Sindhu M Siddapura   (ಮೌನ ಹೃದಯ)
259 Followers · 45 Following

ಭಾವನೆಗಳ ಬಸಿರೋಳಗೆ ಜನನಿಸಿದ ಕಂದಮ್ಮಗಳೇ
ನನ್ನ ಬರಹಗಳು.... ✍🏽✍🏽
Joined 5 December 2018


ಭಾವನೆಗಳ ಬಸಿರೋಳಗೆ ಜನನಿಸಿದ ಕಂದಮ್ಮಗಳೇ
ನನ್ನ ಬರಹಗಳು.... ✍🏽✍🏽
Joined 5 December 2018
13 APR AT 15:23

ತಾನಚ್ಚಿದ ಬೆಂಕಿಯೊಳಗೆ
ಇನ್ನೊಬ್ಬರನ್ನು ಸುಡಲು ಇಚ್ಛೆಸಿದವನು
ಮುಂದೊಂದು ದಿನ ಅದೇ ಬೆಂಕಿಯಲ್ಲಿ
ತಾನೇ ಸುಟ್ಟು ಹೋಗುವನೆಂದು ಮರೆತು
ಮೆರೆದಾಡುತಿಹನು..
Sindhu M Siddapura

-


9 APR AT 11:26


ಯುಗಾದಿಯ ಹೆಸರೇ ಹೇಳುವಂತೆ
ಯುಗದ ಆದಿ.. ಹೊಸ ಸಂವತ್ಸರ
ಬ್ರಹ್ಮದೇವನು ಈ ದಿನದಂದೇ
ಸೃಷ್ಟಿ ಪ್ರಕ್ರಿಯೆ ಆರಂಭಿಸಿದ ಸುದಿನ....

ಸೂರ್ಯನ ಹುಟ್ಟು ಸಡಗರ ತಂದಿದೆ
ಪ್ರಕೃತಿಯ ಎಲೆ ಎಲೆಗೂ ಹಚ್ಚ ಹಸಿರು
ಬರಹದ ಬಳಕೆಗೆ ಶಬ್ದವೇ ಸಾಲದು
ಬೆಳಗನು ಬಣ್ಣಿಸಲು.....

ಬೇವು ಬೆಲ್ಲದ ಸಮಗಮದಲ್ಲಿ
ಖುಷಿಯನ್ನು ಅಂಚಿ ಪಡೆಯೋಣ
ತಿಳಿ ತಂಪಿನ ಬೆಳದಿಂಗಳಲ್ಲಿ
ನಾ ಮುಂದೆ ತಾ ಮುಂದೆ ಎಂದು
ಚಂದ್ರನ ಹುಡುಕೋಣ....

ಬಾನಂಗಳದಲ್ಲಿ ಕಂಡ ಚಂದ್ರನಿಗೆ
ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದು
ಬೇವು ಬೆಲ್ಲ ಅಂಚಿ ಶುಭ ಹರಸಿ
ಪ್ರೀತಿಯಿಂದ ಬಾಳೋಣ......

ಸಿಂಧೂ. ಎಮ್. ಸಿದ್ದಾಪುರ.

-


28 MAR AT 13:12

ಪ್ರತಿಬಾರಿಯು ಮೌನವು
ಮಾತನಾಡಲು ಅಂಬಲಿಸುತ್ತೆ...
ಅಂಬಲಿಸುವ ಪ್ರತಿ ನಿಮಿಷಕ್ಕೂ
ಮೌನ ಮೌನವಾಗಿಯೇ ಉಳಿಯುತ್ತೆ
ಕಾರಣ ಮೌನವು ಸಹ ಒಂದು ಭಾಷೆ
ಅರ್ಥಮಾಡಿಕೊಳ್ಳಬೇಕಷ್ಟೇ....
Sindhu M Siddapura

-


25 MAR AT 10:42

ವರುಷಕ್ಕೊಮ್ಮೆ ಬಣ್ಣ ಹಚ್ಚಿಕೊಂಡು
ಆಟ ಆಡಿ
ಪ್ರತಿನಿತ್ಯ ಬಣ್ಣದ ಮುಖವಾಡವನ್ನು
ಧರಿಸಿ ಇನ್ನೊಬ್ಬರ ಜೀವನದ ಜೊತೆ ಆಟವಾಡಬೇಡಿ...
Sindhu M Siddapura

-


16 MAR AT 13:37

ಅದೆಷ್ಟೋ ಮಾತನಾಡುತ್ತಿದ್ದವಳು ನಾನು
ಈಗಂತೂ ಸುಮ್ಮನಾಗಿರುವೆ
ನನ್ನವನ ಕರುಣೆಯ ಪ್ರೀತಿಗೆ
ಮಾತು ಬಾರದಾಗಿ ಕಣ್ಣುಗಳು ತುಂಬಿದೆ
Sindhu M Siddapura

-


8 MAR AT 10:38

ಅವಳು :-

ಅವಳಲ್ಲಿ ಅಡಗಿದೆ ನೂರಾರು ಅಳಲು.
ಕೇಳುಗರ ಮನಕೆಲ್ಲವೂ ಅವಳು ದನಿಯಾದಳು
ಅರಸಿ ಬಂದವರಿಗೆಲ್ಲ ಹರಸಿ ಆಶೀರ್ವದಿಸಿದಳು
ನೂರಾರು ನೋವಿನೊಳಗೆ ನಗುವನ್ನು ಚೆಲ್ಲುವಳು.

