ಶ್ರೀಕಾಂತ ಮಂಕಣಿ.   (🖋️🖊️Shrikant Mankani)
786 Followers · 1.7k Following

read more
Joined 3 December 2018


read more
Joined 3 December 2018

ಜೀವನ ಅಂದ್ರೆ ನಾವಂದುಕೊಂಡಂಗೆ ಇರುತ್ತೆ ಅನ್ನೋದು ಬರಿ ಕಲ್ಪನೆ ಮಾತ್ರ.ಆದರೆ ತದ್ವಿರುದ್ಧ ಜೀವನಕ್ಕೆ ನಾವು ಸದಾ ಹೊಂದಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಲೇಬೇಕು ಅದೇ ನಿಜವಾದ ಜೀವನ.

-



ಕೆಲವೊಮ್ಮೆ ಮಧುರತೆಯ ಹಾಡುಗಳಿಗಿಂತ ಕಳೆದು ಹೋದೆ ಕೆಟ್ಟ ನೆನಪುಗಳ ನೋವಿನ ಹಾಡುಗಳನ್ನೇ ಕೆಲವೊಮ್ಮೆ ತುಂಬಾ ಕೇಳುತ್ತೇವೆ.

-



ಕಷ್ಟದಿಂದ ಬಂದವನಿಗೆ ಮಾತ್ರ ಗೊತ್ತು,
ಜೀವನ ಚಕ್ರದ ಅತಿ ಮೌಲ್ಯದ ಬದುಕು.

-



ಒಬ್ಬರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ
ಸುಮ್ನೆ ಅವರ ಬಗ್ಗೆ ಮಾತಾಡೋದು,
ದೋಷಿಸೋದು ದೊಡ್ಡ ತಪ್ಪು.

-



ಬಾಡದಂತಹ ಪ್ರೀತಿಯ ಹೂವು ನೀನು
ಬರಿದಾಗದಿರು ಈ ಪ್ರೀತಿಯ ಭಾವನೆಯಗಳ
ಮೇಲೆ ಸಮಾಧಿ ಕಟ್ಟದಿರು..


-



ಮನುಷ್ಯನಿಗೆ ಅದೆಷ್ಟೇ ನೋವುಗಳಿದ್ದರೂ
ಕೆಲವೊಮ್ಮೆ ಯಾರೊಂದಿಗೂ ಹಂಚಿಕೊಳ್ಳದೆ,
ತನ್ನ ಮನಸಲ್ಲೇ ನುಂಗಿಕೊಳ್ಳುತ್ತಾ ತನ್ನನ್ನು ತಾನೇ
ಎದುರಿಸಿ ತನ್ನಲ್ಲೇ ತನ್ನ ಬಲವನ್ನು
ಕಂಡುಕೊಳ್ಳುವವನು ನಿಜವಾದ
ಒಬ್ಬ ಧೈರ್ಯವಂತ ಮನುಷ್ಯನ
ಲಕ್ಷಣ ಹೌದು ಅಂತ ನನಗನಿಸುತ್ತೆ.

-



ಎಲ್ಲರೂ ನಮ್ ಜೊತೆ ಇದ್ದಾಗ ಬದುಕಿನ ಬೆಲೆ
ಅಷ್ಟು ನಮಗೆ ಗೊತ್ತಾಗೋದಿಲ್ಲ.
ಅದೇ ನಮ್ ಜೊತೆ ಯಾರು ಇಲ್ಲ ಅಂದಾಗ
ಮಾತ್ರ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಬದುಕು ಅರ್ಥವಾಗುವುದು.

-



ಮುದುಡಿದ ತಾವರೆ
ಮತ್ತೆಂದು ಅರಳದು ?

-



ಸದಾ ಅವರ ಜೊತೆ ಬೆರೆಯುವುದು
ಸುತ್ತಾಟದ ಸಮಯದಲ್ಲಿ ಅವರ ಜೊತೆಗಿರುವುದು
ಪ್ರತಿ ಹಂತದಲ್ಲಿ ಅವರ ತಪ್ಪುಗಳನ್ನು ತಿದ್ದುವುದು.

-



ಪ್ರಮಾಣಿಕವಾಗಿ ಗಳಿಸಿದ ಹಣ ಎಂದಿಗೂ ಮೋಸ ಹೋಗಲ್ಲ. ಇನ್ನೊಬ್ಬರ ಕೆಟ್ಟ ಕಣ್ಣುಗಳು ಅದರ ಮೇಲೆ ಬೀಳೋದಿಲ್ಲ. ಅದೇ ಕಷ್ಟ ಪಡದೆ ಬಂದ ದುಡ್ಡು ಮನಸ್ಸಿಗೆ ನೆಮ್ಮದಿ ಕೂಡ ತರೋದಿಲ್ಲ.

-


Fetching ಶ್ರೀಕಾಂತ ಮಂಕಣಿ. Quotes