ಅಂದು ರಾಜರು ಪ್ರೀತಿಗಾಗಿ
ಏಕರೆಗಟ್ಟಲೆ ಜಾಗದಲ್ಲಿ
ಮಹಲನ್ನು ಕಟ್ಟಿರಬಹುದು..
ಇಂದು ಅದೇ ಪ್ರೀತಿಗೆ
ಹೃದಯದಲ್ಲಿ
ಒಬ್ಬಳನ್ನು ಬಿಟ್ಟು
ಮತ್ಯಾರಿಗೂ
ಜಾಗ ಕೊಡಲೇ ಇಲ್ಲ!-
ಕನಸು ಕಲ್ಪನೆ ಭಾವನೆಗಳ ಭಾಂದವ್ಯ!🤗
'ಭಾ'ವನೆಯ
'ವ'ಚನಗಳನ್ನು
'ಬಿಂ'ಬಿಸುವ
'ಬ'ರವಣಿ... read more
ತೂತು ಬಿದ್ದ ಗೋಣಿ ಚೀಲಕ್ಕೇನುಗೊತ್ತು?
ತನ್ನೊಳಗಿರುವುದು ಅಮೂಲ್ಯವಾದ ವಸ್ತುವೆಂದು!-
Present!
ಈವಾಗಿನ ನೋವು
ಈವಾಗಿನ ಲವ್ಪು
ಈವಾಗಿನ ಸ್ನೇಹ
ಈವಾಗಿನ ಸಂಬಧಗಳು
ಈ ಕ್ಷಣದ ವಾಟ್ಸಾಪ್ ಸ್ಟೇಟಸ್ಗಷ್ಟೇ ಸೀಮಿತ!-
ಜಗತ್ತಿನ ಎಲ್ಲಾ ಧರ್ಮಗಳು ಇಷ್ಟ..
ಆದ್ರೆ...
ಆಯಾಯಾ ಧರ್ಮದ
ಅನುಯಾಯಿಗಳ ಅರ್ಥಮಾಡ್ಕೋಳೋದು,
ತುಂಬಾ ಅಂದ್ರೇ...
ತುಂಬಾನೇ ಕಷ್ಟಾ...!
😇-
ಇಗೋ ತುಂಬಿದ ಮನಸ್ಥಿತಿಯ
ಈ ಪ್ರಪಂಚದಲ್ಲಿ
ಈ ಕ್ಷಣವೂ ಬದುಕಲೇಬೇಕು..!
???
ಇನ್ನೊಂದಷ್ಟು ದಿನವೇ
ಬದುಕುತ್ತೀವಿ ಅನ್ನೋ ಪರಿಜ್ಞಾನವಿಲ್ಲದ
ಮುಖವಾಡದ ಮನಗಳ ನಡುವೆ!-
ಬ್ಯೂಟಿಪಾರ್ಲರ್ಗೆ
ಹೋಗಿ ಬಂದ ಮುಖಕ್ಕಿಂತ
ಚೂರು ನಗು ತುಂಬಿದ ಮುಖವು
ನೂರು ಪಟ್ಟು ಅಂದವಾಗಿ ಕಾಣುವುದು-
'ಶ್ರೀಮಂತಿಕೆ' ಅನ್ನೋ ಶಬ್ದ
ಹಣದ ಹಿಂದೆನೇ ಹೋಗ್ಬಿಟ್ಟಿದೆ!
ಹೃದಯದ ಹಿಂದೆ ಹೋಗಿದಿದ್ರೆ
ಬಹುಷಃ!
ಈ ಜಗತ್ತು..
ಶಾಂತಿ ಸೌಹಾರ್ದತೆಯಿಂದ
ತುಳುಕುತ್ತಿತ್ತೇನೋ..!?-
ಮಾತುಗಾರಿಕೆ ಒಂದು ಕಲೆ..
ಮೆಚ್ಚಿಸೋ ಭರದಲ್ಲಿ..
ಆಗಾಗ ನಡೆಸಲಾಗಿದೆ
ಹಲವುಬಾರಿ ಮಾತಿನ ಕೊಲೆ!
ಹುಷಾರು, ಕರ್ಣವೇ..
ಅಂಧಕಾರದ ನುಡಿಗಳಿಗೆ,
ಆತ್ಮಸಾಕ್ಷಿಯ ಬಲಿಯಾಗಿಸದಿರು!-
ಸುಳ್ಳನ್ನು ಬೆಲೆ ಕೊಟ್ಟು ಖರೀದಿಸಬಹುದು!
ಯಾಕಂದ್ರೆ...?
ಸತ್ಯಕ್ಕೆ ಬೆಲೆಕಟ್ಟುವ ಗಿರಾಕಿ
ಜಗತ್ತಿನಲ್ಲಿ ಇನ್ನೂ ಯಾರು ಹುಟ್ಟಿಲ್ಲ!
-