ಶಿವಕುಮಾರ್...   (ಶಿವು... (ಸಂತ ಶ್ರೇಷ್ಠ))
47 Followers · 11 Following

read more
Joined 14 December 2019


read more
Joined 14 December 2019

ಬರಹ ಕಾಗದದ ಮೇಲೆ ಬರೆದಾಗ
ಮೌಲ್ಯವಿತ್ತು
ಆಧುನಿಕ ಕಾಲದಲ್ಲಿ
ತಂತ್ರಜ್ಞಾನದೊಳಗೆ ಬಿತ್ತರವಾದ ನಂತರ
ತನ್ನ ಮೌಲ್ಯವು ಕೊಂಚ ಕೊಂಚವೇ
ಕಳೆಗುಂದಿತು, ಕಾರಣ ಇದಾಗಿರಬಹುದೇ
ಅಂದು ಸಾವಿರಕ್ಕೆ ಒಬ್ಬ ಬರಹಗಾರ
ಇಂದು ಸಾವಿರಕ್ಕೆ ಸಾವಿರ ಬರಹಗಾರ...

-




ಒಂದು ಸಲ ಬೇಡ ಎಂದರೆ
ಅದು ಬೇಡವೇ ಬೇಡ
ಪುನಃ ಮನಸು ಒಡೆದರೆ
ರಿಪೇರಿ ಮಾಡಲು ನಾನು ವಸ್ತುವಲ್ಲ
ಭಾವನೆ ತುಂಬಿರುವ ಮನುಷ್ಯ...


-





ಒಬ್ಬರ ಬೆಳವಣಿಗೆಗೆ
ನಮ್ಮ ಬೆಂಗಾವಲು ಬೇಕು
ಬೆಳೆದ ನಂತರ ಅವರ
ವರ್ತನೆ ನೋಡಿ
ನಾವು ಕಂಗಾಲಾಗಬೇಕು
ಪ್ರಸ್ತುತ ನೆಡೆಯುತ್ತಿರುವುದು ಇದೇ...


-





ಎಲ್ಲಿಂದ ನಿನ್ನ ಬೆಳವಣಿಗೆ ಪ್ರಾರಂಭವೋ
ಅಲ್ಲಿಂದಲೇ ಸಂತೋಷ ಮತ್ತು ದುಃಖವೂ
ನಿನ್ನೊಂದಿಗೆ ಸುತ್ತುವರಿದಿರುತ್ತದೆ...


-






ಎಷ್ಟೋ ಪ್ರೀತಿಯು
ಇಷ್ಟ ಪಟ್ಟು ಒಂದಾದರೂ
ಹೊಂದಾಣಿಕೆಯೆಂಬುದೇ ಇರುವುದಿಲ್ಲ
ಆದರೆ ಬೆಟ್ಟದಷ್ಟು ಪ್ರೀತಿ ಇರಿಸಿಕೊಂಡು
ಕಾಯುವ ಹೃದಯಕ್ಕೆ ಇಷ್ಟಪಡುವ
ಜೀವದೊಂದಿಗೆ ಬದುಕುವ ಭಾಗ್ಯವೇ
ಇರುವುದಿಲ್ಲ...

-




ಇರಬಹುದೇ ನಿಮ್ಮ ನಾಮವ ಭಜಿಸದೆ
ಸದಾ ಕಾಲ ಕಾಯುವ ನಿಮ್ಮ ನೆರಳಿನಲ್ಲಿರುವೆ
ಹರನಿಲ್ಲದ ನರ ಜನ್ಮವಿಲ್ಲ ಈ ಲೋಕದೊಳು
ಸಮಸ್ತ ಬ್ರಹ್ಮಾಂಡವ ಆವಾರಿಸಿರುವ ಅನಂತ ನೀವು
ನನಗೆ ತಿಳಿದಿದೆ ತಂದೆ ಹರ ನಾಮ ಇಲ್ಲದೆ
ಪರಿಪೂರ್ಣವಾಗದು ಪ್ರತಿ ಜನ್ಮವು ಎಂದು...









-







ರೋಮ ರೋಮದಲ್ಲು
ಪ್ರಭು ಶ್ರೀರಾಮ ನಾಮ ತುಂಬಿಕೊಂಡ
ಸ್ವಾಮಿ ಭಂಟ ಪ್ರಾಣದೇವ
ಶ್ರೀ ಆಂಜನೇಯನ ಕಂಡ ಕಣ್ಣುಗಳು
ಎಷ್ಟು ಧನ್ಯವಾದವೋ ಎಷ್ಟು ಪುಣ್ಯಮಾಡಿದವೋ...


-





ಮನುಷ್ಯತ್ವವನ್ನು ಮರೆಯಾಗಿಸಿ
ಕರುಣೆಯಿಲ್ಲದ ಕಲ್ಲಿನಂತಿರಬೇಡ
ಹೃದಯ ವೈಶಾಲ್ಯತೆ ಮೆರೆದು ನೋಡು
ಕಾಣದ ದೇವರಾಗಿ ನಿಂತು ಬಿಡುವೆ ಎಲ್ಲಾರೆದುರು...


-




ಸಿಗುವುದೋ ಇಲ್ಲವೋ
ಎಂಬ ಅಂದಾಜು ಇರದೆ
ಪ್ರೀತಿಗೆ ಬಿದ್ದವರು
ಇಂದು ನೋವಿನ ಸಾಲಿನಲ್ಲಿ
ಸಾಲುಗಟ್ಟಿ ನಿಂತಿದ್ದಾರೆ...

-







ನೆನಪಿಟ್ಟುಕೋ
ಇಲ್ಲದಿರುವ ಜೀವದ ನಿರೀಕ್ಷೆಗೆ
ಇರುವ ಬದುಕು ಸೂತಕದಂತೆ ಜೀವಿಸಿದರೆ
ಮರುಗುವುದು ನೀನೆ ಮರಣಿಸುವುದು ನೀನೆ...

-


Fetching ಶಿವಕುಮಾರ್... Quotes