ಕಾವೇರಿಯಿಂದ ಮಾಗೊ | ದಾವರಿವರಮಿರ್ದ ನಾಡದಾ ಕನ್ನಡದೊಳ್ ||
ಭಾವಿಸಿದ ಜನಪದಂ ವಸು | ಧಾವಳಯವಿಲೀನ ವಿಶದವಿಷಯ ವಿಶೇಷಂ ||
:- ಶ್ರೀವಿಜಯನ ಕವಿರಾಜಮಾರ್ಗ-
ನಾ ಕರಿಯಳೆಂದು ನೀ ಜರೆಯಬೇಡ ಬಿಳಿಗೆಳತಿ ಗರ್ವದಿಂದ
ಕಪ್ಪಿಗಿಂತ ಬಿಳಿಬಣ್ಣ ಹೆಚ್ಚು ಹೆಳವ ಹಿರಿಮೆಯಿಂದ
ಬಿಳಿಯ ಮೋಡ ನೀಡುವುದು ಇಳೆಗೆ ಬರಿ ಬೆಡಗು ಅಂದಚೆಂದ
ಇಳೆಯ ಜೀವ ಮಳೆ ಬರುವುದಕ್ಕೆ ಕರಿಮೋಡ ಮಾತ್ರದಿಂದ
ಕಣ್ಣಿಗೆ ನೋಟ ಕರಿಯಾಲಿಯಿಂದಲೇ ಕುರುಡು ಬರಿಯ ಬಿಳುಪು
ಬಿಳಿಯ ಕೇಶಗಳೆ ಮುಪ್ಪು ಯವ್ವನದ ವಿಜಯ ಧ್ವಜವು ಕಪ್ಪು
ಕಪ್ಪು ಭೂಮಿಯಲೆ ಬೆಳೆಯಬೇಕು ನೀ ತೊಟ್ಟ ನೂಲ ಬಿಳುಪು
ಬಿಳಿಯ ಮಂಜಿನಲಿ ಬೆಳೆಯಬಹುದೆ? ಬೆಳೆಯುವುದು ಎಲ್ಲ ಕಪ್ಪು!
:- ಸಿದ್ದಯ್ಯ ಪುರಾಣಿಕ್
-
ಚುಟುಕಿಗೊಂದು ಚರಿತೆ :-೧
ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ
ಮೌರ್ಯ ಸಾಮ್ರಾಜ್ಯದ ನಿರ್ಮಾಪಕ
ಯುದ್ಧ ತೊರೆದು ಅಹಿಂಸೆ ಬಯಸಿದ ಸಾಧಕ
ಬುದ್ಧನ ವಿಚಾರಧಾರೆಯ ಪ್ರತಿಪಾದಕ
ಸ್ಮರಿಸಬೇಕು ಈತನ ಸಾರನಾಥ, ಸಾಂಚಿ ಸ್ಮಾರಕ
ಗತಿಸಿದರು ಚರಿತ್ರೆಯಲ್ಲಿ ಉಳಿಯುವನು ಕೊನೆತನಕ
:- ಸಿ.ಚಂ.ಪೆ-
ಕಾಸಿಲ್ಲದ ಕನಸ್ಸಿನ ಮಾರುಕಟ್ಟೆಯಲ್ಲಿ
ನನ್ನವಳಿಗಾಗಿ ಪ್ರೀತಿಯ ಮಹಲನ್ನು ಕೊಂಡೆ.
ಕಣ್ಣು ಬಿಟ್ಟಾಗ ಮಹಲಿನ ಜೊತೆ
ಅವಳ ಪ್ರೀತಿಯು ಮಾಯವಾಗಿತ್ತು
:-ಸಿ.ಚಂ.ಪೆ-
ಆತುರದ ಅವಸರವೇಕಯ್ಯಾ
ಸ್ಯಾನಿಟೈಸರ್ ಸದಾ ಇರಲ್ಲಯ್ಯಾ
ಮುಖಕ್ಕೊಂದು ಮಾಸ್ಕು ಸದಾ ಬೇಕಯ್ಯಾ
ತಾಳ್ಮೆಎಂಬುದೇ ದೊಡ್ಡ ಅಸ್ತ್ರವಯ್ಯಾ
ಮನೆಬಿಟ್ಟು ಹೊರಗಡೆ ಬರಲೇಬೇಡಯ್ಯಾ
ಇದು ಕಣ್ಣೀರಿನ ಕೊರೋನಾ ಕಾಲವಯ್ಯಾ||
ಸಿ.ಚಂ.ಪೆ
-
ಓ ಪ್ರೀತಿಯ ಕಾರ್ಮಿಕ
ನೀನು ಶ್ರಮದ ಪ್ರತೀಕ.
ರಾಷ್ಟ್ರದ ನೈಜ ನಾಗರಿಕ
ನೊಂದ ಶ್ರಮಿಕರ ನಾಯಕ
ದೇಶಾಭಿವೃದ್ದಿಯ ಸೇವಕ
ನಿನ್ನ ದುಡಿಮೆಗೆ ಸಿಗುತ್ತಿಲ್ಲ ತಕ್ಕ ಪ್ರತಿಫಲ
ಆದರೂ ನೀ ಬಿಡುತ್ತಿಲ್ಲ ಹಿಡಿದ ಛಲ
ನೋವಲ್ಲೂ ನಗುತ್ತಾ ದಣಿದಿರುವೆ
ಕಷ್ಟದಲ್ಲೂ ಸ್ವಾಭಿಮಾನ ಬಿಡದಿರುವೆ.
