ಊಹೆಗೂ ನಿಲುಕದ
ಭಾವನೆಗಳು ನಿಘಂಟಿನೊಳು
ಸಿಗದ ಪದಗಳ ಜೊತೆಗೆ
ರಾಜಿಯಾಗದೇ ಅರಸುತಿವೆ
ನಿತ್ಯವೂ ಮತ್ತೆ ಮತ್ತೆ
ನವ ನವೀನ ಪದಗಳ,
ಅವುಗಳನ್ನೆಲ್ಲ ನಿನ್ನ
ಹೃದಯದಲ್ಲಡಗಿಸಿಕೊಂಡು
ಸತಾಯಿಸುವ ನಿನ್ನ
ತುಂಟತನಕ್ಕೆ ಶರಣಾಗಿ
ನಿತ್ಯವೂ ಕಾಯುವೆ
ನೀ ಬರೆಯುವ
ನೂತನ ಭಾವಗೀತೆಗೆ,
ಭಾವೋದ್ವೇಗದಾಚೆ.- ಏನು ತಂದೆ?
23 OCT 2023 AT 23:42