ಯಾರು ಯಾರನ್ನು ಅನುಕರಣೆ
ಮಾಡ್ತಿದಾರೆ ಅಂತ ಹೇಳೋದು
ಅಂಥದ್ದೇನೂ ಕಷ್ಟ ಅಲ್ಲ..!
ಅವರವರು ತೋರೋ ವರ್ತನೆ
ಮಾತಲ್ಲಿ ಆದ ಬದಲಾವಣೆ
ನೋಡಿ ಸುಲಭವಾಗಿ ಹೇಳಬಹುದು!
ನಡೆಯಲಿ ನಡೆಯಲಿ ಅಬ್ಬರ ಆಡಂಬರ
-
ಮರೆಯಾಗುತಿದೆ ಸಂಸ್ಕೃತಿ ಸಂಸ್ಕಾರ
ಉಳಿಸಲೇಬೇಕು ನಮ್ಮ ಆಚಾರ-ವಿಚಾರ
ಅನುಕರಣೆಯಲ್ಲಿ ಮುಂದಾಗಿರುವರು
ಪಾಶ್ಚಾತ್ಯರ ಅರೆಬರೆ ಉಡುಗೆ-ತೊಡುಗೆಗೆ
ಕಲಿತವರೇ ಹೆಚ್ಚು ಪ್ರಭಾವ ಗೊಂಡು
ಫ್ಯಾಶನ್ ಎನ್ನುತ್ತಿದ್ದಾರೆ ಉಟ್ಟು ತುಂಡುಡುಗೆ!
ಅಂಗಪ್ರದರ್ಶನ ಮಾಡುತ್ತಾ ದೃಷ್ಟಿ ಸರಿಯಿಲ್ಲ
ಬದಲಿಸಿಕೊಳ್ಳಿ ಎಂದರೆ ತಪ್ಪು ಯಾರದ್ದು?
ಸ್ವಾತಂತ್ರ್ಯದ ಹೆಸರಲ್ಲಿ ಹೆಚ್ಚು-ಕಮ್ಮಿಯಾದರೆ
ಮಾನಪ್ರಾಣಕ್ಕೆ ಕುತ್ತಾದರೆ ತಪ್ಪು ಯಾರದ್ದು?
-
ಅಮರಪ್ರೇಮಿ ಸತ್ತೋದ 01
ನಿನ್ನ ಕಂಡ್ರೆ ಆಗಲ್ಲ
ನೀನಂದ್ರೆ ಮೈಯೆಲ್ಲಾ
ಉರಿದೋಗುತ್ತೆ ಅಂತ
ಅಂದವಳನ್ನು ಮತ್ತೆ-ಮತ್ತೆ
ಪ್ರೇಮಿಸುತ್ತಿದ್ದ..ಕೇಳಿದ್ರೆ
ನೀರಾಗಿ ಅವಳ ಉರಿಗೆ
ತಂಪೆಸಗುವಾಸೆ ಎಂದ!-
ಏನು ಹೇಳ್ಬೇಕೋ..!
ಭಾವನೆಗಳಂದ್ರೆ ಅಷ್ಟಕಷ್ಟೆ ಅಂತಿದ್ದವನಿಗೆ
ಕೆಲವರ ಪರಿಚಯ ಆತ್ಮೀಯವಾಗಿ ಹೋಯ್ತು!
ಪ್ರೀತಿ-ಕಾಳಜಿಯ ಅಲ್ಪ ಪರಿಚಯವಿದ್ದವಗೆ
ನಂತರ ಅವರಷ್ಟೇ ಪರಪಂಚ ಎನಿಸಿಬಿಟ್ಟಿತು..!
ಅವರಷ್ಟಕ್ಕೆ ಅವರೆಲ್ಲ ಇಷ್ಟದವರೊಂದಿಗೆ
ಸುಮ್ಮನಿದ್ದಾಗ, ನಾನೊಬ್ಬನಿದ್ದೇನೆ ಎನ್ನುತ್ತಾ
ಸ್ವಾಭಿಮಾನವನ್ನು ಪಕ್ಕಕ್ಕಿಟ್ಟು ಮಾತಾಡಿಸಿದೆ!
ಕಾರಣ ಇಷ್ಟೇ ಸಂಬಂಧಗಳು ಸುಂದರವಾಗಿರಲಿ!
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಪರೋಕ್ಷವಾಗಿ
ಅರಿತರೂ ಪರಪಂಚ ಎಂದು ಭಾವಿಸಿದ್ದಕ್ಕಾಗಿ
ಸಂಪರ್ಕದಲ್ಲಿರಲು ಬಯಸಿದ..! ಈಗೀಗ ಎಲ್ಲ
ಅರಿವಾಗಿದೆ..ಮೌನವೊಂದೇ ಹಿತವೆನಿಸಿದೆ..!
ಧನ್ಯವಾದಗಳು ಸಿಕ್ಕಿದ್ದಕ್ಕೆ..ಸುಮ್ಮನಾಗಿದ್ದಕ್ಕೆ!
