ಶ್ರೀನಿ ಜೇನಿನ ಹನಿ  
0 Followers 0 Following

Joined 15 January 2022


Joined 15 January 2022

ತೋರು ಬೆರಳು

ನೀ ಬದಲಾಗುವುದಿಲ್ಲ,
ಶತಮಾನ ಕಳೆದರೂ ಬದಲಾಗುವುದೂ ಇಲ್ಲ,,,
ಜೀವಮಾನವಿಡಿ ಅವರಿವರ ತೋರಿಸಿ
ಕಾಲ ಕಳೆಯುವುದರ ಜೊತೆಗೆ
ಸಜ್ಜನರ ಹರಣವನ್ನು ಮಾಡಿಬಿಟ್ಟೆ,,

ಉತ್ತಮ ಸಮಾಜದ
ಜವಾಬ್ದಾರಿಯ ಹೊಣೆಗಾರಿಕೆ ವಹಿಸಿ,,
ಆ ಸಮಾಜ ವ್ಯವಸ್ಥೆಗೆ
ಸಮಸ್ಯೆಗಳ ಪೋಣಿಸಿ ಅಲ್ಲೋಲ ಕಲ್ಲೋಲ ಮಾಡಿ
ಸವಾರಿಯಾಗಿ ಮುನ್ನುಗುತಿರುವೆ,,
ವಿಧಿಯಿಲ್ಲ ಬೇಸರವಾಗಿದೆ ಎಂದರು
ಈಗ ನೀನೆ ಸರ್ವಕ್ಕೂ ಸವಾರಿ....— % &

-



Indian Republic day


-



ಸನ್ಯಾಸಿಯನ್ನೂ
ತನ್ನ ಬಯಕೆಗೆ ವಿನ್ಯಾಸ ಮಾಡುವ
ನಿನ್ನ ಈ ಸೌಂದರ್ಯ,,,
ಇನ್ನೂ,
ಸಜೀವವಾಗಿ ಬಿಡುವುದೇ,!!
ನನ್ನ ಬಗೆಬಗೆಯ ವಿನ್ಯಾಸ ಬಯಸುವ
ಈ ಆಂತರ್ಯವ,,,?


-



ತಪಸೊಂದು ಬೇಕಿದೆ
ನಿನ್ನೆದೆಯೊಳಗೆ ಸುಳಿಯಲೂ
ಎಂದು ಅಣಿಯಾಗಿ ಕುಳಿತಿಹೇನು,,
ಹಾಗಂತ..!
ತಪಸ್ಸೆಂದ ಮಾತ್ರಕ್ಕೆ
ನನ್ನನ್ನು ಸನ್ಯಾಸಿ ಎಂದು ಭಾವಿಸಬೇಡ
ನಾ ನಿನಗಾಗಿ ಬಂದವನು ಧಾವಿಸಿ...


-



ದೃಢ ಸಂಕಲ್ಪ

RIP ಆಗುವಷ್ಟರಲ್ಲಿ..
VIP ಆಗಲೇಬೇಕು...!



-



_ಎಲೇ,, ಮಾನವ
_ನೀ ಹಚ್ಚುವ ಬಣ್ಣಕ್ಕೆ,_
_ತಕ್ಕಂತೆ ನಾ ಕಥಾಲೇಖನವನ್ನು_
_ಈಗಾಗಲೇ ಸಿದ್ದಪಡಿಸಿದ್ದೇನೆ,,_
_ಇಲ್ಲಿ ಪಾತ್ರದ ಬದಲಾವಣೆಗೆ ಅವಕಾಶವಿಲ್ಲ,_
_ನಿರ್ದೇಶನ ನನ್ನದು_
_ನಟನೆ ಮಾತ್ರ ನಿನ್ನದು,_

-



ನಮ್ಮ ಇರುವಿಕೆಯ ಸಹಿಸದವರು
ನೂರು ಜನರು ಇರುವುದಕ್ಕಿಂತ..
ನಮ್ಮ ಇಲ್ಲದಿರುವಿಕೆಯನ್ನು ಸಹಿಸದವರು
ಒಬ್ಬರಿದರೆ ಸಾಕು...

