ಸಿಹಿ ನೆನಪೋ
ಹುಸಿ ಮುನಿಸೋ
ಏನಾದರಾಗಲಿ ಬಿಡು
ಒಟ್ಟಿನಲ್ಲಿ
ಮಳೆಯಾಯ್ತಲ್ಲ..
ಎದೆ ನೆಲ ತಂಪಾಯ್ತು...!!
ನೆನಪಿನಂಗಳ
ಹಸಿರಾಯ್ತು...!!-
Shylaja Ramesh
(ಶೈಲೂ)
298 Followers · 17 Following
ತೋಚಿದ್ದನ್ನ ಗೀಚುವ ಹಂಬಲ
ಮಾಧವನೆ ಎನ್ನ ಮನೋಬಲ
ವೃತ್ತಿಗಿತ್ತು ಜ್ಯೋತಿಷ್ಯವನ್ನು
ಪ್ರವೃತ್ತಿಗೆ ..ಕೈಹಿಡಿದು ಬರ... read more
ಮಾಧವನೆ ಎನ್ನ ಮನೋಬಲ
ವೃತ್ತಿಗಿತ್ತು ಜ್ಯೋತಿಷ್ಯವನ್ನು
ಪ್ರವೃತ್ತಿಗೆ ..ಕೈಹಿಡಿದು ಬರ... read more
Joined 16 August 2018
23 APR AT 13:12
9 MAR AT 19:30
ಸಮಸ್ಯೆಗಳಿಲ್ಲದ ಬದುಕಿಲ್ಲ
ಧೈರ್ಯದಿಂದ ಎದುರಿಸಿದಾಗ
ಸಮಸ್ಯೆಗಳಿಗೆ ನೆಲೆಯಿಲ್ಲ
ದೈರ್ಯವೇ ಎಲ್ಲವನ್ನೂ ಗೆಲ್ಲುವ ಸಾಧನ.!
ಆಗಲೇ ಅರಳುವುದು ಹೂಮನ..!!-
6 MAR AT 22:29
ಪ್ರಯತ್ನವನ್ನೇ ಪಡದಿದ್ದರೆ ಪ್ರಬುದ್ಧರಾಗುವುದು ಹೇಗೆ.?
ಯಶಸ್ಸಿನ ಗರಿ ಮುಡಿಗೇರಿಸಲು ಪ್ರಯತ್ನವೇ ಬುನಾದಿ..!
ಅಡೆತಡೆಗಳು ಬಂದರೂ ನಿಲ್ಲದೇ, ನಿವಾರಿಸಿ ಸಾಗುವುದೇ ಯತ್ನದ ಮಹತ್ವ..!-
3 MAR AT 19:15
ಮೌನ ಮುರಿದು
ಮಾತಿಗೆ ಚಾಲನೆ ನೀಡಿಬಿಡು
ಗೆಳೆಯ
ಉಸಿರುಗಟ್ಟಿದ
ಭಾವನೆಗಳೆಲ್ಲ ಬದುಕಿಕೊಳ್ಳಲಿ-
28 FEB AT 20:29
ವಿಷಯ ವಸ್ತು ಸ್ಥಿತಿಗಳ ಬಗೆಗೆ ಸ್ಥಿತಪ್ರಜ್ಞತೆ..!
ಜೊತೆಗೆ ಅವಗಡಕ್ಕೆಡೆಗೊಡದೆ ಸಂಭಾಳಿಸುವುದೇ ಗಂಭೀರತೆ.!-
28 FEB AT 19:55
ಅರ್ಥವಿಲ್ಲದ ಜೀವನ
ಸಾರ್ಥಕ್ಯ ಪಡೆವುದೆಂದು.?
ವ್ಯರ್ಥವಾಗದೆ ಬದುಕು
ಅರ್ಥ ಪಡೆವುದೆಂದು.?-
3 JAN AT 10:53
ದಾರಿಯಲ್ಲಿ ಅಡೆತಡೆಗಳುoಟು, ಧೈರ್ಯದಿಂದ ಮುನ್ನುಗ್ಗು
ಪಯಣದಲ್ಲಿ ಜೊತೆಯಾದವರಿಗೆ, ತಲೆ ಬಾಗು
ಉತ್ತಮ ನಡೆನುಡಿಯವರ ನಡೆಗೆ, ಜೊತೆಯಾಗಿ ಮಾಗು
ಆಗಲೇ ಪಯಣ ಸುಂದರ, ಅರಿತು ಖುಷಿಯಾಗು👍
-