ಕಥನ ಕವನ
ಹಾಡುತೈತೆ ಹಕ್ಕಿ ಹಾರಾಡುತೈತೆ
ಕಾಣದ ಅಂಚಿನ ಮುಗಿಲಿನ ಮ್ಯಾಲ
ಮುಟ್ಟಿದರೂ ಸಿಗದ ಆಕಾಶದ ಕೆಳಗ
ಸಿಕ್ಕಿದರೂ ಸಿಗುವ ಭೂಮಿಯ ಮಡಿಲಲ್ಲಿ
ಕಂಡು ಕಾಣದ ಗಾಳಿಯಾ ಒಡಲಲ್ಲಿ
ಹೊಳಿಯೋ ಸೂರ್ಯನ ಕಿರಣಕಾ ಮೈವೊಡ್ಡಿ
ಒಡಲ ಹಸಿವಿಗೆ ಬೇಡ ಬೇಟೆಗೆ ಹೊಂಟಾನ
ಒಡನಾಡಿಯಾಗಿ ಬಿಲ್ಲು ಬಾಣಗಳ ಸಹಿತ
ಹೊರಟವನ ಮನದಾಗ ಉಂಟು ಆಸೆಯ ಹಕ್ಕಿ
ಹಾರೋ ಹಕ್ಕಿ ಹಾಡಾಡಿ ಕುಣಿದು
ಹಾಡುವ ದನಿಗೆ ದಿನವೆಲ್ಲ ಮಣಿದು
ಮರಳಿ ಗೂಡಿಗೆ ಹೊಂಟೈತಿ
ಹೋಗೋ ರಭಸದಿ ಎದುರಾದ ಬೇಡ
ಬಾಣ ಪ್ರಾಣಗಳ ನಡುವೆ ಸಂಘರ್ಷ ಕಾಣ
ದಿಟ್ಟಿಸಿದ ಬೇಡ ಹೂಡಿದ ಬಾಣ
ತ್ರಾಣವಿಲ್ಲದ ಹಕ್ಕಿಗೆ ಮತ್ತಷ್ಟು ನಿತ್ರಾಣ
ಬಿಟ್ಟ ಬಾಣದ ಏಟಿಗೆ ಆರಿಹೋಯಿತು ಪ್ರಾಣ
ಗೂಡೊಳಗೆ ಬಿಟ್ಟ ಮರಿಗೆ
ತಾಯಿ ಹಕ್ಕಿಯದೇ ಧ್ಯಾನ
ಮನೆಯೊಳಗೆ ಮಕ್ಕಳ ಬಿಟ್ಟ ಬೇಡನಿಗೆ
ರಾತ್ರಿ ಮಾಂಸದೂಟ ತಿನ್ನುವ ಧ್ಯಾನ
ತಾಯಿ ಹಕ್ಕಿಯ ಕಾದ ಮರಿಹಕ್ಕಿಯ ಆಕ್ರಂದನ
ಮುಗಿಲು ಮುಟ್ಟಿತ್ತು
ಹೆಗಲ ಮೇಲಿನ ಹಕ್ಕಿಯ ಕಂಡ ಬೇಡನ ಕಂದನ
ಮೊಗದಲ್ಲಿ ನಗುವಿತ್ತು.-
3 FEB 2019 AT 14:18