Shubhodaya India
17 Followers · 7 Following
Joined 11 March 2018
4 JUN 2019 AT 19:47
ಬದುಕಲ್ಲಿ ಏಕಾಂಗಿ ಅನಿಸಿದಾಗ,
ಕಾರಣವೇ ಇಲ್ಲದೆ ಬೇಸರ ಅವುಚಿಕೊಂಡಾಗ,
ಮನಸಿನ ಹಳೆಯ ಗಾಯ ಕೆರೆದು ಹುಣ್ಣಾದಾಗ,
ನಂಗ್ಯಾರೂ ಇಲ್ಲವೇನೋ ಅನಿಸಿದಾಗ,
ಜೀವನ ಇಷ್ಟೇ ಅನ್ನೋ ನಿರ್ಲಿಪ್ತತೆ ಕಾಡಿದಾಗ
ನನ್ನ ಕೈ ಹಿಡಿಯೋದು ಪುಸ್ತಕಗಳು.
ಅಮ್ಮನಂತೆ ತಲೆ ನೇವರಿಸಿ,
ಸಮಾಧಾನ ಮಾಡೋದು ಪುಸ್ತಕಗಳು.
ಅದರಲ್ಲೂ ರವಿ ಬೆಳಗೆರೆ ಪುಸ್ತಕ ಓದುತ್ತಿದ್ದರೆ ಏನೋ ಒಂತರ ಸಮಾಧಾನ.
ನಾನು ಜ್ವರ ಬಂದು ಮಲಗಿದಾಗ ತನ್ನೆಲ್ಲ ಕೆಲ್ಸ ಬಿಟ್ಟು ನನ್ನ ಕೈ ಹಿಡಿದು ಕುಳಿತಿರುತ್ತಿದ್ದ ಅಮ್ಮನಂತೆ...
#ಪುಸ್ತಕಪ್ರೀತಿ #ಓದುವಸುಖ-
22 MAR 2019 AT 1:41
ಆ ಮೋಡ
ಮಳೆ ಸುರಿಸಿದ್ದು
ಎಲ್ಲರಿಗೂ ಗೊತ್ತು,
ಆದ್ರೆ
ನಾ ಅತ್ತಿದ್ದು
ಯಾರಿಗೂ ಗೊತ್ತಿಲ್ಲ..!-
26 DEC 2018 AT 8:54
ನಮ್ಮವರೇ
ಎನಿಸಿಕೊಂಡವರ
ಒಂದು 'ಹಿಡಿ' ನಿರ್ಲಕ್ಷ್ಯ
ಒಂದಿಡೀ
ಹೃದಯವನ್ನು
ಹೇಗೆ ಹಿಂಡಿ ಹಿಪ್ಪೆ
ಮಾಡಿಬಿಡುತ್ತದೆಯೋ..!?
- ಆಚಾರ್ಯ-
25 DEC 2018 AT 22:09
ಮತ್ತೊಂದು
ಕಥೆ
ಮಿಸುಕಾಡುತ್ತಿದೆ.
ಸಧ್ಯದಲ್ಲೇ
ಹೆರಿಗೆ..!
ನನ್ನನ್ನೊಂದಿಷ್ಟು
ಸಹಿಸಿಕೊಳ್ಳಿ..!-