Shree Shridhar   (ಶ್ರೀಧರ್ ಮಧುವನ)
140 Followers · 194 Following

read more
Joined 7 December 2018


read more
Joined 7 December 2018
4 MAY 2023 AT 12:07

ಅವನಲ್ಲೂ ನೆಮ್ಮದಿಯಿದೆ,

ನೆಲಮಾಳಿಗೆಯೊಳಗೆ
ನಲುಗಿ ನರಳಿದ
ನೆಚ್ಚಿನ
ನವನವೀನ
ನವ್ಯನೆನಪುಗಳಾಂತರ್ಯದ
ನರಕಯಾತನೆಯಾಕ್ರಂದನದಲ್ಲಿ

-


13 APR 2023 AT 11:14

ಅಂದು
ತರತರದ ಪಟಾಕಿಗೆ
ಬೆಂಕಿ ಹಚ್ಚಿ ಸಂಭ್ರಮಿಸುತ್ತಿದ್ದರು

ಇಂದು
ತರತರದ ವೇಷಗಳಿಂದ
ಸ್ನೇಹ ನಂಬಿಕೆ ಭಾವನೆಗಳಿಗೆ
ಬೆಂಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ.

-


6 DEC 2021 AT 22:41

ಅರಳಿದ ಹೂವಿನೊಳಗೊಳಗೆ
ಹಾಗೆ ಇದೆ,
ಅರಳದೆ ಅಳಿದುಳಿದ ಅದೆಷ್ಟೋ
ಕನಸುಗಳಾ ಚಿಗುರುಗಳು,
ಆದರೂ ಅರಳುತ್ತಿದೆ,
ಮಂದಹಾಸವ ಬೀರುತ್ತ,
ಅರಿತರೂ ಅರಿಯದ ಹಾಗೆ...

-


17 JUN 2021 AT 12:07

ಅವನ ಮನದ ನೆನಪು ಕೂಡ ನೀನೇ
ಅವನ ಮನದ ಹುರುಪು ಕೂಡ ನೀನೇ


ಅವನ ಬಾಳಿನ ಗೆಳತಿಯೂ ನೀನೇ
ಅವನ ಬಾಳಿನ ಬದುಕಿನೊಡತಿಯು ನೀನೇ

ಅವನ ಹೃದಯ ಅವನದಲ್ಲ
ಏಕೆಂದರೆ
ಅವನ ಹೃದಯವೇ
ನಿನ್ನದಾಯಿತಲ್ಲ.......

-


15 JUN 2021 AT 20:50

ಎಲ್ಲರದ್ದೂ ಒಂದಲ್ಲ ಒಂದು ರೀತಿಯ
"ಸಂಚಾರ"

ನಡೆದರೆ "ಬದುಕಿನ ಸಂಚಾರ"
ತೊರೆದರೆ "ವಿದಾಯದ ಸಂಚಾರ"

ನಡೆಯಲೂ ಆಗದೆ ತೊರೆಯಲೂ
ಆಗದೆ ಉಳಿದರೆ
"ನೋವಿನದ್ದೇ ಸಂಚಾರ"

-


24 MAY 2021 AT 15:35

ಅದೇ ನೋಯಿಸುವವರ ಮುಂದೆ
ಅವರೇ ಬೆಕ್ಕಸ ಬೆರಗಾಗುವಂತೆ ಬದುಕು
ನಗು ನಗುತಾ ಬದುಕು
ಓ ಗೆಳತಿ.....
ನಗು ನಗುತಾ ಬದುಕು
ಓ ಮುದ್ದು ಗೆಳತಿ...

ನಿನ್ನ ಬದುಕಿನ ನಿರೂಪಕಿಯೂ ನೀನೇ
ನಿನ್ನ ಬದುಕಿನ ನಾಯಕಿಯೂ ನೀನೇ

-


19 MAY 2021 AT 9:43

ಹೇ ಸುನಾಮಿಯಲೆಯೇ
ಸುಮ್ಮನಿದ್ದು ಬಿಡು
ಸತಾಯಿಸದೆ ಪಕ್ಕಕ್ಕೆ
ಸರಿದುಬಿಡು

ಶೋಕಾಯಾನದ
ಸಪ್ತಸಾಗರದಲ್ಲಿ
ಸಾಗಿಹ ನೌಕೆ

ನವನವೀನ
ನೋವುಗಳನ್ನೊತ್ತ
ನಲ್ಮೆಯ ನೌಕೆ

-


18 MAY 2021 AT 19:08

ನಗುವಿನೊಳಗಣದ ನೋವಿನಂತರಾಳ

ನೋವಿನ ಸಮುದ್ರದೊಳ್
ನಗುವಿನ ನೌಕೆಯನ್ನೊತ್ತು
ನಟ್ಟಿರುಳ್ ನಡುರಾತ್ರಿಯೆನ್ನದೆ
ನಡೆದಿಹ
ನಗುಮೊಗದನೋವಿನ ನಾವಿಕನು ನಾನ್
ನೋವಿನನೆಚ್ಚಿನ ಪ್ರೀತಿಪಾತ್ರ ನಾವಿಕನು ನಾನ್

-


17 MAY 2021 AT 10:32

ಬದುಕಿನ
ಭರವಸೆಯಾದಿಯಲ್ಲಿ
ಬಂದಪ್ಪಳಿಸುತ್ತಿರುವ
ಭರಸಿಡಿಲಿನಾರ್ಭಟಗಳು

ಭವಿಷ್ಯದ
ಬದುಕಿಗೋ?

ವರ್ತಮಾನದ
ಬವಣೆಗೋ?

ನಾ ಕಾಣೆ....

-


6 MAY 2021 AT 10:09

ನಿನ್ನ
ಋಣ ತೀರಿಸಲು
ಸಾಧ್ಯವೇನಮ್ಮ

ನಿನ್ನ ರಕ್ತದ ಪುಟ್ಟ ಕಂದಮ್ಮ
ನನ್ನ ಜೀವದ ಜೀವಕೋಶ ನೀನಮ್ಮ
ನೀನಿಲ್ಲದೆ ಈ ಸೃಷ್ಟಿ ಶೂನ್ಯವಮ್ಮ
ನೀ ಎನ್ನ ಜೀವಕೆ ನಿಜ ದೈವವಮ್ಮ🙏

-


Fetching Shree Shridhar Quotes