Sindhu India  
33 Followers · 4 Following

read more
Joined 30 March 2018


read more
Joined 30 March 2018
5 SEP 2024 AT 14:01

ಅಂಧಕಾರಕ್ಕೆ ದೀವಿಗೆ ಹಿಡಿದಂತೆ,
ಕುಸುಮವು ಅರಳಿ ನಗು ಚೆಲ್ಲಿದಂತೆ,
ಶಿಲ್ಪಿಯು ಕೆತ್ತುವ ಸುಂದರ ಶಿಲೆಯಂತೆ,
ಸಸಿಯು ಚಿಗುರಿ ಮರವಾಗಿ ನೆರಳಾದಂತೆ,
ತಂಗಾಳಿಯು ಬೀಸಿ ಕಂಪನ್ನು ಸೂಸುವಂತೆ,
ಬಿಲ್ಲಿಂದ ಹೊರಟ ಬಾಣ ಗುರಿ ಮುಟ್ಟಿದಂತೆ..

🎉🎊 ಬದುಕಿನ ಬಗ್ಗೆ ಬದುಕಲು ಹೇಳಿ ಕೊಡುವ
ಎಲ್ಲಾ Teachersಗೂ Happy Teacher's Day 😊 💐🌹 - $indhu (5/Sep/2024)

-


14 AUG 2024 AT 23:04

" ಭವ್ಯ ಭಾರತ ಕಟ್ಟೋಣ "

ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ,
ಶಾಂತಿ - ಸಹಬಾಳ್ವೆಯಂಬ ಹೂವನ್ನು ಚೆಲ್ಲಿ,
ಹುತಾತ್ಮರ ಭವ್ಯ ಭಾರತದ ಕನಸ್ಸಿನಲ್ಲಿ,
ಏಕತೆ - ಸಮಾನತೆಯಂಬ ಪತಾಕೆಯು ಹಾರಾಡಲಿ..

ದೇಶಕ್ಕಾಗಿ ದುಡಿವ ಸರ್ವರಿಗೂ ನಮಿಸುತ್ತಾ,
ಸತ್ಯ - ಪ್ರೀತಿಯ ಬೆಳಕನ್ನು ನಿತ್ಯ ಬೆಳಗುತ್ತಾ,
ಸಂಸ್ಕೃತಿ - ಸಂಸ್ಕಾರವ ಎಲ್ಲರಲ್ಲೂ ಹರಡುತ್ತಾ,
ಸುಂದರ - ಸುಭದ್ರವಾದ ಸಮಾಜವ ಕಟ್ಟೋಣ..
ಬನ್ನಿ, ಗೆಲುವಿನ ಚಪ್ಪಾಳೆ ತಟ್ಟೋಣ..
-$indhu
(15/Aug/2024)

-


13 AUG 2024 AT 15:54

ಕನಸ್ಸೆಂಬ
ಕಗ್ಗತ್ತಲ ಕಾನನದಲ್ಲಿ
ಕಾಣದ, ಕೇಳದ ಕೂಗಿಗೆ
ಕಳವಳದಿ ಕೊಸರಾಡುತ್ತಾ ಕಂಗೆಟ್ಟು ಕನವರಿಸಿದೆ..

-


13 AUG 2024 AT 14:37

ನೀ
ನನ್ನ
ತೊರೆದು
ಹೋಗದಿರು...!

-


13 AUG 2024 AT 13:48

"ಪರಿಶ್ರಮದ ಪರಿವರ್ತನೆ"

ಕಲ್ಲು, ಉಳಿ ಪೆಟ್ಟು ತಿನ್ನದೆ ಶಿಲೆಯಾಗದು;
ಬಟ್ಟೆ, ಚುಚ್ಚಿ ಹೊಲಿಯದೆ ಉಡುಪಾಗದು;
ಕಬ್ಬಿಣ, ಕುಲುಮೆಯಲ್ಲಿ ಬೇಯ್ಯದೆ ಆಯುಧವಾಗದು;

