ಶಿವಮೂರ್ತಿ ಹೆಚ್   (#ಶಿವಮೂರ್ತಿ ಹೆಚ್)
135 Followers · 27 Following

shivamurthyh2012@gmail.com
Joined 12 November 2018


shivamurthyh2012@gmail.com
Joined 12 November 2018

ಒಂದು ಸ್ಪರ್ಶ, ಒಂದು ಅಪ್ಪುಗೆ,
ಒಂದು ಮಾತು ನೊಂದ ಜೀವಕ್ಕೆ
ಸಾಂತ್ವನವನ್ನು ನೀಡುತ್ತದೆ.
9591417815.

-



ಅಂದು ನಾವು ಕಲಿತಿದ್ದು
ಸಾಧಕರಿಂದ
ಇಂದು ನಾವು ಕಲಿಯಬೇಕಾದ್ದು
ಸಮಯ ಸಾಧಕರಿಂದ.
ಶಿವಮೂರ್ತಿ.ಹೆಚ್.9591417815.

-



ಜೀವನ ಅನುಭವಗಳ ಯಜ್ಞಕುಂಡದಲ್ಲಿ
ಪ್ರತಿಕ್ಷಣವು ಬೇಯುವವರಿಗೆ ನಿರಾಸೆ,
ನೋವು, ಸೋಲು, ದುರಾದೃಷ್ಟಗಳು
ಜೊತೆಜೊತೆಯಾಗಿ ಬರುತ್ತಲಿರುತ್ತವೆ.
9591417815.

-



ಒಬ್ಬರು ಎಷ್ಟೇ ಪ್ರಾಮಾಣಿಕತೆಯಿಂದ ಒಂದು ಕಾರ್ಯಕ್ರಮದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿಯನ್ನು ಮಾಡಿದರೂ ಕೂಡ ಅದರಿಂದ ಅವರಿಗೇನೋ ಲಾಭವಿರಬೇಕು ಹಾಗಾಗಿ ಅವರೇ ಮುಂದೆ ನಿಂತು ಮಾಡುತ್ತಾರೆಂದು ಬೆನ್ನ ಹಿಂದೆ ನಿಂತು ಮಾತಾಡುವವರೇ ಬನ್ನಿ ನೀವು ಕೂಡ ಹಣಕಾಸಿನ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ನಿಭಾಯಿಸಿ ತೋರಿಸಿರಿ. ಅವರು ಆ ಕೆಲಸ ಮಾಡುವಾಗ ಅವರಿಗಾಗುವ ಮಾನಸಿಕ ಹಾಗೂ ದೈಹಿಕ ಒತ್ತಡ, ಅವರು ಕಳೆದುಕೊಳ್ಳುವ ಅಮೂಲ್ಯ ಸಮಯ, ಹೊರಗಿನ ಧೂಳು ಮಾಲಿನ್ಯದಿಂದ ಅವರ ಆರೋಗ್ಯದ ಮೇಲಿನ ಪರಿಣಾಮದ ಅರಿವು ನಿಮಗಿದೆಯೇ?.. ಎಲ್ಲೋ ಕುಳಿತುಕೊಂಡು ಬಾಯಿಗೆ ಬಂದಂತೆ ಮಾತಾಡೋದಲ್ಲ......

-



ಅಂದು ಶಿಕ್ಷಕರಿಂದ
ವಿದ್ಯಾರ್ಥಿಗಳು ಕಲಿಯುತ್ತಿದ್ದರು.
ಇಂದು ವಿದ್ಯಾರ್ಥಿಗಳು, ಪೋಷಕರಿಂದ
ಶಿಕ್ಷಕರು ಕಲಿಯಲೇಬೇಕಾದಂತಹ
ಕಲಿಯುಗದಲ್ಲಿ ನಾವುಗಳಿದ್ದೇವೆ.

-



ತಮ್ಮ ಪರಿಶ್ರಮ, ವಿನಯ,
ವಿಧೇಯತೆ, ವಿದ್ಯೆಯಿಂದ
ವಿದ್ಯಾರ್ಥಿಗಳು ಅಂಕಗಳನ್ನು
ಗಳಿಸಬೇಕೇ ವಿನ,
ಅವರಿವರಿಂದ ಹೇಳಿಸಿ,
ಕಾಡಿ ಬೇಡಿ, ದುರ್ಮಾರ್ಗದಿಂದ
ಪಡೆಯುವುದಲ್ಲ.

-



ಓದು ಬರಹವ ಕಲಿಸಿ
ಬುದ್ಧಿವಂತರನ್ನಾಗಿಸುವ
ಗುರುಗಳಿಗೆ ಬುದ್ಧಿ ಹೇಳುವ,
ಗುರುಗಳನ್ನೇ ಕೀಳಾಗಿ ಕಾಣುವ,
ಅಪಹಾಸ್ಯಗೈಯುವ ಮಾತಾಪಿತರಿಗೆ,
ಶಿಷ್ಯ ಮಹೋದಯರಿಗೆ,
ಗುರುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ
ಹೊಂದಿರುವ ಸಮಾಜ, ಸರ್ಕಾರ, ಮಾಧ್ಯಮಗಳಿಗೆ,
ಸಹೋದ್ಯೋಗಿಗಳ ಜ್ಞಾನ, ಅನುಭವ,
ಗೌರವಗಳ ಬಗ್ಗೆ ಅಸೂಯೆ ಹೊಂದಿರುವವರಿಗೆ
ಗುರು ಪೂರ್ಣಿಮೆಯ ಶುಭಾಶಯಗಳು.

-



ಎಲ್ಲಿಯ ತನಕ ಪೋಷಕರು
ತಮ್ಮ ಮಕ್ಕಳು ಮಾಡಿರುವ
ತಪ್ಪುಗಳನ್ನು ಸಮರ್ಥಿಸಿಕೊಂಡು,
ತಮ್ಮ ಮಕ್ಕಳ ಮುಂದುಗಡೆಯೇ
ತಪ್ಪು ತಿದ್ದುವವರದೇ ತಪ್ಪೆಂದು,
ತಪ್ಪು ತಿದ್ದುವವರ ಬಗ್ಗೆಯೇ
ಕೀಳಾಗಿ ಮಾತಾಡುವವರೋ
ಅಂದೇ ಮಕ್ಕಳ ವಿದ್ಯಾರ್ಥಿ
ಜೀವನ ನರಕವಾಗುತ್ತದೆ.

-



ಸಾಧಕರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುವವರಿಗಿಂತಲೂ
ಸಮಯ ಸಾಧಕರಿಗೆ ಕೈಹಿಡಿದು
ಪ್ರೋತ್ಸಾಹಿಸುವವರೇ ಹೆಚ್ಚಾಗಿರುವರು.
9591417815.

-



ನಮ್ಮ ಜೊತೆಗಿರುವವರೇ
ಒಳ್ಳೆಯವರೆಂಬುವ ಹುಚ್ಚು
ಆದರೆ
ನಮ್ಮ ಜೊತೆಗಿದ್ದು ಬೆನ್ನಿಗೆ ಚೂರಿ
ಹಾಕಿ ಹೋಗುವವರೇ ಹೆಚ್ಚು...
9591417815.

-


Fetching ಶಿವಮೂರ್ತಿ ಹೆಚ್ Quotes