ಅವಳಿಗೆ ಅವಳೆ ಅಬಲೆ ಎಂದುಕೊಂಡು ಮುದುರಿದರೆ
ಪ್ರಬಲಳಾಗಲಾರಳು.
ಮತ್ತೊಬ್ಬಳ ಅಸಹಾಯಕತೆಯ ಮೇಲೆ ಪ್ರಾಬಲ್ಯ ತೋರಿದರೆ
ಹೆಣ್ಣಾಗಲಾರಳು.
-
ನನಗೆಂದೇ ಸಿಕ್ಕ ನೀನು
ಜೀವನ ವಿದು ಬೆರೆತಂತೆ ಹಾಲು ಜೇನು
ದೇವರ ಬೇಡಲಿ ಇನ್ನೇನು
ಈ ಅನುಬಂಧಕ್ಕೆ ಹರಿಸಿದರೆ ಸಾಕಿನ್ನು
ನಿನ್ನ ಜೊತೆಗೂಡಿ ಸಾಗಲು
ಬಾಳ ಹಾದಿ ನಂದನವನವಾಯಿತು
ಇನಿಯನ ಬಾಹು ಭದ್ರ ಕೋಟೆಯಾಯಿತು
ನನ್ನ ನಾ ರಾಣಿ ಎಂದುಕೊಳ್ಳಲು
ಮನೆಯೇ ಅರಮನೆಯಾಯಿತು
ಜವಬ್ದಾರಿಯ ನಿಭಾಯಿಸುತ್ತಾ
ಹೋಸ ಪ್ರಪಂಚವೇ ಸೃಷ್ಟಿಯಾಯಿತು.
-
ಧರ್ಮ ಜ್ಯೋತಿ ಧರೆಗಿಳಿದು
ಜ್ಞಾನ ಪ್ರಭೆಯ ಚೆಲ್ಲಲು
ಅಲ್ಲೊಂದು ಹುಟ್ಟಿತು ಸಂಸ್ಥೆ
ಅದನ್ನು JSS ಏಂದು ಕರೆಯಲು
ಮೊದಮೊದಲು ರಾಮರಾಯರ ಕೈ ಹಿಡಿದು
ಮಗುವಂತೆ ಅಂಬೆಗಾಲ ಹಾಕಿತು.
ಧರ್ಮಾಧಿಕಾರಿಯ ಸಾರಥ್ಯದಲಿ
ವಜ್ರ ಕುಮಾರರು ಸಾರಥಿಯಾಗಲು
ಅಂದಿನಿಂದ ಜ್ಞಾನ ಮೇದ ಮೊಳಗಿತು.
ಇಟ್ಟ ಪ್ರತಿ ಹೆಜ್ಜೆಗೂ ಹುಟ್ಟಿತ್ತೋಂದು ಮೈಲಿಗಲ್ಲು
ಜ್ಞಾನ ಜ್ಯೋತಿ ಸದಾ ಉಜ್ವಲಿಸುವಂತೆ ಕಾಯಲು,
ಜೀವ ತೆಯ್ದು ಜ್ಯೋತಿಗೆ ತೈಲವಾದ ಅಜಿತಪ್ರಸಾದರು
ಮಹನೀಯರ ಮಹಾ ಮೇಳದಲ್ಲಿ,
ಮಹಾದೇವನ ಕಂಡೆನ
ನನ್ನ ಕಾಯಕದಲ್ಲಿ ಕೈಲಾಸವ ಕಂಡೆನ,
Jss ನಾ ಕಂಡ ಕೈಲಾಸವೆಂದೆ ನಾ.-
ಧರ್ಮ ಜ್ಯೋತಿ ಧರೆಗಿಳಿದು
ಜ್ಞಾನ ಪ್ರಭೆಯ ಚೆಲ್ಲಲು
ಅಲ್ಲೊಂದು ಹುಟ್ಟಿತು ಸಂಸ್ಥೆ
ಅದನ್ನು JSS ಏಂದು ಕರೆಯಲು
ಮೊದಮೊದಲು ರಾಮರಾಯರ ಕೈ ಹಿಡಿದು
ಮಗುವಂತೆ ಅಂಬೆಗಾಲ ಹಾಕಿತು.