ಅಮ್ಮನಾಗಿ ಬಂದಳು
ಅಕ್ಕರೆಯ ಅಕ್ಕಳಾಗಿ ನಿಂತಳು
ತಂಪಿನ ತವರಿಗೆ ತಂಗಿಯಾಗಿ ಬಂದ ಬೆಸೆದಳು
ಮಮತೆಯ ಮಗಳಾಗಿ ಜನಿಸುವವಳು
ಕಣ್ಣಿರೋರೆಸಿ ಅಪ್ಪುವ ಸ್ನೇಹಿತೆಯಾಗಿಹಳು
ಒಂದಲ್ಲ ಎರಡಲ್ಲ ಬಹುಮುಖ ರೂಪ ಅವಳದು

ಸಲ್ಲದ ಅಪವಾದಗಳನ್ನು ಎದುರಿಸುವವಳು
ಕಾಣದ ಮೋಸದ ಆಟಗಳಿಗೂ ತುತ್ತಾಗುವಳು
ಅದೆಷ್ಟೋ ಬಾರಿ ನ್ಯಾಯಾಲಯದಲ್ಲೂ ನ್ಯಾಯ ಸಿಗದೇ ಹೋಗುವಳು
ಎಲ್ಲವನ್ನು ಸಹಿಸಿ ಸದೃಢವಾಗಿ ಎದೆಗುಂದದೆ ನಿಲ್ಲುವಳು

ಬರೆಯುತ್ತ ಹೋದಷ್ಟು ಪದಗಳಿಗೂ ಸಿಗಳು
ವರ್ಣಿಸುತ್ತ ಹೋದಷ್ಟು ವರ್ಣನೆಗೂ ಸಿಗಳು
ನೊಂದು ಬೆಂದು ಬೇಸತ್ತು ಹೋಗಿದ್ದು ಸಾಕವಳು
ಈ ಒಂದು ದಿನಕ್ಕೆ ಸೀಮಿತವಾಗದಿರಲಿ ಅವಳ ಬದುಕು.


✍🏽 ಸಿಂಧೂ ಎಮ್ ಸಿದ್ದಾಪುರ....

-


29 JAN AT 11:00


ಬೆಳದಿಂಗಳಲ್ಲಿ ಚಂದ್ರಮನ ಕಳುವಾಯ್ತು
ಮುಂಜಾನೆ ಮಬ್ಬಲ್ಲಿ ನಮ್ಮನೆಗೆ ಸೊಸೆಯಾಯ್ತು
ನಕ್ಷತ್ರ ಹುಡುಕಿ ಭುವಿವರೆಗೂ ಬಂದಿತ್ತು
ಮರಳಿ ಹೋಗಲಾರದೆ ಇವಳ ಕಣ್ಣ ಹೊಳಪಾಯ್ತು

ಕಾಮನಬಿಲ್ಲದುವೆ ಬಂಕವನೇ ಮರೆತಿತ್ತು
ಮರೆತ ಕಾರಣ ಇವಳ ಹುಬ್ಬೊಳಗೆ ಅಡಗಿತ್ತು
ಭಾಸ್ಕರನ ಕಿರಣದಲ್ಲಿ ಹೊಂಬಣ್ಣ ಮಸುಕಿತ್ತು
ಹೇಳದಿರಿ ಯಾರಲ್ಲೂ ಇವಳ ಕೆನ್ನೆಗೆ ಒರಗಿತ್ತು

ಮುಂಜಾನೆ ಇಬ್ಬನಿ ಮುತ್ತುಗಳು ಲೆಕ್ಕಕ್ಕೆ ಸಿಕ್ಕಿತ್ತು
ಎಣಿಸಲಾಗದ ಮುತ್ತಿನ ರಾಶಿ ಇವಳ ನಗುವೊಳಗಿತ್ತು
ಗಡಿಗಿಂತ ಬಂದುಬಸ್ತು ಇವಳ ಕಣ್ಣಿಗೆ ಬೇಕಾಗಿತ್ತು
ಸಾಲಾಗಿ ನಿಂತ ಸೈನಿಕರ ಎಣಿಸಲು ಕಷ್ಟವಾಗಿತ್ತು

ಮುತ್ತಂತ ಮುತ್ತು ಜನ್ಮ ಪಡೆದ ದಿನ ಇವತ್ತು
ನಿಂತ ಪದಮಾಲೆ ಇವಳಿಗಾಗಿ ಶುರುವಾಯ್ತು
ಹರಸುವೆ ಮನದಿಂದ ನಗುತಿರು ಯಾವತ್ತು
ತುಸು ಕೋಪ ಬಿಟ್ಟು ಅಮ್ಮನಿಗೆ ಖುಷಿ ನೀಡು
ಅದೇ ನಿನಗೆ ದೊಡ್ಡ ಸಂಪತ್ತು.

Happy Birthday ಮಗಳೇ.... 💙

-


18 JAN AT 17:13

ಎಷ್ಟೇ ಸುಂದರ ಗಮನ ಸೆಳೆಯುವ
ನೋಟವಾಗಿದ್ದರು
ನಿಮಗೇ ನೋವುಂಟು ಮಾಡುವ
ಕಿಟಕಿಯನ್ನು ಮುಚ್ಚಿಬಿಡಿ..

Sindhu M Siddapura

-


18 JAN AT 12:14

ಎಲ್ಲರ ಬಳಿಯೂ ವಿಭಿನ್ನ
ಗಡಿಯಾರಗಳಿವೆ
ಆದರೆ
ಅವರ ಸಮಯಕ್ಕೆ ಕಾಯಬೇಕಷ್ಟೆ...
Sindhu M Siddapura

-


13 JAN AT 11:09

When you keep your self
Silent you are the best person
In the world..
When you rise the question
You are the worst kind of
Person...
Any way people will always decides
There own way...
But you must be go in your way.... ✌🏽
Sindhu M Siddapura

-


Fetching Sindhu M Siddapura Quotes