ನೆನೆದರೊಮ್ಮೆ ನೋವುಂಟು
ತ್ಯಾಪೆಗಳಲಿ,ಇಪ್ಪತ್ತೆರಡರ ನಂಟು
ಒಂಟಿತನವೇ ಜಂಟಿ ನಿರ್ಧಾರ
ಘಾಟಿ ಮಾತುಗಳ ಧೂಮ್ರ ಅಪಾರ
ಸರಿ ತಪ್ಪುಗಳ ಸಾಮ್ರಾಟ
ಭವಣೆಯ ಹಾವು ಏಣಿಯ ಆಟ
-
🎂 ಜೂನ್ 2
🌲🌴ಪ್ರಕೃತಿಯ ಸೌಂದರ್ಯವನ್ನು ಸವಿಯುವುದರ ಮುಂದೆ ನನ್ನ ಎಲ್ಲಾ ಆಸೆಗಳು ಶೂನ್ಯ... read more
ಆಯುರ್ವೇದವೇ ಸತ್ಯ,
ಆಯುರ್ವೇದವೇ ನಿತ್ಯ.
ಆಯುರ್ವೇದದಲ್ಲಿ ಅಡಗಿರುವುದು ದಿವ್ಯ ಔಷಧಿ,
ವಟಿ ಚೂರ್ಣ ಕಷಾಯಗಳಿಂದ ದೂರವಾಗುವುದು ವ್ಯಾದಿ.
ಎಲೆ ಕಾಂಡ ಬೇರುಗಳ ಗಮ್ಮತ್ತು,
ವಿಶ್ವಕ್ಕೆ ಮಾದರಿಯಾಗಿದೆ ಆಯುರ್ವೇದ ಇವತ್ತು.
ರಸದಿಂದ ವಿಷ ನಶಿಸುವ ತಾಕತ್ತು,
ಸಕಲ ವೈದ್ಯ ಪದ್ಧತಿಗಳಲ್ಲಿ ಪ್ರಮುಖ ಆಯುರ್ವೇದ ಎಂದಿನಿಂದಲೂ ಇವತ್ತು...
- ಡಿ.ಎನ್.ಸಿಂಚನ-
ನಿರೀಕ್ಷೆಯಲ್ಲಿ ನಶಿಸಿ ಹೋದ ನೆನಪುಗಳು
ನೋವಿಗೆ ನಾಂದಿಯಾಗಿ ನಗಾರಿ ಬಾರಿಸುತ್ತಿದೆ..
ನೂರು ಕನಸು ನೂರು ನೆನಪು
ಬರೀ ನಿನ್ನ ನೆಪ ಈಗ ನನ್ನ ಜಪವಾಗಿದೆ..-
ಬದುಕು ಕ್ಷಣಿಕ ಸುಖಕ್ಕಾಗಿ ಹಂಬಲಿಸುತ್ತಿದ್ದರೆ,
ಬವಣೆ ಮರುಭೂಮಿಯಂತೆ ಪ್ರತಿಭ್ರಮಿಸುತ್ತಿದೆ
ನಿರೀಕ್ಷೆಯು ನವಮಾರ್ಗಕ್ಕೆ ಮುನ್ನುಡಿ ಬರೆದರೆ,
ಸಮೀಕ್ಷೆಯು ಸವಾಲುಗಳನ್ನು ಒಡ್ಡಿ ಸಾಗುತ್ತಿದೆ...
- ಡಿ.ಎನ್. ಸಿಂಚನ
-
ಕಡಲತೀರವನ್ನು ಕಾಣಲು ಹುಡುಕುವ ಹಡಗು
ಕತ್ತಲಲ್ಲಿ ದೀಪಗೃಹದ ಮಾರ್ಗವನ್ನರಿಸುವುದು
ಚಂಡಮಾರುತದ ಮುನ್ಸೂಚನೆಯನ್ನು ಅರಿಯದೆ
ಬಂದರಿನ ಹುಡುಕಾಟದಲ್ಲಿ ನಾವಿಕನು
ಪ್ರಯಾಣಿಕರ ಆತ್ಮವಿಶ್ವಾಸವನ್ನು ಹೇಗೆ ಮರಳಿತರುವನು ?
