ನಮ್ಮ ಯೊಗ್ಯತೆಯನ್ನ ಅಳೆಯಲು ಪ್ರಯತ್ನಿಸುವವರ ಮುಂದೆ ನಾವು ಸಮುದ್ರದಂತೆ ಇರಬೇಕು..... ಅವರ ಅಳತೆಗೂ,ಊಹೆಗೂ ನಿಲುಕದಂತೆ.....😊😊😊😊
-
ಜ್ಞಾನಕಾಶಿ ದಾವಣಗೆರೆ,ಯೋಚನೆಗಳಿಗೆ ಬರವಣಿಗೆಯ ರೂಪ ಕೊಡುವಾಸೆ✍️✍️✍️✍... read more
ಧೂಳು,ಮುಖದ ಮೇಲಿರುತ್ತೆ. ಆದರೆ,ನಾವು ಕನ್ನಡಿಯನ್ನು ಒರೆಸುತ್ತಾ ಹೋದರೆ ಮುಖದಲ್ಲಿರುವುದನ್ನು ಅಳಿಸುವುದಿಲ್ಲ...
ಹಾಗೆ ನೋಡುವ ದೃಷ್ಟಿ ಬದಲಾದಗ ಮಾತ್ರ ಎಲ್ಲದರಲ್ಲೂ ಒಳ್ಳೆಯದೇ ಕಾಣುತ್ತದೆ...😊😊😊😊-
ಮತ್ತೊಬ್ಬರನ್ನ ಗುಲಾಮರನ್ನಾಗಿ ನೋಡದೆ,ಸಮಾನತೆಯ ತತ್ವವನ್ನ ಅರಿಯುವುದೆ ಸಾರ್ವಭೌಮತ್ವ.
-
ನಾವು ಇನ್ನೊಬ್ಬರ ಮೊಗದಲ್ಲಿನ ಸಂತೋಷಕ್ಕೆ ಕಾರಣವಾದರೆ,ಅದೇ ನಮ್ಮ ಜೀವನದನ ನಿಜವಾದ ಸಾರ್ಥಕತೆ ಮತ್ತು ಸಾಧನೆ....
-
ಅಂತರಂಗದ ಯುದ್ದ(ಕೋಪ, ಚಂಚಲತೆ)ವನ್ನು ಗೆದ್ದವರು ಮಾತ್ರ,,,, ಜೀವನದಲ್ಲಿ ಏನನ್ನಾದರೂ ಗೆಲ್ಲಲು,ಮತ್ತು ನೆಮ್ಮದಿಯಿಂದ ಇರಲು ಸಾಧ್ಯ...😊😊😊😊
-
ಜಾತಿ,ಧರ್ಮ ಭೇದವಿಲ್ಲದ ಜ್ಯೋತಿ ಎಲ್ಲರೂ ಬೆಳಗಿದಾಗ
ಅದುವೇ ನಿಜವಾದ ದೀಪಾವಳಿ...
ಪ್ರಜ್ವಲಿಸುವ ಜ್ಯೋತಿಗೆ ಯಾವುದರ ಬೇದವಿಲ್ಲ
ಎಲ್ಲರಿಗೂ ಅದು ಸಮಾನವಾಗೆ ಬೆಳಕು ನೀಡುತ್ತದೆ. ಇಂದಿನಿಂದ ಆದರೂ ಅರಿತು ನಡೆಯೋಣ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು...😊😊😊😊-
ಹುಡುಗರ ಪಾಡು....😁😁😁😁😁
ಮದುವೆಗೂ ಮುಂಚೆ,,,,,ಜೀವನದಲ್ಲಿ ಏನೋ ಬೇಕು...
ಮದುವೆಯ ನಂತರ,,, ಜೀವನ ಯಾಕೆ ಬೇಕು??..
ಕೇವಲ ತಮಾಷೆಗಾಗಿ....😉😉😉😉-
ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ಕಥೆ ಇರುತ್ತದೆ.ನೀವು ಜನರನ್ನು ನಿಜವಾಗಿಯೂ ತಿಳಿದುಕೊಳ್ಳುವ ಮೊದಲು ಅವರನ್ನು ನಿರ್ಣಹಿಸಬೇಡಿ.
ಅವರ ಕುರಿತು ಸತ್ಯ ಅರಿವಾದಾಗ ಸಮಯ ಸರಿದಿರುತ್ತದೆ....😊😊😊😊...ನನ್ನದಲ್ಲದ ಸಾಲುಗಳು.-
ಅನ್ನಕ್ಕಾಗಿ ಶಿಕ್ಷಣವಲ್ಲ, ಜ್ಞಾನಕ್ಕಾಗಿ ಶಿಕ್ಷಣ. ಬುದ್ದಿ ಬ್ರಮಣೆಯಾಗಿರುವ ವ್ಯಕ್ತಿಗೂ ಅನ್ನ ದೊರೆಯಬಹುದು, ಜ್ಞಾನವಲ್ಲ...ಇರುವ ಸಂಪತ್ತನ್ನು ಉಳಿಸಿಕೊಳ್ಳಲಾದರು ಜ್ಞಾನ ಅತೀ ಅವಶ್ಯಕ....😊😊😊😊
-
ಸಂತೋಷದ ಹಿಂದೆಯೇ ದುಃಖವಿದೆ ಎಂಬುದು ಅರಿವಾಗಲಿಲ್ಲ.
ಬೆಳದಿಂಗಳ ಚಂದ್ರನ ಬೆಳಕಿಗೆ ಮೈ ಮರೆತ ನನಗೆ, ಬೆಳದಿಂಗಳ ರಾತ್ರಿಯ ಮುಕ್ತಾಯದ ಅರಿವಿರಲಿಲ್ಲ.
ಬೆಳಕಿನ ಹಿಂದೆಯೇ ಅಮವಾಸ್ಯೆಯ ಕತ್ತಲೆ ಇರುವುದು ಊಹಿಸಿರಲಿಲ್ಲ.
ಅರಳಿದ ಹೂವಿನ ಚೆಂದಕೆ ಮರುಳಾದ ನನಗೆ ಹೂವಿನಂತೆಯೇ ನೀನು ದೂರವಾಗುವುದನ್ನ ನಾ ಊಹಿಸಿರಲಿಲ್ಲ.
ಎಲ್ಲದಕ್ಕೂ ಕೊನೆಗೆ ಅಂತ್ಯವಿದೆ......— % &-