Siddu Gurikar   (Mr,360 Sid✍️)
31 Followers · 55 Following

ರಾಯಚೂರ ರಾಯಲ್ ಹೈದ,
ಕವಿತೆಗಳ ಸಂಯೋಜನೆಗೆ ನಾ ಸದಾ ಸಿದ್ಧ,
ಹೆಂಗಳೆಯರ ಗೌರವಕೆ ಸದಾ ಬದ್ಧ...!!
Joined 8 April 2020


ರಾಯಚೂರ ರಾಯಲ್ ಹೈದ,
ಕವಿತೆಗಳ ಸಂಯೋಜನೆಗೆ ನಾ ಸದಾ ಸಿದ್ಧ,
ಹೆಂಗಳೆಯರ ಗೌರವಕೆ ಸದಾ ಬದ್ಧ...!!
Joined 8 April 2020
6 OCT 2023 AT 11:32

ಪ್ರೀತಿ ಕೊನೆಯಾಯಿತೆಂದು ನೀ ಹುಸಿನಗು ನಗುತ್ತ ಹೇಳುತಿರುವೆ|
ಆದರೆ, ಆ ಹುಸಿನಗುವಿನ ಹಿಂದಿರುವ ನೋವ ಏಕೆ ನೀ ಅಡಗಿಸುತ್ತಿರುವೆ?|
ನಾಟಕೀಯ ನಗುಮುಖದಿ ನೀ ಬಾಳ ಬಂಡಿಯಲಿ ಸಾಗುತ್ತಿರುವೆ|
ನಿನ್ನಂತರಾಳವ ಅರಿಯದ ಅಯೋಗ್ಯ ನಾನೆಂದುಕೊಂಡಿರುವೆಯಾ ಹೇ ನನ್ನ ಚೆಲುವೆ|
ಹೇ ಅರಸಿ, ಅನಿವಾರ್ಯತೆಯ ಕಠೋರತೆಗೆ ನಾವಿಂದು ಅಗಲಿದ್ದೇವೆ, ಮತ್ತೆ ಮಿಲನಕ್ಕೆ ಪುನರ್ಜಮ್ಮವ ನಾ ಆ ಭಗವಂತನಲ್ಲಿ ಬೇಡುವೆ|

-


10 JUN 2023 AT 13:02

"ಈ ಕಾಲದ ಕಟು ಸತ್ಯ"

ಮುಗ್ಧರ ನಂಬಿಕೆಯೇ
ಮೋಸಗಾರರಿಗೆ ಬಲವಾದ
ಆಯುಧವಾಗುವುದು,
ಮುದ್ಗರಿಗೆ ಮೊಸಗಾರರ ಬಗ್ಗೆ
ಎಚ್ಚರಿಸುವುದೇ ಸತ್ಯವಂತರಿಗೆ
ಚಾಡಿಕೊರ ಎಂಬ ಕಳಂಕದೊಂದಿಗೆ
ಅವಮಾನವಾಗುವುದು.

