ಮನದಲಿ ಮೂಡಲಿ
ಹರ್ಷದ ಬೆಳಕು
ಹಣತೆಯ ಬೆಳಕಿಲಿ
ಬೆಳಗಲಿ ಬದುಕು..-
ಶಶಿ ಕಲಾ
(((ಶಶಿ)))
65 Followers · 55 Following
Joined 30 November 2018
26 JUN 2023 AT 20:28
ಯಾವ ಸ್ನೇಹದ ಪ್ರಯಾಣ ಎಲ್ಲಿಯವರೆಗೆ ಎಂದು
ಯಾರಿಗೂ ತಿಳಿದಿಲ್ಲ.
ಬಹುಶಃ
ನಮ್ಮ ಅವಶ್ಯಕತೆ ಮುಗಿದಾಗ
ಪೂರ್ಣವಿರಾಮ..!-
20 JUN 2023 AT 19:51
ನಿನ್ನ ಪ್ರೀತಿ ಬಯಸಿ
ಹಠ ಹಿಡಿದು ಅಳುವ
ಹೃದಯಕ್ಕೆ ಸಮಾಧಾನ
ನಿನ್ನ ಆಗಮನವೇ ಹೊರತು
ನಿರ್ಗಮನವಲ್ಲ..!-
7 MAR 2023 AT 12:54
ಸಾವು ನಮ್ಮ ನೆರಳು., ಯಾವಾಗಲೂ ಹಿಂದೆಮುಂದೆ ಸುಳಿಯುತ್ತಾ ಹೊಂಚುಹಾಕುವ ವೈರಿ.,
ಹೋಗೋವರೆಗೂ ಬೆಂಬಿಡದೇ ಕಾಡುವ ಅಂತಿಮ ಸತ್ಯ..!!!-
17 FEB 2023 AT 9:38
ಸುಂದರವಾಗಿ ಕಾಣುವ ಗಾಜು ಕೆಳಗೆ ಬಿದ್ದಾಗಲೇ ಹರಿತವಾದ ಆಯುಧವಾಗಬಲ್ಲದು.
ಕೆಲವೊಂದು ಸಂಬಂಧಗಳು ಹಾಗೆ..-
28 JAN 2023 AT 19:25
ಜಾರುವ ಕಣ್ಣೀರಿನ ಹನಿಯು ಭಾರವಿಲ್ಲದಿರಬಹುದು...
ಆದರೆ ಅದರಲ್ಲಿ ಅಡಗಿರುವ ನೋವು ಸಾಕಷ್ಟು ಭಾರವಿರುತ್ತದೆ..-
26 JAN 2023 AT 13:05
ಕೆಲವು ನೆನಪುಗಳಿಂದ ಹೊರ ಬರಲು
ದಾರಿ ಹುಡುಕುತ್ತಿರುವಾಗ ಕೊನೆಗೆ ಅರಿವಾಗಿದ್ದು
ಈ ಲೋಕವನ್ನು ಬಿಟ್ಟು ಹೋಗುವ ತನಕ ಆ ನೆನಪುಗಳ ಬಂಧನದಿಂದ ಹೊರ ಬರುವುದು ಸಾಧ್ಯವಿಲ್ಲವೆಂದು..-