ಧರ್ಮಾಧಿಕಾರಿಯ ಸಾರಥ್ಯದಲಿ
ವಜ್ರ ಕುಮಾರರು ಸಾರಥಿಯಾಗಲು
ಅಂದಿನಿಂದ ಜ್ಞಾನ ಮೇದ ಮೊಳಗಿತು.
ಇಟ್ಟ ಪ್ರತಿ ಹೆಜ್ಜೆಗೂ ಹುಟ್ಟಿತ್ತೋಂದು ಮೈಲಿಗಲ್ಲು
ಜ್ಞಾನ ಜ್ಯೋತಿ ಸದಾ ಉಜ್ವಲಿಸುವಂತೆ ಕಾಯಲು,
ಜೀವ ತೆಯ್ದು ಜ್ಯೋತಿಗೆ ತೈಲವಾದ ಅಜಿತಪ್ರಸಾದರು
ಮಹನೀಯರ ಮಹಾ ಮೇಳದಲ್ಲಿ,
ಮಹಾದೇವನ ಕಂಡೆನ
ನನ್ನ ಕಾಯಕದಲ್ಲಿ ಕೈಲಾಸವ ಕಂಡೆನ,
Jss ನಾ ಕಂಡ ಕೈಲಾಸವೆಂದೆ ನಾ.-
ಮನದಿಂದ ಒಳಿತನ್ನು ಬಯಸಿ
ಬರಿ ಮಾತಿಂದ ಕಾಡಿಸಿ ಅಳಿಸಿ
ಮತ್ತೆ ಅವರಾಗಿಯೇ ಬಂದು ರಮಿಸಿ
ಉಫ್! ವಾತಾವರಣ ತಿಳಿಗೋಳಿಸುವರು
ಪ್ರಪಂಚ ಕಂಡರಿಯದ ಬಾಂಧವ್ಯ ನಮ್ಮಿಬ್ಬರದು
ನೋಡುಗರಿಗೆ ಇಲಿ-ಬೆಕ್ಕು ಆದರೆ ಒಬ್ಬರು ಮತ್ತೊಬ್ಬರಿಗೆ ಬೇಕೆ ಬೇಕು. ❤
ಆ tom & Jerry ನಮ್ಮ ಬದರಿ-ಪಲ್ಲಿಯ ಅಣಕು 🤪
-
ಮೊನ್ಮೊನ್ನೆಯ ಮಗು
ಅರಳುವ ಮೊಗ್ಗು
ಹೊತ್ತು ತಂದ ನಗು
ಹರುಷ ಹಂಚುತ್ತಾ ಸಾಗು.
ಉರುಳುವ ವರುಷ ಅನಂತವಾಗಲಿ
ಬದುಕಲ್ಲಿ ಸಂತಸವೇ ತುಂಬಿರಲಿ
ಅಥರ್ವನೆಂಬ ನಾಮವೇ
ಲೋಕಕ್ಕೆ ಪರ್ವವಾಗಲಿ.
