಗೆ ಬೇರೆ ಹೆಸರು ಬೇಕೇ..
ಸ್ತ್ರೀ ಅಂದರೆ ಅಷ್ಟೇ ಸಾಕೇ!!!-"

-



"ಮಹಾತ್ಮನೂ ಕೂಡ
ಹೆಣ್ಣಿನೆದೆಯ ಮೇಲೆ
ಅಸಹಾಯಕ ಹಸುಗೂಸು"

-



"ಕಷ್ಟ-ನಷ್ಟ-ಇಷ್ಟಗಳೆಂಬ
ಅನುಭವವೇ ಮುಂದಿನ
ಜೀವನಕ್ಕೆ ದಾರಿದೀಪ"

-



"ಭತ್ತದ ತೆನೆಯ ಹೊರೆ ಸಡಿಲಗೊಂಡಷ್ಟು
ಅದನ್ನು ದೂರ ಹೊತ್ತು ಸಾಗುವುದು ಕಷ್ಟ;
ಹಾಗೆಯೇ ಮನಸ್ಸಿನ ಭಾವನೆಗಳ ಹೊರೆ ಸಡಿಲಗೊಂಡಷ್ಟು ಬದುಕಿನ ದಾರಿ ದುರ್ಗಮವಾಗುವುದು;
ಅದಕ್ಕಾಗಿ ಭಾವನೆಗಳ ಹೊರೆಯನ್ನು ಬಿಗಿಯಾಗಿ ಕಟ್ಟಿಡಿ..."

-



'ಕಾಯಕವೇ ಕೈಲಾಸ' ಎಂದು ಬದುಕಿದವರು..
'ಗಂಜಿ'ಯನ್ನೇ ನಂಬಿ ದುಡಿದವರು..
ಬದುಕಿನುದ್ದಕ್ಕೂ ಕಷ್ಟವನ್ನು ಪಂಚೆ-ಸೆರಗಲ್ಲೇ ಗಂಟಿಕ್ಕಿದವರು..
ಜೀವನದ ಪಾಠ ಹೇಳಿಕೊಟ್ಟವರು..
ನೋವಲ್ಲೂ ನಗುವನ್ನು ಮರೆಯದವರು..
"ನಮ್ಮ ಹೆತ್ತವರು"

-


Fetching ಸಂದೀಪ ಶೆಟ್ಟಿ Quotes