-


30 MAY 2023 AT 7:45

ಹಂಸನೂರಿನ ಗೋವಿನಗಿಡ ಎಂಬ ವಂಶವೃಕ್ಷದಲಿ,
ಶರಣಪ್ಪ-ಲಕ್ಷ್ಮೀಯರ ಉದರದಲಿ ಜನಿಸಿದೆ ಸುವರ್ಣ ಎಂಬ ರತ್ನ,
ರಂಗಭೂಮಿಯ ಕಲಾಸೇವೆಗೆ ಸದಾ ಸಿದ್ಧ ಈ ಅಮೂಲ್ಯ ರತ್ನ,
ಮುಕ್ಕೋಟಿ ದೇವರಂತೆ ಬಲ ಇವಳಿಗೆ ಬಸವ,ಶಿವ, ಕಾರ್ತಿಕ ಎಂಬ ಮೂರು ಅನುಜರ ಬಾಹುಬಲ.
ಅಕ್ಕರೆಯ ಶ್ರೀಲಕ್ಷ್ಮೀ ಎಂಬ ಸುತೆಗೆ ಜನ್ಮವಿತ್ತು ಬಾಳಬಂಡಿ ನಡೆಸುತ್ತಿರುವಳೀ ಮಂಜರಿ,
ರಂಗಭೂಮಿಯ ಮೂರು ವಿಧದ ಪಾತ್ರಗಳಿಗೆ ಮೇರುನಟಿ ಈ ಕಿನ್ನರಿ,
ನಟನೆಯಲ್ಲಿ ಜಗಕೆ ಮಂಕು ಬಡಿಸುತ ನಗುವಿನಲಿ ಮಾಯೆ ಸೂಸುವಳು ಈ ಕೃಷ್ಣಸುಂದರಿ,
ಹಸ್ಯದಲಿ ಸಹನಟನ ಬೆವರಿಳಿಸುವ ಗಯ್ಯಾಳಿ,
ಖಳನಾಯಕಿಯಾಗಿ ಖಳನಿಗೆ ಸೆಡ್ಡು ಹೊಡೆಯುವ ಗಾಂಭೀರ್ಯದವಳಿವಳು ಕೇಳಿ,
ಸಾಧ್ವಿಯಾಗಿ ಪ್ರೇಕ್ಷಕರ ಮನಸೂರೆಗಯ್ಯುವ ಕಲೆಯುಳ್ಳವಳೂ ಇವಳೇ,
ರಂಗಭೂಮಿಯ ಕಲೆಯೆಂಬ ರಸದಲ್ಲಿ ಮಿಂದೆದ್ದಿರುವ ಮಾಯಾಂಗಿಣಿ,
ನಗುವಿನಲ್ಲಿ ಪಡ್ಡೆಗಳ ಹೃದಯ ಗೆಲ್ಲುವ ಅರಗಿಣಿ,
ಚಿನ್ನದ ಅನ್ಯ ಹೆಸರೇ ಸುವರ್ಣ, ಕಲೆಯ ರಾಯಭಾರಿಯೂ ಈ ಸುವರ್ಣ.
ಕಾನನದ ಕಗ್ಗತ್ತಲೇಯನ್ನೂ ಕರಗಿಸಬಲ್ಲಳು ನಟನೆಯ ಛಾಪಿನಿಂದ,
ಕರುನಾಡಿನ ಸಹೃದಯಿ ಕಲಾರಸಿಕರ ಮನವ ಗೆದ್ದಿರುವಳು ಪಕ್ವತೆಯ ನಟನೆಯಿಂದ,
ಸಹೃಯದಿ ಸದ್ಗುಣವ ಹೊಂದಿದ ಮಮತೆಯ ಸ್ತ್ರೀಯೂ ಇವಳೇ,
ಗರ್ವದಿ ಎದುರಾದವರಿಗೆ ಗಾಂಭೀರ್ಯದಿ ಎದುರುನಿಲ್ಲುವ ಗಟ್ಟಿಗಿತ್ತಿಯೂ ಇವಳೇ.
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸಹೋದರಿ ಸುವರ್ಣ,
ಕಷ್ಟ-ಕಾರ್ಪಣ್ಯಗಳ ಮೆಟ್ಟಿನಿಂತು, ಮಂದಹಾಸದಿ ಕಂಗೊಳಿಸಲಿ ನಿನ್ನ ಮೊಗವು ಅನುದಿನ...

