SK Algudkar   (Sripad Algudkar✍️❣️)
756 Followers · 539 Following

read more
Joined 20 March 2021


read more
Joined 20 March 2021
AN HOUR AGO

Silence prevails
In the darkest moments
Shadows of Pain covers
The flowing sentiments
Blurry Eyes Sketch stormy
Weather hiding inside

-


AN HOUR AGO

एक छलांग कि उड़ान भर दिया है
जिंदगी जीने का बयान कर दिया है ।

हमारी संतति बचाने का प्रयास किया है
छोटी सी बातों को आप तक पहुंचा दिया है ।

इत्ती सी जान जीने कि दरख्वास्त किया है
प्रकृति के समातोलन बचाने का वादा किया है ।

-


2 HOURS AGO

ಮನದ ಕತ್ತಲೆಯ ಓಡಿಸಲು
ಬೆಳಕಿನ ಆಸರೆಯ ಪಡೆಯಲು
ಎದೆಯಲಿ ಮೂಡಿಸಿದ ಪದಗಳ
ಮೆಲುಕು ಹಾಕುತ ಹೃದಯ ಪಯಣಿಸಿದೆ

ಮನದಲಿ ಗೀಚಿದ ಪದಗಳ
ಭಾವನೆಯ ಸೂರಿನಲ್ಲಿ ಸಂಚರಿಸಿ
ಕವಿತೆಯ ಸಾಲಿಗೆ ಹನಿಗಳ ಬಿತ್ತರಿಸಿ
ಹೃದಯದ ಕೋಲಾಹಲ ಅಡಗಿಸಿದೆ

-


18 HOURS AGO

ಭಾವನೆಗಳ ಅದುಮಿಟ್ಟು ದಿಟ್ಟತೆಯ ತೋರದೆ
ಸಾಧನೆಯ ಸಾಧಿಸುವ ದಿಟ್ಟ ಗುರಿಯಿರದೇ
ಅಸಾಧ್ಯವೆಂಬ ಪದವ ಬಣ್ಣಿಸುವುದು ಸುಲಭವೇ
ಮನದ ಸೂರಿನಲ್ಲಿ ಸಂಚರಿಸಿ ವ್ಯಾಪಿಸುತ
ಗುರಿಕಾರನಂತೆ ಎದೆಗುಂದದೆ ಮೆಟ್ಟಿಲು ಹತ್ತುತ್ತಾ
ಛಲವೆಂಬ ಖಡ್ಗವನ್ನು ಝಳಪಿಸಿ ಮುನ್ನಡೆಯಬೇಕು

-


18 HOURS AGO

ಎಡವಿದ ಮನಸ್ಸಿಗೆ ಶಾಂತಿಯ ಸಂಕೋಲೆ
ಮನದಲಿ ಹೊಡೆದಾಡುವ ಭಾವಗಳಿಗೆ ವಿರಾಮ
ತುಂತುರು ಹನಿಗಳು ಬಿಟ್ಟ ಇಬ್ಬನಿಯ ತಂಪು
ಸುತ್ತಲೂ ಘಮಿಸುವ ಮಣ್ಣಿನ ಸುಗಂಧದ ಕಂಪು

-


19 HOURS AGO

ಬೀಸುವ ತಂಗಾಳಿಗೆ ಮೈಯೊಡ್ಡಿ
ಹರಿವ ನೀರಿನ ಕಲರವ ಆಲಿಸಿದೆ
ಏಕಾಂತದ ಎದೆಯಲಿ ಪ್ರೀತಿಯ
ಪದಗಳನು ಕರೆದು ನೆನಪಿಸಿ
ಘಮದ ಉಸಿರಿನ ಪರಿಮಳ
ಒಲವಿಗಾಗಿ ಗಾಳಿಯಲಿ ತೇಲಿಸಿದೆ
ಮೃದು ಕೆನ್ನೆಗೆ ಮುತ್ತಿನ ಮಳೆಯ
ಸುರಿಸಲು ಪ್ರೀತಿಗೆ ಆಹ್ವಾನಿಸಿದೆ

-


19 HOURS AGO

ತೆರೆದ ತೋಳಿನಿಂದ ಆದರಿಸಿ
ಪ್ರೀತಿಯ ಸೇತುವೆಯ ಕಟ್ಟಿದೆ
ಹೃದಯದ ಹೆದ್ದಾರಿಯಲ್ಲಿ
ಒಲವಿನ ತೆರಿಗೆಯ ನೀಡಿದೆ
ಬೆಳಕಾಗುವ ಮನಸಿಗೆ
ಕತ್ತಲೆಯ ಕವಿದು ವಿರಹದ
ಗೀತೆಯ ಹಾಡುತ...
ನೀನೇಕೆ ದೂರವಾದೆ

-


4 JUL AT 16:08

ಮೌನದಿಂದಲೇ ಅವಲೋಕಿಸಿ
ಭಾವನೆಗಳ ಸಾಗರದಲ್ಲಿ ತೇಲಿಸಿ
ನನಸಾಗದ ಕನಸುಗಳ ತಬ್ಬಿಕೊಂಡು
ಅಲೆಮಾರಿಯಂತೆ ಮುಕ್ತವಾಗಿ ಮಾತನಾಡಿಸು

-


4 JUL AT 15:44

मोहब्बत का असर धीरे धीरे हो जायेगा
लेकिन उसका नशे का असर बारी बारी बारिश हो जायेगा

-


4 JUL AT 14:56

दिल को जख्मी करके इश्क कि खंजर से लड़ेगी
शब्दों कि फूलों को जोड़कर मोहब्बत कि ऐतबार करो

-


Fetching SK Algudkar Quotes