-



ಸತ್ತ ದೇಹವು ನನ್ನ ನೋಡಲು
ಎಷ್ಟು ಜನರು ಬಂದಿದಾರೆ,
ಅವರುಗಳು ಏಕೆ ಬಂದಿಲ್ಲ,
ಇವರುಗಳು ಏಕೆ ನನ್ನನ್ನು ಎತ್ತಿಕೊಂಡು ಹೊತ್ತಿಲ್ಲ
ಎಂದು ಕೇಳುವುದಿಲ್ಲ,,,
ಆ ದೇಹಕ್ಕೆ ಯಾರು ಇರಲಿ ಇಲ್ಲದಿರಲಿ
ಯಾರು ಬರಲಿ ಬಾರದಿರಲಿ..!
ಅದಕ್ಕಾಗಿ ಸ್ಮಶಾನ ಒಂದು ತೆರೆದಿಯೇ ಇರುತ್ತದೆ
ಇರಲೇಬೇಕು,,,,,

-



ನನ್ನ ನೆರಳು

ಭ್ರಮೆಯಲ್ಲಿಯೇ ಸಾಗಿದ ಹಾದಿ
ಆ ಹಾದಿಯಲಿ ಅದೆಷ್ಟು ಮಂದಿ
ಜೊತೆಗಿದ್ದರೋ ಲೆಕ್ಕವಿಲ್ಲ,,

ಅವರುಗಳಲ್ಲಿ,
ನನ್ನವರ್ಯಾರು ಎಂದು ನೋಡಲಾಗಿ
ಅಲ್ಲಿದ್ದೆ ನೀನೊಬ್ಬನೇ ನನ್ನ ಜೊತೆಯಾಗಿ,,,

ಹಗಲಾದರೆ ಎಡ-ಬಲದಿ,
ಹಿಂದೆ-ಮುಂದೆಯಾಗಿ ಸಮಯಕ್ಕೆ ತಕ್ಕಂತೆ
ನನ್ನ ಸುತ್ತುತ್ತಾ ಹೋದಲ್ಲಿ ಬರುವೆ,,
ಇರುಳಾದರೆ ನನ್ನ ಮರೆಯಲ್ಲಿ ಮರೆಯಾಗಿ
ಅವಿತು ಬಿಡುವೇ,,,

ನೀ ನನ್ನದೆ ಚಿತ್ರ...
ನೀ ಭಾವನೆಗಳಿಗೆ ಮಿತ್ರ

-



ಚಿಣ್ಮಿಣಕಿ v/s ನನ್ನಾಕೆ

ಗೂಳಿಯಂತಹ ಮನಸಿನೊಳಗೆ
ದಾಳಿ ಮಾಡಿ
ಹೇಗೋ ಒಳಗೆ ನುಸುಳಿಬಿಟ್ಟೆ ನೀ,

ಅದೇನೋ ಗೊತ್ತಿಲ್ಲ
ದಾಳಿ ಅದ ನನ್ನೆದೆಗೆ ನೀ ತಂಗಾಳಿ,,
ಆದರೆ ನನ್ನ ಬಯಸಿದವಳ ಹೃದಯಕೆ
ನೀ ಗಾಳಿಗೆ ತೂರಲಾಗದ ಹಾವಳಿ,,,

ನೀ ಭಾವನೆಗಳ ಬವಳಿ ಮಾಡುವಾಕೆ
ನಿನ್ನೆದುರು ನಾನಿರಬೇಕು ಸ್ವಲ್ಪ ಜೋಕೆ
ಇಲ್ಲವಾದರೆ ಕೈಚೆಲ್ಲಿ ಹೋಗುವಳು
ನನ್ನಾಕೆ..😘

-


Fetching ಶ್ರೀನಿ ಜೇನಿನ ಹನಿ Quotes