- ಡಿ.ಎನ್.ಸಿಂಚನ-
ನಿನ್ನ ಮರೆಯುವ ನಿರೀಕ್ಷೆ ದಿನವು
ಒಲವ ನಿಲ್ದಾಣಕ್ಕೆ ಇಲ್ಲ ಸ್ಥಳವು
ಆರಂಭದಿಂದ ಅಂತ್ಯದವರೆಗೂ
ಮಂಜಿನಿಂದ ಮಿಂಚಿನವರೆಗೂ
ನನ್ನ ಪಾಲಿಗೆ ಅಲ್ಲದ ಆ ನೆಲ
ಅಮೃತ ಎಂಬ ಹೆಸರಿನ ವಿಷ ಜಲ..
- ಡಿ.ಎನ್.ಸಿಂಚನ
-
ಬಾನಂಗಳದ ಬೆಳ್ಳಕ್ಕಿಯಂತೆ,
ಭುವಿ ಅಂಗಳದ ಹಸಿರು ಗಿಡದಂತೆ,
ಸದಾ ಮಿನಗುತ್ತಿರುವ ನಕ್ಷತ್ರದಂತೆ,
ಕಾಲಚಕ್ರದಂತೆ ನಡೆಯಲಿ ನಮ್ಮ ಜೀವನ..
- ಡಿ.ಏನ್.ಸಿಂಚನ-
ಬಳಿ ಬರುವ ಮುಂಚೆ ದಿಕ್ಕ ಬದಲಿಸಿದೆ
ಮುಖವರಿತರು ಮನಸರಿಯದೆ
ಕಣ್ಣರೆತರೂ ಕನಸರಿಯದೆ
ಕಣ್ಣೀರಿಗೆ ಎಡೆ ಮಾಡಿ ಹೋದೆ..
-
ನೋಡಬೇಕೆನಿಸುತ್ತದೆ ಪ್ರತಿದಿನ ನಿನ್ನ ಭಾವಚಿತ್ರ,
ನನಗೆಂದು ಉಳಿದಿರುವುದು ಬರಿ ನಿನ್ನ ಚಿತ್ರ ಮಾತ್ರ.
ಉಸಿರು ಬಿಗಿ ಹಿಡಿದು ಅತ್ತರು,
ಅಸ್ವಾಧೀನವಾಗಿರುವುದು ನನ್ನ ನೆತ್ತರು.
ಕಡುಕನು ಯಾರೆಂದು ತಿಳಿಯದು ಇಂದಿಗೂ,
ಮರಳಿ ಬಾರೆಯ ನೀ ಎಂದಿಗೂ?
- ಡಿ.ಎನ್.ಸಿಂಚನ-
ಅರಿತಿಹೆನು ನಿನ್ನ ಕಥೆಯ,
ಶಿಲ್ಪಿ ನಾನಲ್ಲ ಕೆತ್ತಲು ಕಲಾಕೃತಿಯ.
ಎನ್ನ ಚೆಲುವ ಬಣ್ಣಿಸಲು ನಾನಾದೆ ಕವಯತ್ರಿ,
ರತ್ನದಂತ ಪದಗಳ ಹುಡುಕಾಡಿದೆ ಇಡೀ ರಾತ್ರಿ.
ಚರಿತ್ರೆಯ ರಚಿಸುವ ಚೆನ್ನಿಗ ನೀನು,
ಆ ರಚನೆಯ ವರ್ಣಿಸಬಹುದೇ ನಾನು?
ಪೂರ್ಣಚಂದ್ರನಾಗಿ ಉಜ್ವಲಿಸುತ್ತಿರುವೆ ನೀನು,
ನಕ್ಷತ್ರವಾಗಿ ಮತ್ತಷ್ಟು ಬೆರಗು ತರಲೇ ನಾನು?
- ಡಿ.ಎನ್.ಸಿಂಚನ-