ಲೋಹ, ಶುದ್ಧೀಕರಣವಾಗದೆ ಆಭರಣವಾಗದು;
ಹಾಲು, ಸಂಸ್ಕರಣವಿಲ್ಲದೆ ತುಪ್ಪವಾಗದು;
ಕಬ್ಬು, ಆಲೆಮನೆಯಲ್ಲಿ ಕುದಿಯದೆ ಬೆಲ್ಲವಾಗದು;

ಜವಾಬ್ದಾರಿ ಹೊರದೆ ಬದುಕಿನ ಸಾರ ತಿಳಿಯದು;
ಕಷ್ಟ ಪಟ್ಟು ಗುರಿ ಮುಟ್ಟದೆ ಗೆಲುವು ದೊರೆಯದು;
ಪರಿಶ್ರಮವೇ ಪರಿವರ್ತನೆಯ ಜಗದ ನಿಯಮ ಬದಲಾಗದು....
-$indhu
(12/Aug/2024)

-


9 AUG 2024 AT 12:13

!ಕಾರಣ!

ಇಂದಿನ ನಮ್ಮ ವರ್ತನೆಗೆ..
ನಾಳೆಯ ಚಿಂತೆಯ ಜೊತೆಗೆ -
ನೆನ್ನೆಯ ಅಭಿಪ್ರಾಯ - ಅನುಭವ,
ಹಾಗೂ ಭಾವನೆಗಳ ಪ್ರಭಾವ!
ಪ್ರೀತಿ ನಂಬಿಕೆ ಮೇಲೆ,
ನಂಬಿಕೆ ಸತ್ಯದ ಮೇಲೆ,
ಸತ್ಯ ದಿಟ್ಟತನದ ಮೇಲೆ ನಿಂತಿದೆ.
ಸುಳ್ಳು ಪ್ರಿಯವಾದರೆ ಪ್ರೀತಿ ಸುಳ್ಳಾಗಿರುತ್ತದೆ!
ಸುಗಂಧ ಬೀರುವ ಹೂವಿನ ಕಂಪಿನಲ್ಲಿ,
ಗಿಡದ ಕೆಳಗೆ ಕೊಳಕಿದ್ದರೆ ಏನು ಅಂದಾ?
ವ್ಯಕ್ತಿ ಒಳ್ಳೆಯವನಾದರೂ ನೆಡೆ-ನುಡಿಯಲ್ಲಿ,
ಅಹಂ-ಸ್ವಾರ್ಥದ ಕೊಳಕಿದ್ದರೆ ಏನು ಚಂದಾ?!
-$indhu
(9/Aug/2024)

-


8 AUG 2024 AT 12:22

"ಸಂಸ್ಕಾರ"

ಆಗತಾನೇ ಕರೆದಿಟ್ಟ ನೂರೆ ಹಾಲಿನಂತೆ ಗುಣ,
ಜನ್ಮದತ್ತವಾಗಿ ಕೊಬ್ಬಿರುವ ಬಿಳಿಯ ಬಣ್ಣ;

ಕೆನೆ ಬರಿತ ಹಾಲನ್ನು ಕುದಿಸಿ ಆರಿಸುವಂತೆ,
ವ್ಯಂಗ್ಯ-ಟೀಕೆಯ ಸ್ವೀಕರಿಸಲು ಸಲ್ಲದು ಚಿಂತೆ;

ಕೊಬ್ಬಿರುವ ಹಾಲು ಮೊಸರಾಗಲು ಹೆಪ್ಪು,
ಅಹಮ್ಮಿನಲ್ಲಿ ಅವಮಾನವ ಅಲಕ್ಷಿಸುವುದೇ ತಪ್ಪು;

ತೆಗೆಯಲು ಬೆಣ್ಣೆ ಕಡಿಯಬೇಕು ಮೊಸರನ್ನ,
ಕಷ್ಟದಲ್ಲಿ ಮನಸ್ಸಾಗಬೇಕು ಚಿಂತನ-ಮಂಥನ;