-


29 MAY 2023 AT 19:40

*ಯಜಮಾನ*,
ಈ ಶಬ್ದ ವಯ್ಯಸ್ಸಿಗೂ ಪರ್ಫೆಕ್ಟ್, ವ್ಯಕ್ತಿತ್ವಕ್ಕೂ ಪರ್ಫೆಕ್ಟ್.
ತಾಳ್ಮೆ-ಸಹನೆಗೂ ಪರ್ಫೆಕ್ಟ್.
Totally, ಸಚಿನ್, ದ್ರಾವಿಡ್ ರವರ ನಂತರ, ಭಾರತೀಯ
ಕ್ರಿಕೆಟ್ ನಲ್ಲಿ ನಾ ಕಂಡ ಪರಿಪೂರ್ಣ ಅಮೂಲ್ಯ ರತ್ನ ಈ
ಮಹೇಂದ್ರಸಿಂಗ್ ಧೋನಿ😘
ಸಚಿನ್, ದ್ರಾವಿಡ್, ಗಿಲ್ಕ್ರಿಸ್ಟ್, ರೋಡ್ಸ್, ಮೆಕ್ಗ್ರಾಥ್, ಎಬಿಡಿ
ಮುಂತಾದ ಮಹಾನ್ ಆಟಗಾರರ ಆಟ ನಿಂತಮೇಲೆ,
ಕ್ರಿಕೆಟ್ ನೋಡೋಕೆ ಬೇಸರ ಆಗುತ್ತೆ ಒಮ್ಮೊಮ್ಮೆ.
ನೀನೊಬ್ಬ ವಿದಾಯ ಹೇಳಿ ಹೋದರೆ, ಮತ್ತೆ
ಜೆಂಟಲ್-ಮ್ಯಾನ್ ಗಳ ಆಟವಾದ ಕ್ರಿಕೆಟ್ ನಲ್ಲಿ, ಈ
ಮುಂಗೋಪಿ ಯುವ ಕ್ರಿಕೆಟಿಗರಲ್ಲಿ, ಜೆಂಟಲ್-ಮ್ಯಾನ್ ಗಳನ್ನ
ಎಲ್ಲಿ ನೋಡಬೇಕು ನಾವು?☹️
ನೀ ಆಡು ಯಜಮಾನ, ಮತ್ತ್ ಬಾ 2024ಕ್ಕ😍💪🏾
ನಾವ್ ಕಾಯ್ತೀವಿ✌️

-


15 MAY 2023 AT 0:33

ಬಾಳೆಂಬ ನೋವು-ನಲಿವಿನ ಬವಣೆಯಲಿ
ಇರುವುದೊಂದೆ ನಮಗೆ ಪರಿಹಾರ,
ಅದುವೇ ಒಲ್ಲದ ಮನಸ್ಸಿನಿಂದ ಮನಸ್ಸಿಗೋಪ್ಪದುದರ ಅಂಗೀಕಾರ,
ಪ್ರತಿಯೊಂದಕ್ಕೂ ಬಾಯ್ತೆರೆದುಕೊಂಡು ಕೂತಿದೆ ಈ ಜಗದಲ್ಲಿ ಜನಸಾಗರ,
ನಿಶ್ಚಿಂತೆಯಿಂದ ಬದುಕಬೇಕೆಂದರೆ ವಿಶ್ವಕ್ಕೆ ಒರಗಿಕೊಂಡಿದೆ ಸ್ವಾರ್ಥವೆಂಬ ಅಂಧಕಾರ,
ಮೃಷ್ಟಾನ್ನದ ಬಯಕೆಯ ಬದಿಗೆ ಸರಿಸಿದರೂ ಸಹ ತುತ್ತನ್ನಕ್ಕೂ ಹಾಕಬೇಕಿದೆ ಕಪಟ ಸ್ವಾರ್ಥಿಗಳಿಗೆ ಜೈಕಾರ,
ಭಗವಂತಾ, ಇಂತಹ ಸಂಧಿಗ್ದತೆಗೆ ಯಾವಾಗ ಆಗುವುದು ಉಪಸಂಹಾರ,
ಆಸೆ-ಕನಸುಗಳ ಕತ್ತಲಲ್ಲಿ ಕಟ್ಟಿಹಾಕಿ, ಜವಾಬ್ದಾರಿಗಳ ಗಂಟನ್ನು ಹೆಗಲೇರಿಸಿ ಬಂದಂತೆಯೇ ಮಾಡಬೇಕಿದೆ ಈ ಬದುಕನ್ನಿಂದು ಸ್ವೀಕಾರ...

