ಮೊದಲೆರಡು ಬಾರಿ ಕ್ಷಮಿಸಿದೆ ಗೆಳತಿ ನೀ ನನ್ನವಳೆಂಬ ಹುಚ್ಚು ಭಾವನೆಯಿಂದ....🙂
ಪ್ರತಿ ಬಾರಿಯೂ ಕ್ಷಮಿಸು ಎಂದರೆ, ಹಿಂಜರಿದಿದೆ ಮನ ತುಸು ಅನುಮಾನದಿಂದ....😇
ಈ ಪುಟ್ಟ ಹೃದಯದ ಮಹಾರಾಣಿ ನೀನೆ ಹುಡುಗಿ ....🫶
ಕಾದು ಕುಳಿತಿರುವೆ ಒಂದು ಭಾರಿಯ ನಿನ್ನ ಭೇಟಿಗಾಗಿ...🥰
-
ಮಾತಿನ ನಡುವೆ ಮುದ್ದಾದ ನಗುವೊಂದ ಕಾದಿರಿಸು ಗೆಳತಿ ನನಗೆಂದು..
ಭೇಟಿಯಾದಾಗೆಲ್ಲ ನೀಡಲು ಸಜ್ಜಾಗಿರು ಜೇನಿನ ಸಿಹಿಯ ಮುತ್ತೊಂದು..
ಪ್ರತಿದಿನ ನೀಡು ನೀ ಸಂದೇಶದೊಳು ನಿನ್ನ ಗೈರು-ಹಾಜರಿ..
ಕರೆಮಾಡಿದಾಗ ಮಾತಾಡಲು ಸಾಕಷ್ಟಿದ್ದರೂ ಬೇಕಂತಲೇ ನೀನು ಹಿಂಜರಿ..-
ಇದೊಂತರ ಹೊಸ ಭಾವನೆ ಆದರೂ ಸವಿಯಾಗಿದೆ..
ನೀನೊಂತರ ಸಿಹಿ ಭಾವನೆ ಹೇಳಲು ಹಿತವಾಗಿದೆ...
ನಿನ್ನ ಹೆಸರ ಗೀಚಲು ಒಂತರಾ ದಿಗಿಲು..
ನಿನ್ನ ಕನಸ ಕಾಣಲು ಅಳುವುದು ಮುಗಿಲು..-
ಬಿಡುವಾದಾಗೆಲ್ಲ ಕರೆ ಮಾಡು ಗೆಳತಿ ನಿನಗಾಗೆ ಕಾಯುತ್ತಿರುವೆನು..
ರಜೆ ಸಿಕ್ಕಾಗೆಲ್ಲ ಹೇಳು ಒಡತಿ ಕೈ ಹಿಡಿದು ಊರೆಲ್ಲಾ ಸುತ್ತಾಡಿಸುವೆನು..
ಕನಸಲ್ಲೂ ನಿನ್ನನ್ನೇ ಜಪಿಸುತ್ತಿರುವೆ ಒಮ್ಮೆ ಅವಕಾಶ ಕೊಟ್ಟು ನೋಡು..
ಗುಡಿಕಟ್ಟಿ ಪೂಜಿಸುವಷ್ಟು ಪ್ರೀತಿಸುತ್ತಿರುವೆ ಅನುಮತಿಯನ್ನೊಮ್ಮೆ ನೀಡು..-
ನಿನ್ನ ಕಣ್ಣೀರಿಗೆ ಕಾರಣ ಏನೇ ಆದರೂ ಒರೆಸುವೆ ಕೈಗಳು ನನ್ನದಾಗಿರಲಿ..
ನಿನ್ನ ನೋವನ್ನೆಲ್ಲಾ ಮರೆಸಿ ನಗು ತರಿಸುವ ಕೆಲಸವೂ ನನಗೆ ಸಿಗಲಿ..
ಕಷ್ಟ-ಸುಖ ಏನೇ ಬಂದರೂ ಹಂಚಿಕೊಳ್ಳೋಕೆ ನನ್ನ ಜೊತೆಗಿರು..
ಆಸ್ತಿ-ಐಶ್ವರ್ಯಗಳೆಲ್ಲವೂ ಕನಸಾಗೆ ಉಳಿದರೂ ನನಗಾಗಿ ನಗುತ್ತಿರು..-
ಹೊಳೆಯುತ್ತಿತ್ತು ನನ್ನ ಗೆಳತಿಯ ಮುಖದ ಹಾಗೆ...
ಸರಿಪಡಿಸಿತು ನಾ ಅನುಭವಿಸಿದ ವಿರಹದ ಬೇಗೆ...-
ಅಂದದ ಗೊಂಬೆಯೇ ನಿನಗ್ಯಾಕೆ ಬೇಕು ಮೂಗುತಿಯ ಸಿಂಗಾರ..
ಸೀರೆಯುಟ್ಟ ತಾವರೆ ಹೂವೆ ಸಾಕು ನಿನಗೆ ನಗುವಿನ ಅಲಂಕಾರ..
ನೋಡುತಲೇ ಇರುವಾಸೆ ಆ ನಿನ್ನ ಮುದ್ದಾದ ಮೊಗವನ್ನ..
ಈ ನಿನ್ನ ತರಲೆ ತುಂಟಾಟಗಳು ಮೀರಿಸುವುದು ಚಿಕ್ಕ ಮಗುವನ್ನ..-
ಸಂಗಾತಿಯಾಗಿ ಬಯಸಿದೆ ನಿನ್ನ ಗೆಳತಿ, ಆದರೂ ಹೇಳಲೇನೋ ಮುಜುಗರ..
ಮನಸೆಕೋ ಚಡಪಡಿಸುತಿದೆ ಸೇರಿಕೊಳ್ಳಲು ನಿನ್ನ, ಯಾಕಿಷ್ಟು ಅವಸರ..
ಹೇಳಿಬಿಡು ಈಗಲೇ ನೀ ನನಗೆ ಸಿಗುವೆಯಾ, ಇಲ್ಲ ದೂರ ಸಾಗುವೆಯಾ..
ಖುಷಿಯಾಗಿ ನೋಡಿಕೊಳ್ಳುವೆ ನಿನ್ನ, ಕಣ್ಮುಚ್ಚಿ ನನ್ನ ಜೊತೆ ಬರುವೆಯಾ..-