ಮೈ ಬಣ್ಣ ಮತ್ತು ವ್ಯಕ್ತಿತ್ವ
ವ್ಯಕ್ತಿಯ ಮೈ ಬಣ್ಣ ನೋಡಿ ಅಳೆಯಬೇಡಿ ,
ಯಾಕೆಂದರೆ ಕಾಲ ಗತಿಸಿದಂತೆ ಮೈ ಬಣ್ಣ ಮಾಸಿಹೋಗುವುದು.
ವ್ಯಕ್ತಿಯ ವ್ಯಕ್ತಿತ್ವ ನೋಡಿ ಅಳೆಯಿರಿ,
ಯಾಕೆಂದರೆ ವ್ಯಕ್ತಿ ಅಳೆದರು ವ್ಯಕ್ತಿತ್ವದ ಗುಣಗಾಣ ಎಲ್ಲೆಡೆ ಇರುವುದು.
ದಿನಕ್ಕೊಂದು ಬರಹ:-
ಮೆಚ್ಚುಗೆ ಅಭಿಮಾನವೇ ನನಗೆ ಒದುಗರ... read more
ಸುಣ್ಣ-ಬೆಣ್ಣೆ, ಅವಶ್ಯಕತೆ-ಅನಿವಾರ್ಯತೆ
ಸುಣ್ಣ ಮತ್ತು ಬೆಣ್ಣೆ ನೋಡೋಕೆ ಎರಡು ಒಂದೆ ತರಾ ಕಂಡರೂ
ಸುಣ್ಣ- ಗೋಡೆಗೆ ಹಚ್ಚತೀವಿ
ಬೆಣ್ಣೆ-ಊಟಕ್ಕೆ ಹಚ್ಚತೀವಿ
ಎರಡರ ಸ್ವಭಾವ ಬೇರೆ ಬೇರೆ ,
ಹಾಗೆ
ಅವಶ್ಯಕತೆ ಮತ್ತು ಅನಿವಾರ್ಯತೆ ಒಂದೆ ತರ ಕಂಡರೂ
ಅವಶ್ಯಕತೆ -ಕೆಲವೊಮ್ಮೆ ಇಲ್ಲದಿದ್ದರೂ ನಡಿಯುತ್ತೆ,
ಅನಿವಾರ್ಯತೆ-. ಇದು ಬೇಕೆ ಬೇಕಾಗಿರುತ್ತೆ
ಎರಡು ಶಬ್ದಗಳು ಒಂದೆ ಕಂಡರು ಅರ್ಥ ಬೇರೆ ಬೇರೆ.-
ಪ್ರಸ್ತುತ
ನಮ್ಮ ಕೈಯಲ್ಲಿ ಎನು ಸರಿ ಮಾಡೋಕೆ ಆಗೋದಿಲ್ಲಾ ಅದರ ಬಗ್ಗೆ ಜಾಸ್ತಿ ವಿಚಾರಮಾಡಬಾರದು.
ನಮ್ಮ ಕೈಯಲ್ಲಿ ಎನ ಮಾಡಬಹುದು ಅದರ ಬಗ್ಗೆ ಮಾತ್ರ ಚಿಂತಿಸಿ ಆ ಕೆಲಸವನ್ನು ಯಶಸ್ವಿಗೊಳಿಸಬಹುದು.
ಹಿಂಗಾಗಿ ಆಗದಿರುವ ಬಗ್ಗೆ ಚಿಂತಿಸದೆ,
ಆಗುವ ಕೆಲಸಕ್ಕೆ ಹೆಚ್ಚಿಗೆ ಪ್ರಯತ್ನ ಪಟ್ಟರೆ ಆ ಕೆಲಸವಾದರೂ ಆಗುತ್ತೆ ಇದೆ ನನ್ನ ನಂಬಿಕೆ...-
ನಾನು ಕಂಡಿದ್ದೇನೆ..
ಹಣ ,ಅಧಿಕಾರವಿದೆಯೆಂದು ಅಹಂಕಾರದಿ ಬೀಗ ಬೇಡ.
ಎಲ್ಲವನ್ನು ಕಳೆದುಕೊಂಡವರನ್ನು ನಾನು ಕಂಡಿದ್ದೇನೆ.
ಎಲ್ಲ ಬಲ್ಲೆನೆಂದು ಅನ್ಯರಿಗೆ ಕೀಳಾಗಿ ಕಾಣಬೇಡ .
ಅವರಿಗಾಗಿಯೇ ಕಾದು ಕುಳಿತ ಪ್ರಸಂಗವನ್ನು ನಾನು ಕಂಡಿದ್ದೇನೆ.
ನನ್ನ ಹಿಂದೆ ನೂರಾರು ಜನರಿದ್ದಾರೆಂದು ಕೂಗಾಡಬೇಡ
ಒಮ್ನೊಮ್ಮೆ ಒಬ್ಬಂಟಿಯಾಗಿ ನಿಂತಿರುವುದ ನಾನು ಕಂಡಿದ್ದೇನೆ.