-


14 MAY 2023 AT 16:11

ಜಗತ್ತಿನ ಅರಿವೇ ಬಂದಿರುವುದಿಲ್ಲ, ಅಷ್ಟು ಚಿಕ್ಕವಯಸ್ಸಿನಿಂದಲೇ
ಪುಟ್ಟದೊಂದು ಬೊಂಬೆಯನ್ನು ತನ್ನ ಮಗುವೆಂದುಕೊಂಡು
ಇದು ನನ್ನ ಪಾಪು, ನಾನು ಇದರ ಅಮ್ಮ ಎಂದು ಬಹುತೇಕ ಹೆಣ್ಣು ಮಗುಗಳು ಆಟ ಆಡುತ್ತವೆ, ತಾಯ್ತನ ಎನ್ನುವುದು ಪ್ರತಿಯೊಬ್ಬ ಹೆಣ್ಣು ಬಯಸುವ ಮಹಾದಾಸೆಯೂ ಕೂಡಾ. ಜಗತ್ತಿನ ಜ್ಞಾನವೇ ಬರುವುದಕ್ಕೆ ಮುಂಚಿತವಾಗಿಯೇ ತಾಯ್ತನದ ಕನಸನ್ನು ಕಂಡಿರುತ್ತಾಳೆ ಹೆಣ್ಣು🙏🏾 ಅದುವೇ ಹೆಣ್ಣಿನಲ್ಲಿರುವ ತಾಯ್ತನದ ಪ್ರೀತಿಗೆ ಉದಾಹರಣೆ.
ಇಂದು ರಾಷ್ಟ್ರೀಯ ತಾಯಂದಿರ ದಿನಾಚರಣೆ,
ತಾಯಿ ಎನಿಸಿಕೊಳ್ಳಲು ಮಗು ಹೇರಬೇಕೆಂದೆ ಇಲ್ಲ,
ಭೂಮಿಯಂತೆ ಸಹನೆ, ಸಮುದ್ರದಂತೆ ತಾಳ್ಮೆಯಿಂದ
ಪ್ರೀತಿ,ಕಾಳಜಿ ತೋರುವ ಪ್ರತಿ ಹೆಣ್ಣು ಕೂಡ ಒಂದಲ್ಲ ಒಂದು ರೀತಿಯಿಂದ ತಾಯಿಯೇ🙏
ದೇಶದ ಇಂತಹ ಎಲ್ಲ ಮಹಿಳಾಮಣಿಗಳಿಗೆ, ಮಾತೆಯರಿಗೆ ಹಾಗೂ ಮಾತೃ ಸಮಾನರಾದ ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು🙏🏾

-


11 MAY 2023 AT 22:25

ಬಿರುಬೇಸಿಗೆಯಲ್ಲಿ ಬೆಂದು ಬೆಂದಾಗಿರುವ ಜೀವಕೆ
ನಿನ್ನ ಒಲವಿನ ತಂಪನ್ನೆರೆಸಿ ತಣಿಸು ಬಾರೆ ಹೇ ಅಭಿಸಾರಿಕೆ,
ಹಗಲಿನ ತಾಪದಲಿ ತಂಗಾಳಿಯ ಬಯಸುತಿದೆ ನನ್ನ ತನುವು,
ನಿನ್ನ ಕೇಶರಾಶಿಯಿಂದ ಸೂಸಿದ ಸಿಹಿಗಾಳಿಯ ನೆನೆಯುತಿದೆ ಮನವು.
ನೆನೆಯುತಿದೆ ನನ್ನ ಮನ ನಿನ್ನ ಮುಂಗುರುಳ ನರ್ತನ,
ಬಯಸುತಿದೆ ನನ್ನ ನಯನಗಳು ನಿನ್ನ ಕಂಗಳ ಪ್ರೇಮ ಬಾಣ.
ಹೃದಯದ ಪ್ರತಿ ಉಸಿರಲ್ಲೂ ನಿನ್ನೆಸರಿನ ತುಡಿತ,
ಕಾಡುತಿದೆ ಇಂದೇಕೋ ನಿನ್ನೊಡನೆ ಕಳೆದ ನೆನಪುಗಳ ಹೊಡೆತ.
ಮುಂಜಾವಿನ ಮಂಜಿನಲ್ಲಿಯೂ ಹೊಳೆಯುವ ನಕ್ಷತ್ರದಂತೆ ನೀನು,
ನನ್ನುಸಿರ ಏರಿಳಿತಗಳ ಪ್ರತಿ ಶ್ವಾಸದ ತುಂಬೆಲ್ಲವೂ ನೀನು.
ಬಾ ಬಾರೇ ನನ್ನ ಮನದರಸಿ,
ನಿನಗಾಗಿ ಕಾಯುತಿದೆ ನನ್ನ ಹೃದಯ ಹರಸಿ...