-
ಹೊಗಳದಿರಿ ಎನ್ನ ಹೆದರುವುದು ಮನ
ತಲೆಯ ಮೇಲೆ ಹೆರುವುದು ತಲ್ಲಣ
ಅನ್ನದಾತನ ದೈವ ಮಾಡಿದಿರಿ,
ಆತನಿಗೂ ಹೊಟ್ಟೆ ಉಂಟೆಂಬುದ ಮರೆತಿರಿ
ಹೆಣ್ಣನ್ನು ಕ್ಷಮಯಾಧರಿತ್ರಿ ಎಂದಿರಿ,
ಸಿಟ್ಟು ಹೊರಹಾಕದಂತೆ ಕಟ್ಟಿದಿರಿ
ಬಾಯಿಯಿಂದ ಗುರು ಬ್ರಹ್ಮ ನೆಂದಿರಿ,
ನಿಯಮಾವಳಿಯಿಂದ ಬೋಂಬೆಯಂತೆ ಆಡಿಸುವಿರಿ
ಹೊಗಳದಿರಿ ಎನ್ನ ಹೆದರುವುದು ಮನ
ತಲೆಯ ಮೇಲೆ ಹೆರುವುದು ತಲ್ಲಣ-
ಉತ್ತರದಲ್ಲಿ ಎತ್ತರಕ್ಕೆ ಹಾರುವ
ಸೂರ್ಯದೇವನ ರಥವ ನೋಡ
ಸಪ್ತ ಅಶ್ವಗಳು ದ್ವಾದಶ ಚಕ್ರವ ಎಳೆದು
ಸಂವತ್ಸರ ಕೊನೆಗಾಣುವುದು ನೋಡ
ಆದಿತ್ಯ ರಥವನೇರಿ ಬರುವ
ಬ್ಯಾಸಗಿ ಹೊತ್ತು ತರುವ
ಚುಮು ಚುಮು ಚಳಿಗೆ
ಬಾಡಿದ ಮೈಗೆ
ಹೋಸ ಚೈತನ್ಯ ತರುವ
ಹಪ್ಪಳ ಸಂಡಿಗೆ
ಮ್ಯಾಳಗಿ ಮ್ಯಾಲೆ ಹೋದಿಸುವ
ಬ್ಯಾಸಗಿ ಬಿಸಿ ಏರಿ ಚುರ್ ಎನ್ನಲು
ಸಾರಥಿ ಅರುಣ ಧರೆಗಿಳಿದು ತಣಿಸುವ.
-
ಸಂಕ್ರಾಂತಿ! ಸಂಕ್ರಾಂತಿ!
ಧನುರ್ಮಾಸದ ಚಳಿಯ ಓಡಿಸುವ ಎಳ್ಳು-ಬೆಲ್ಲ
ತಿಂದು ಸಂಭ್ರಮಿಸುವ ಬೆಳೆದೆಲ್ಲಾ ಕಾಳು ಕಡಿಗಳ
ಕೃಷಿಯ ಸಂಭ್ರಮಿಸಿ, ಸುಗ್ಗಿಯ ಸವಿಯುವ ಕಾಲ
ಇದೋ ಎಲ್ಲರಿಗೂ ಖುಷಿಯನ್ನ ಹಂಚುವ ಮೇಳ.
ಬದುಕಲ್ಲಿ ಬದಲಾವಣೆ ಒಪ್ಪಿಕೋಳ್ಳುವುದೇ ಕ್ರಾಂತಿ
ಸೂರ್ಯ ಪ್ರೇರೇಪಿಸುವ ತನ್ನ ಪಥವನ್ನೇ ಬದಲಾಯಿಸಿ
ಕಲಿಸುವ ಬದಲಾವಣೆ ಬರಮಾಡಿಕೊಳ್ಳುವ ರೀತಿ
ಬದಲಾವಣೆ ಬದುಕ ಬೆಳಗಲೆಂದು ಹರಿಸುವ ಮಕರ ಜ್ಯೋತಿ.
-
ಶಾಲೆಗೆ ಹೋಗಬೇಕು
ಶಿಕ್ಷಣ ಎಲ್ಲರ ಹಕ್ಕು
ಕಲಿಯುವ ಶಿಸ್ತು ಇಲ್ಲದೆ
ಜ್ಞಾನ ಸುಲಭವಾಗಿ ದೊರಕದು
ಮನೆಯೇ ಸಂಸ್ಕಾರ ಕಲಿಕೆಯ ಪಾಠಶಾಲೆ
ನಿಕೇತನವೇ ವ್ಯಕ್ತಿತ್ವ ವಿಕಸನಕ್ಕೆ ಮೂಲ ಬುನಾದಿ
ಕುರುಡಾಗದಿರಲಿ ಕರ್ತವ್ಯ ವಾತ್ಸಲ್ಯದ ಅಲೆಯಲ್ಲಿ
ಕುರುಡು ಪ್ರೀತಿಯ ದುರಂತ ಕಂಡಿಹೇವು ಧೃತರಾಷ್ಟ್ರನಲ್ಲಿ.
-