ಜನ್ಮದಿನದ ಶುಭಾಶಯಗಳು
ಮರಳಿ ಮರಳಿ ನೆನಪಾಗುತಿವೆ......
ನಿನ್ನ ಜೊತೆ ಕಳೆದ ಆ ಕ್ಷಣಗಳು
ಜೊತೆಗೂಡಿ ಆಡಿದ ಆಟಗಳು
ಜಗಳವಾಡಿದ ದಿನಗಳು
ತರಲೆ ಮಾಡಿದ ಕ್ಷಣಗಳು
ಮಾತನಾಡಿಸದೆ ಇರುವದಿನಗಳು
ನನ್ನ ನಿನ್ನ ಸ್ನೇಹ ಚಿರಕಾಲ..........
-
ಕಾಣದ ಕಡಲ ತೀರದಲ್ಲಿ
ಜಲ್ಲೆ ರಹಿತ ದೋಣಿಯೊಂದು
ದಡದಲ್ಲಿ ನಿಲುಗಡೆಯಾಗಿದೆ
ಅಂತದರೊಳು ಮನ ಬಯಸುತಿದೆ
ಕಡಲ ತೀರ ಸೇರಲು-
ಸ್ನೇಹಕ್ಕಾಗಿ ಕೆಲವು ಸಾಲುಗಳು
ಈ ಕಣ್ಣುಗಳಿಗೆ ಕಾಣಿಸುವ ನಕ್ಷತ್ರಗಳು
ಈ ಕೈಗಳಿಗೆ ನಿಲುಕಲಾರದಾಯಿತು,
ಈ ಕಣ್ಣುಗಳಿಗೆ ಕಂಗೊಳಿಸುವ ಆ ಚಂದ್ರನ ಹೊಳಪು
ಈ ಕೈಗಳಿಗೆ ಸ್ಪರ್ಶ ಸಿಗಲಾರದಾಯಿತು,
ಈ ಚಂದ್ರ ನಷತ್ರಗಳಂತೆ ನಿನ್ನ ಸ್ನೇಹ
ಈ ಕಣ್ಣುಗಳಿಗೆ ಕಾಣಿಸಲಾರದಾಯಿತು ನಿನ್ನ ಮುಖ
ಈ ಕೈಗಳಿಗೆ ಸಿಗಲಾರದಾಯಿತು ನಿನ್ನ ಸ್ನೇಹದ ಸ್ಪರ್ಶ
ಈ ಕಿವಿಗಳಿಗೆ ಕೆಳಲಾರದಾಯಿತು ನಿನ್ನ ಸ್ನೇಹದ ಮಾತುಗಳು,
ಈ ನಮ್ಮ ಸ್ನೇಹಕ್ಕೆ ಅಂತರದ ಜೊತೆಗೂಡಿ ಮೌನವಿದ್ದರು ಕೊನೆ ಇರದಿರಲಿ
-
ನನ್ನ ಪ್ರಯತ್ನ ಹೆಚ್ಚಿಸಿದೆ
ನನ್ನ ಪ್ರಯತ್ನವನ್ನು ನೋಡಿ ಗೆಲುವು ತಾನಾಗಿಯೆ ನನ್ನ ಬಂದು ಸೇರಿತು-
ಸಾಗುತ್ತಿರುವ ಜೀವನ ಕಲ್ಪನೆಗು ಮೀರಿದ್ದು
ಯಾರಿಂದಲೂ ನಿರ್ದಿಷ್ಟ ಜೀವನವನ್ನು ಕಲ್ಪಿಸಲಾಗದು
-
ನಕ್ಷತ್ರಗಳಿಂದ ಬಂದ ನಾವು ಮರಳಿ ನಕ್ಷತ್ರ ಆಗುವ ಆಸೆ
ಮಿಲ್ಕಿ ವೇ ಗ್ಯಾಲಕ್ಸಿ ಅನ್ನು ಸುತ್ತುವರೆಯಬೇಕು ಎನ್ನುವ ಆಸೆ
ಆಸೆಗಳಿಗೆ ಮಿತಿಇಲ್ಲ ನಿರಾಸೆಗೆ ಕೊನೆ ಇಲ್ಲ-