ಮಾಲಿಕರಿಂದ ನಿನಗಾಗಿದೆ ಮಹಾ ಮೋಸ
ನಿನ್ನ ಶೋಷಣೆಗಿದೆ ಶತಮಾನಗಳ ಇತಿಹಾಸ
ಮರೆಯದಿರು ನೀ ಶ್ರಮದ ಸರ್ವಾಧಿಕಾರಿ
ತೊರೆಯದಿರು ನಿನ್ನ ಹೋರಾಟದ ಮಾದರಿ.
:- ಸಿದ್ದೇಶ.ಸಿ
-
ಅಗಣಿತ ತಾರಾಗಣಗಳ ನಡುವೆ
ನಿನ್ನನು ನೆಚ್ಚಿಹೆ ನಾನು
ನನ್ನೀ ಜೀವನ ಸಮುದ್ರಯಾನಕೆ
ಚಿರಧೃವ ತಾರೆಯು ನೀನು ||
ಇಲ್ಲದ ಸಲ್ಲದ ತೀರಗಳೆಡೆ ನಾನು
ತೊಳಲುತ ಬಳಲಿದರೇನು
ದಿಟ್ಟಿಯು ನಿನ್ನೊಳು ನೆಟ್ಟಿರೆ ಕಡೆಗೆ
ಗುರಿಯನು ಸೇರೆನೆ ನಾನು ||
:-ಕುವೆಂಪು-
ಅವನೊಬ್ಬನಿದ್ದ
ರಾಜ್ಯ ಬೆಂಕಿಯಲ್ಲಿ ಬೆಂದಾಗ ರಕ್ಷಣೆ ನೀಡದೆ ಪಿಟೀಲು ನುಡಿಸುತ್ತಿದ್ದ.
ಪಿಟೀಲಿನ ತಂತಿಯ ಮೋಡಿಗೆ
ಹಿಂಬಾಕಲರಿಗಂತೂ ಬೆಂಕಿಯ ಕಾವು ಕಾಣುತ್ತಿರಲಿಲ್ಲ.
ಇವನೊಬ್ಬನಿದ್ದ
ಸತ್ತವರಿಗೆ ಹೂಳಲು ಜಾಗ ಕೊಡದೆ ಚುನಾವಣೆಯ ಪ್ರಚಾರದ ಫಕೀರನಾಗಿದ್ದ
ಇವನ ಮೊಂಭಕ್ತರಿಗಂತೂ ಈತ ಈಗಲೂ ವಿಶ್ವ ಗುರುವಾಗಿದ್ದ
ಸತ್ತವರ ನೋವು ಸತ್ತಂತ್ತಿದ್ದವರಿಗೆ ಕಾಣಲಿಲ್ಲ.
:-ಸಿ.ಚಂ.ಪೆ-
ಅವನೊಬ್ಬನಿದ್ದ
ಬೆಂಕಿಯಲ್ಲಿ ಬಿದ್ದ ರಾಜ್ಯಕ್ಕೆ ರಕ್ಷಣೆ ನೀಡದೆ ಪಿಟೀಲು ನುಡಿಸುತ್ತಿದ್ದ. ಅವನ ಹಿಂಬಾಲಕರಿಗೆ ಪಿಟೀಲಿನ ತಂತಿಯ ಮೋಡಿಗೆ ಬೆಂಕಿಯ ಕಾವು ಕಾಣುತ್ತಿರಲಿಲ್ಲ.
ಇವನೊಬ್ಬನಿದ್ದ
ಸತ್ತವರಿಗೆ ಹೂಳಲು ಜಾಗ ಕೊಡದೆ ಚುನಾವಣೆಯ ಪ್ರಚಾರದ ಫಕೀರನಾಗಿದ್ದ.
ಇವನ ಮೊಂಭಕ್ತರಿಗಂತೂ ಈತ ಈಗಲೂ ವಿಶ್ವ ಗುರುವಾಗಿದ್ದ
ಸತ್ತವರ ನೋವು ಸತ್ತಂತ್ತಿದ್ದವರಿಗೆ ಕಾಣಲಿಲ್ಲ.
:-ಸಿ.ಚಂ.ಪೆ-
ಅರಮನೆ ,ಶಿಲ್ಪ ಚಿತ್ರಕಲೆಯ ರಕ್ಷಣೆ
ಪುರಾತನ ಪರಂಪರೆಯ ಪೋಷಣೆ
ಶಾಸನ ನಾಣ್ಯ ಸ್ಮಾರಕಗಳ ಸಂರಕ್ಷಿಸಿ
ಗತಕಾಲದ ಚರಿತ್ರೆಯ ಸುಸ್ಥಿರವಾಗಿರಿಸಿ
ಹಳೆಯ ಕೋಟೆ ಕೊತ್ತಲ್ಲಗಳ ಕಲ್ಲು ಕಿತ್ತರೆ
ಪ್ರಾಚೀನ ಪರಂಪರೆಯ ಅರಿವಿಗೆ ತೊಂದರೆ
ಪಾರಂಪರಿಕ ಗುಡಿ ಚರ್ಚು ಮಸೀದಿ.
ನಮ್ಮ ದೇಶದ ಸಂಸ್ಕೃತಿಗೆ ಬುನಾದಿ.
ಅಳಿದುಳಿದ ಕುರುಹುಗಳ ಗುರುತಿಸಿ
ಐತಿಹಾಸಿಕ ಸ್ಮಾರಕಗಳ ಸದಾ ಪ್ರೀತಿಸಿ
:-ಸಿದ್ದೇಶ.ಸಿ-