-


22 APR 2023 AT 0:09

ಬಚ್ಚಿಟ್ಟುಕೊಂಡ ಮಾತುಗಳ ಬಿಚ್ಚಲಾರದು ನನ್ನ ಮನ
ಕಾರಣ, ನಾ ಬಯಸಿಹೆ ನೋಯದಿರಲಿ ನನ್ನ ಹೊರತು ಅನ್ಯರ ಮನ.
ಹತ್ತಿರದ ಹೃದಯಗಳಿಗೆ ಅರಿಯಲು ಇರುವವು ಅನ್ಯ ಹಾದಿಗಳು.
ಹಣ್ಣಿನಾಸೆಗೆ ಯಾರೋ ಮರದೆಡೆಗೆ ಬೀಸಿದ ಕಲ್ಲು,
ಮರಕ್ಕಾಗಿ ಮರುಗಲು ಹೊರಟ ನನ್ನನ್ನು ಘಾಸಿಗೊಳಿಸುತಿದೆ ಇಲ್ಲಿ.
ಅನ್ಯರ ಮೆಚ್ಚಿಸುವ ಆಸೆ ಏನಗಿಲ್ಲ,
ಪರರಿಗೆ ಘಾಸಿಗೊಳಿಸಿದ ದಗುಡ ಏನಗಿಲ್ಲ,
ನನ್ನ ಹಮ್ಮನ್ನು ಮರೆಸುವ ಹಂಬಲವೂ ಇಲ್ಲ,
ಆದರೂ ನೆಮ್ಮದಿ ಹತ್ತಿರ ಸುಳಿಯುತಿಲ್ಲ.
ಸಹಿಸುವಷ್ಟು ಸಹಿಸುವ ಭಾವನಾಜೀವಿ ನಾನು,
ಸಹನೆಯ ಕಟ್ಟೆಯನ್ನೊಡೆಯುವಸ್ಟು ಚುಚ್ಚದಿರು ದೇವಾ...🙏🏾

-


14 APR 2023 AT 22:56

ಭಾವನೆಗಳು ವಿರಳ,
ಭಾಂಧವ್ಯಗಳೂ ವಿರಳ,
ಆದರೂ ಪ್ರಾಣಿಗಳ ಜೀವನ ಬಹು ಸರಳ.
ಭಾವನೆಗಳು ಹೇರಳ,
ಭಾಂಧವ್ಯಗಳೂ ಹೇರಳ,
ಆದರೆ, ಮನುಷ್ಯ ಜನ್ಮದಿ
ನೆಮ್ಮದಿಗಿಂತ ನೋವುಗಳೇ ಹೇರಳ.
ಕಾರಣ ದ್ವಿಮುಖ ವ್ಯಾಘ್ರಗಳಿಂತಿರುವ
ವೇಶಾಧಾರಿಗಳೇ ಇಲ್ಲಿ ಹೇರಳ,
ಅವರಿಗೆ ಕುತಂತ್ರ ಬುದ್ದಿ ಬಹು ಸರಳ.

-


30 MAR 2023 AT 21:04

ನಂಬಿಕೆ, ವಿಶ್ವಾಸ, ಕಾಳಜಿ,
ಪ್ರೀತಿ ಮತ್ತು ಗೌರವ
ಈ ಐದು ಬಹಳ ಮಹತ್ವವಾದವು,
ಇವುಗಳನ್ನು ಸುಖಾಸುಮ್ಮನೆ
ಎಲ್ಲರಿಗೂ ನೀಡಬಾರದು.
ಏಕೆಂದರೆ, ನೀಡಿದರೆ ಅವುಗಳಿಗೆ
ಅವರು ಯೋಗ್ಯರಲ್ಲ ಎಂದು
ತಿಳಿದಮೇಲೆ, ಅವನ್ನು ನಾವು
ಮರಳಿ ಕಿತ್ತುಕೊಳ್ಳಲು ಮನಸಾಗುವುದಿಲ್ಲ.
ಅದರಿಂದ ನಾವೇ ಕೊರಗಬೇಕಾಗಬಹುದು.

-


Fetching Siddu Gurikar Quotes