-
ನಾನು ತೋರಿಸಿದ ಪ್ರೀತಿ,ಸ್ನೇಹ
ಬಹುಶಃ ಅವರಿಗೆ ಕಪಟ ಅನಿಸಿರಬೇಕು
ಇಲ್ಲಾ..ನನ್ನದು ನಾಟಕೀಯ ಅನಿಸಿರಬೇಕು
ಅಥವಾ ನಾನು ಅಯೋಗ್ಯ ಎಂದು
ಭಾವಿಸಿರಬಹುದೇನೋ..! ತಥ್ ಇರಲಿ
ಅವರಿಗೆ ಬೇಕಾದವರು ಅಂಥ ಇದ್ದರೆ
ಅದು ಸಂಪೂರ್ಣ ಪ್ರೀತಿ-ಸ್ನೇಹದ ಭಾವನೆ!
But ನಾವು ಎಂದರೆ ಬಹುಶಃ
ಅತಿಯಾದ ಮಿತಿಮೀರಿದ ವರ್ತನೆ..!
-
ಸಂಬಂಧದ ಬೆಲೆ ಭಾವನೆಯ ಭಾವ
ನಮ್ಮವರು ಎಂದವರು ಅರಿತಿರಬೇಕು
ಸಂಭಾಷಣೆಯ ಬೆಲೆ ತಿಳಿದಿರಬೇಕು!
ಸಮಯ ಕೊಟ್ಟು ಮಾತಾಡುತ್ತಿದ್ದಾರೆ
ಎಂದರೆ ಆ ಸಂಬಂಧ ಉಳಿಯಲೆಂದು ಅಷ್ಟೇ!
ಪ್ರತಿಸಲ ಒಬ್ಬರೇ ಮಾತಾಡಿಸುವ ಹಾಗೆ
ಆಗಿಬಿಟ್ಟರೆ ಪಾಪ ನೋವೆನಿಸಬಹುದು!
ಯಾಕೆ ಸ್ವಾಭಿಮಾನ ಅವರಿಗೂ ಇಲ್ಲವಾ?
ಅವರು ಮಾತಾಡಿಸಲು ಸಂಬಂಧ ಉಳಿಸಲು
ಪ್ರಯತ್ನಿಸುತ್ತಿದ್ದಾರೆಂದರೆ ನೀವು ವಿಶೇಷ
ಅಂತಲೇ ಅರ್ಥ...!-
ಮೊದಲೆಲ್ಲ ಮನವಷ್ಟೇ
ಸೋತು ಜೀವನವಿಡೀ
ಕಾಯುತ್ತಿದ್ದರಂತೆ..! ಈಗ
ಬಹುತೇಕರು ಸಮಯಕ್ಕಿಂತ
ಮೊದಲೇ ತನು-ಮನ ಸೋತು,
ಇದರಲ್ಲೇನು ತಪ್ಪಿಲ್ಲ ಎಂದು
ಸಮರ್ಥಿಸಿಕೊಳ್ಳುತ್ತಿದ್ದಾರಂತೆ!
Think before well..!
What is right..what is wrong!
-
ಹುಟ್ಟುಹಬ್ಬದ ದಿನ
ನೀ ಕಂಡ ಕನಸೆಲ್ಲವೂ
ನೀ ಅಂದುಕೊಂಡಿದ್ದೆಲ್ಲವೂ
ನನಸಾಗಲಿ ಎಂದು ಮನತುಂಬಿ
ಹಾರೈಸಿದವರು ಎಂದಾದರೂ
ಕೇಳುವರೆ ? ನೀ ಕಂಡ
ಕನಸು,ನೀ ಬಯಸಿದ್ದೆಲ್ಲವೂ
ನನಸಾಯಿತೇ ಎಂದು..?
-
ಬಹುತೇಕ ಹುಡುಗರ
Weakness ಅಂದ್ರೆ
'ಬೇಡ' ಎಂದವರನ್ನೇ
ಮತ್ತೆ ಮತ್ತೆ ಬಯಸೋದು!
ಕಾರಣವಿಷ್ಟೇ..ಒಮ್ಮೆ
ಹಚ್ಚಿಕೊಂಡರೆ ಅಷ್ಟು
ಸುಲಭವಾಗಿ ಮರೆತು
ಬಿಡುವುದಿಲ್ಲ..!
Life is different u know-
ಹೌದು..ಅವರ ಹತ್ತಿರ ಮೊಬೈಲ್
ಇರುತ್ತೆ,ಆಗಾಗ ಆನ್ಲೈನ್ ಕೂಡಾ
ಬಂದು ಹೋಗ್ತಾರೆ..ಹಾಗಂತ
ಆನ್ಲೈನ್ ಬಂದ ಪ್ರತಿಸಲವೂ
ನಮ್ಮೊಂದಿಗೆ ಮಾತಾಡಬೇಕು
ಅನ್ನೋದು ಅತಿಯಾಸೆ ಅಲ್ವೆ?😯
Net ಇರುತ್ತೆ ಗುರು ಖಾಲಿ ಮಾಡೋದು
ಬೇಡ್ವಾ..?😅 ನಿಮಗೆ ಅವರು ಮುಖ್ಯ
ಆಗಿರಬಹುದು..ಆದರೆ...?
ಆದ್ರೆ ಏನು ಅವರಿಗೆ ಬೇರೆ ಕೆಲಸಗಳಿವೆ😁
-