ಶ್ರೀನಿವಾಸ್ ❣️🕊️❣️   (#ಶ್ರೀನಿ✍️🌷)
264 Followers · 350 Following

read more
Joined 22 October 2019


read more
Joined 22 October 2019

ಎಲ್ಲಾ
ಕವಿ ಮನಗಳಿಗೂ
ಭಾವಜೀವಿಗಳಿಗೂ
ಹೊಸ ವರ್ಷದ ಹಾರ್ದಿಕ
ಶುಭಾಶಯಗಳು 🌷🌷🌷

-



ಹುಟ್ಟು ಹಬ್ಬದ ಸಿಹಿ ಶುಭಾಶಯಗಳು.
💐💐💐💐💐💐💐💐💐💐💐
ಜನುಮ ದಿನದ ಸಂಭ್ರಮ 
ಹೀಗೆಯೇ ತುಂಬಿರಲೆಂದು
ನೂರಾರು ಸಲ ಬರಲೀ
ಈ ಶುಭ ಗಳಿಗೆಯೆಂದು 
ಹೂವಿನಂತೆ ನಗುತ್ತಿರಿ
ಯಾವಾಗಲು ಎಂದು
ನಾ ಹಾರೈಸುವೆ ಇಂದು....
🌟☀️💫🌟☀️💫🌟

-



ಒಮ್ಮೊಮ್ಮೆ ನಾವು ಹಾಕುವ
ಬೇಲಿಯೇ ನಮ್ಮ ನಾಶಕ್ಕೆ
ಕಾರಣವಾಗಬಹುದು......

-



ಗೀಜುಗದಂತೆ
ಭಾವನೆಗಳನ್ನು
ಹೆಕ್ಕಿ ತಂದು
ಪ್ರೀತಿಯ ಗೂಡು
ಕಟ್ಟಿದೆ....!
ಕಟ್ಟಿದ ಗೂಡಲ್ಲಿ
ಅರೆಗಳಿಗೆಯಿರದೆ
ಮಾಯವಾದೆ...

-



ಪ್ರಕೃತಿಯ ಸೊಬಗೆ ಚೆಂದ
ನೀಡುವುದು ಮನಸಿಗೆ ಆನಂದ 
ಹಕ್ಕಿಗಳ ಗಾಯನದ ಇಂಪು
ಗಿಡಮರಗಳ ನೆರಳು ತಂಪು
ಹೂಗಳು ಬೀರುವ ಕಂಪು ..
ಇದೆಲ್ಲವು ಕಣ್ಣು ಮನಸ್ಸಿಗೆ ಹಬ್ಬನೆ
ಅನುಭವಿಸಬೇಕು ಎನಿಸಿತು ಒಬ್ಬನೇ...

-



ನಾನೆಷ್ಟೆ ದೂರವಿದ್ದರು
ನನ್ನ ಮನ ನಿನ್ನನ್ನೇ
ನೆನೆಯುವುದು,
ನಿನ್ನನ್ನೇ ಆಲಾಪಿಸುವುದು
ನಿನ್ನ ಜೊತೆಗೆ ಇರುವುದು
ನಿನಗೋಸ್ಕರ ಮಿಡಿಯುವುದು
ಪ್ರತಿಕ್ಷಣ,ಪ್ರತಿಗಳಿಗೆ
ಪ್ರತಿನಿಮಿಷ, ಪ್ರತಿದಿನ...

-



ಸುಮ್ಮನೆ ಸಮ್ಮತಿಸಿಬಿಡು ಸಖಿ
ನಿನ್ನ ಮನಸ್ಸಿನ ಮೂಲೆಯಲ್ಲಿ
ಒಂದಿಷ್ಟು ಜಾಗ ಮಾಡಿಕೊಳ್ಳುವೇ,
ನನ್ನ ಬಡಪಾಯಿ ಭಾವನೆಗಳು
ಬೆಚ್ಚನೆ ಇರಲೆಂದು

-



YQ ಬಳಗದ ನಿಮಗೂ ಮತ್ತು
ನಿಮ್ಮ ಕುಟುಂಬಕ್ಕೂ,
ಈ ವರ್ಷದ ಮೊದಲ ಹಾಗೂ
ಸುಗ್ಗಿ ಹಬ್ಬದ ಹಾರ್ದಿಕ ಶುಭಾಶಯಗಳು.
💐💐💐💐💐

-



ಕಾಣದ ನಿನ್ನಂದವ 
ವರ್ಣಿಸಲು ಸಜ್ಜಾಗಿದೆ
ಮನವಿಂದು....
ಸಿಗುವ ಭರವಸೆಗೆ
ಮುನ್ನುಡಿ ಬರೆಯಲು
ಬರುವೆ ನೀನೆಂದು...?

-



ನಿನ್ನನ್ನೇ ಆರಾಧಿಸುವ
ನನ್ನ ಭಾವನೆಗಳಿಗೆ
ಭಾವವು ನಿನಾಗಿ,
ಬಳಿ ಇರು ನನ್ನ
ಜೊತೆಯಾಗಿ !!👸👸

-


Fetching ಶ್ರೀನಿವಾಸ್ ❣️🕊️❣️ Quotes