ಬೆಣ್ಣೆಯ ಕುದಿಸಿ, ಕರಗಿಸಿದರೆ ತುಪ್ಪವಾದೆ,
ದುಃಖದಿ ಬೆಂದು-ನೊಂದ ವ್ಯಕ್ತಿತ್ವವು ಸಂಸ್ಕಾರಯುತವಾದೆ....
-$indhu
(8/Aug/2024)

-


7 AUG 2024 AT 10:27

ಬರವಣಿಗೆ ನನ್ನದಲ್ಲ, ಲೇಖನಿ ನಾನಲ್ಲ, ಶಾಹಿ ನನಗಿಲ್ಲ;
ಕವನ ನನ್ನದಲ್ಲ, ಕವಿಯು ನಾನಲ್ಲ, ಪದಗಳ ಹಂಗು ನನಗಿಲ್ಲ;
ಜ್ಞಾನ ನನ್ನದಲ್ಲ, ಜ್ಞಾನಿ ನಾನಲ್ಲ, ಜ್ಞಾನಬಂಡಾರ ನನಗಿಲ್ಲ;

ಮರದಲ್ಲಿ ಹುಟ್ಟಿ, ತೊಗಟೆಯ ಕಿತ್ತು, ಕುಟ್ಟಿ ಪುಡಿಯಾದೆ;
ಹಸಿಯು ಒಣಗಿ, ಯಂತ್ರದಿ ಸಿಲುಕಿ, ಬಿಳಿ ಹಾಳೆಯಾದೆ
ವಿನ್ಯಾಸವಾಗಿ ಕತ್ತರಿಸಿ, ಪುಟ ಪುಟಗಳು ಸೇರಿ; ಪುಸ್ತಕವಾದೆ;

ಸಂಸ್ಕಾರವಿಲ್ಲದ ಜಡತೆಗೆ ಹಿಡಿವುದೇ ಗೆದ್ದಲು,
ಅದಕ್ಕೆಂದೇ ಪುಸ್ತಕದಿ ಏರಿದರೆ ಮಸ್ತಕಕ್ಕೆ ಅಮಲು,
ಸುಲಭವಾಗಿ ಏರಬಹುದು ಜೀವನದ ಎಲ್ಲಾ ಮಜಲು....
-$indhu
(7/Aug/2024)

-


6 AUG 2024 AT 15:15

ಶಿರವ ಕಾಯುವ ಸಿಪಾಯಿಯಂತೆ ಶಿಕ್ಷಣ,
ಬದುಕಿನ ತಿರುವಿನಲ್ಲಿ ಬಲಿಷ್ಠರಾಗಿ ಹೋರಾಡೋಣ;

ಅಂಧಕಾರದ ಮೌಢ್ಯತೆಯ ತೊಲಗಿಸುವ ಸಾಕ್ಷರ,
ಜ್ಞಾನದಿಂದ ಮುಕ್ತ ಪಥಕ್ಕೆ ಕೊಂಡೊಯ್ಯುವುದೇ ಅಕ್ಷರ;

ವಿಧಿ ಸೃಷ್ಟಿಯ ಮಾಯಲೋಕದಿ ಈ ಜೀವನ,
ಕಲಿಕೆ ಇಲ್ಲದೆ ಬಿಡಿಸಲಾಗದು ಭವ ಬಂಧನ;

ಶಿಕ್ಷಣವು ನಮ್ಮ ಭವಿಷ್ಯವನ್ನು ಹೊಳಪುಗೊಳಿಸುತ್ತದೆ,
ಬೆಳಕು ಹಂಚುವ ದೀಪದಂತೆ ಬಾಳನ್ನು ಪ್ರಜ್ವಲಿಸುತ್ತದೆ..
-$indhu
(6/Aug/2024)

-


5 AUG 2024 AT 18:20

ದುಃಖದಿ ನೀಡುವ ಆಸರೆ ಗಂಡು,
ಗಂಡೆಂದರೆ ಜವಾಬ್ದಾರಿಯ ಹೆಗಲು,
ಶ್ರಮಿಸುತ್ತಾ ಸಂಸಾರವ ಪೋಷಿಸುವ ಹಗಲು-ಇರುಳು..

-


Fetching Sindhu India Quotes