ಅವಳೆಂದರೆ ಎಲ್ಲಾ ಹೇಳಬೇಕೆನಿಸಿದರೂ 🌹
ಅವನೇ ಮೊದಲು ಹೇಳಬೇಕು ಎಂದುಕೊಳ್ಳುವವಳು...😊-
ರಜೆಗಾಗಿ ಹಂಬಲಿಸುತ್ತಿತ್ತು ಈ ಮನ
ಆದರೆ ರಜೆಯೇ ಸಜೆಯಾಗಿದೆ ಈ ದಿನ...-
ಮರಳಿ ಬಾ ನನ್ನ ಬಾಲ್ಯವೇ...
ಸಾಕಾಗಿದೆ ಈ ಒತ್ತಡಭರಿತ ಜೀವನ
ಕರೆದೊಯ್ಯು ನನ್ನನು
ಮತ್ತೆ ಆ ಮುಗ್ದ ಪ್ರಪಂಚಕ್ಕೆ
ನನ್ನ ಗೆಳೆಯ-ಗೆಳತಿಯರ ಜೊತೆ
ನಕ್ಕು-ನಲಿಯುವಾಸೆ...😊-
108 ಗಾಡಿಗೆ ಕರೆ ಮಾಡುವುದರಿಂದ ಹಿಡಿದು,
ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಸಹಾಯಮಾಡಿದ ಎಲ್ಲರೂ ದೇವರುಗಳೇ...-
ನಾ ಬರೆವ
ನನ್ನೊಲವ
ಸಾಹಿತ್ಯದಿ
ಪದವಾಗದಿದ್ದರೇನಂತೆ
ನಾ ಹಿಡಿವ ಲೇಖನಿಯಾಗಿ
ಪದಗಳಿಗೆ ಜೀವ ತುಂಬಿರುವೆ...
ನನ್ನ ಹೃದಯದ ಬಡಿತವಾಗಿ
ಸದಾ ನನ್ನ ಜೊತೆಗಿರುವ ನೀನು
ನನ್ನ ಮನದ ತುಂಬೆಲ್ಲ ಆವರಿಸಿರುವೆ...
ನೀನಿರಲು ಜೊತೆಗೆ
ನನಗೆ ಕ್ಷಣ ಮತ್ತು ದಿನದ ಪರಿವೆಯೇ ಇಲ್ಲದಾಗಿದೆ...
ನನಗೆ ನೀನೇ ಎಲ್ಲ
ನೀನಿಲ್ಲದೆ ಬೇರೇನೂ ಇಲ್ಲ
ನನ್ನೊಲವೇ ನೀನಾಗಿರುವಾಗ
ಕಷ್ಟವೇ ಬರಲಿ
ಸುಖವೇ ಬರಲಿ
ಎಲ್ಲವನ್ನೂ ಸಮಾನವಾಗಿ ಸ್ವೀಕರಿಸೋಣ
ಚೆನ್ನಾಗಿ ಬಾಳೋಣ...-
ನನ್ನನುಮತಿ ಇಲ್ಲದೆ ನನ್ನ
ನಿನ್ನ ಹೃದಯದಲ್ಲಿಟ್ಟುಕೊಂಡಿದಲ್ಲದೆ,
ಅಲ್ಲಿಯೇ ಮನೆಮಾಡಿಕೊಟ್ಟ
ಚೆಲುವೆ ನೀನೇನಾ..!-
ಯಾವಾಗ ಅಶಾಂತಿ ಇರುತ್ತೋ, ಆಗಲೇ ನಮಗೆ ಶಾಂತಿಯ ಬೆಲೆ ಗೊತ್ತಾಗೋದು.
ಯಾವಾಗ ಜಂಜಾಟಗಳಿರಿತ್ತವಯೋ, ಆವಾಗಲೇ ನೆಮ್ಮದಿಯ ಬದುಕಿಗೆ ಬೆಲೆ ಬರುವುದು.
ಉಪ್ಪು ತಿಂದಾಗಲೇ, ನಮಗೆ ಉಪ್ಪಿನ ರುಚಿ ಗೊತ್ತಾಗುವುದು.
ಹೆಚ್ಚು ಖಾರ ತಿಂದಾಗಲೇ, ನಮಗೆ ಸಿಹಿಯ ಬೆಲೆ ಗೊತ್ತಾಗುವುದು.
ಆದ್ದರಿಂದ ಜೀವನದಲ್ಲಿ ಬರುವ ಏರಿಳಿತಗಳಿಂದ ನೊಂದುಕೊಂಡು ಫಲಾಯನ ಮಾಡಬಾರದು...-