ನಂದು ನಂದು ಅಂತಾ ಯಾವತ್ತೂ ಅನ್ನಬೇಡ ..
ಎಲ್ಲವನ್ನು ಬಿಟ್ಟು ಬರಿಗೈಲಿ ಹೋದವರನ್ನು ಕಂಡಿದ್ದೇನೆ.-
ಬೆಲೆ .
ಇತ್ತಿಚಿನ ದಿನಗಳಲ್ಲಿ ಚೆನ್ನಾಗಿರೋ ಬಟ್ಟೆಗಳಿಗಿಂತ ಹರದಿರೊ ಬಟ್ಟೆಗಳಿಗೆ ಬೆಲೆ ಜಾಸ್ತಿ..
ಹಾಗೆ
ಜೀವನದಲ್ಲಿ ನೇರವಾಗಿ ಮಾತಾಡೋರು ,ಸತ್ಯವಾಗಿರೊರಿಗಿಂತ
ಸುಳ್ಳು ಮಾತಾಡೋರು ,ನಾಟಕೀಯವಾಗಿರೋರಿಗೆ ಬೆಲೆ ಜಾಸ್ತಿ ..-
@ಕಲ್ಮಶ@
ದೇಹದಲ್ಲಿ ಕಲ್ಮಶವಿದ್ದರೆ ಹೇಗಾದರೂ ತೆಗೆಯಬಹುದು .
ಆದರೆ ಮನಸ್ಸಿನೊಳಗೆ ಕಲ್ಮಶವಿದ್ದರೆ ತೆಗೆಯಲು ಬಾರದು..-
ಇರಬೇಕು ನಿನ್ನಂಗ
ಲಾಭ ನೋಡಿ ಸ್ನೇಹ ಮಾಡೋ ಕಾಲದಾಗ
ನಿಸ್ವಾರ್ಥದಿಂದ ಗೆಳೆತನ ಮಾಡಾವ ಜೀವನದಾಗ
ಕಷ್ಟ ಅಂತಾ ಬಂದರೆ ಒಡಿ ಹೋಗೊ ಜನರಿರುವಾಗ
ಹೆಗಲಿಗೆ ಹೆಗಲ ಕೊಟ್ಟು ನಿಂತ್ಯೆ ನೀ ನಡು ದಾರ್ಯಾಗ
ನಮ್ಮವರೆ ನಮ್ಮ ಬಗ್ಗೆ ಚಿಂತಿಸದಿರುವಾಗ
ಇನ್ನೊಬ್ಬರ ಕಷ್ಟ ಅರ್ಥಮಾಡಿಕೊಳ್ಳೊ ಗುಣವನ್ನ ಕಂಡೆ ಕಷ್ಟದಾಗ
ನೀ ಇಲ್ಲೋ ಯಾರ ಹಂಗಿನ್ಯಾಗ
ನೀನಗೆನ ಕಮ್ಮಿ ಗುಣದಾಗ
ನೆನಸ್ತಾರ ಜನರು ತಂಪೊತ್ತಿನ್ಯಾಗ
ಎಲ್ಲಾರೂ ಬಯಸ್ತಾರೂ ಆಗಾಕ ನಿನ್ನಂಗ.
ಆಗಕ ಆಗಂಗಿಲ್ಲಾ ಸಂತೋಷನಂಗ .-
ಸದ್ಗತಿ -ದುರ್ಗತಿ
ಜನರು ನಿಮ್ಮನ್ನು ನೋಡಿ ಗೌರವಿಸಿದರೆ ಅದು ನಿಮ್ಮ ಸದ್ಗತಿ .
ಆದಾಗ್ಯೂ ಕೆಲವರು ನೋಡಿ ಉರ್ಕೊಂಡ್ರೆ ಅದು ಅವರ ದುರ್ಗತಿ.-
ಸಂತೃಪ್ತಿ ನಗು...
ತುಂಬಾ ಹಸಿದವನಿಗೆ ಅಣ್ಣ ಸಿಕ್ಕಾಗ
ವರ್ಷಗಳಿಂದ ನಿರುದ್ಯೋಗಿಯಾದವನಿಗೆ ಉದ್ಯೋಗ ಸಿಕ್ಕಾಗ
ಅನಾಥನಿಗೆ ಪ್ರೀತ್ಸೋ ಕುಟುಂಬ ಸಿಕ್ಕಾಗ
ವರ್ಷಗಳ ಕನಸು ನನಸಾದಾಗ
ಮರುಭೂಮಿಯಲ್ಲಿ ನೀರರಸಿದವಗೆ ನೀರು ಸಿಕ್ಕಾಗ
ದಟ್ಟಡವಿಯಲ್ಲಿ ದಿಕ್ಕು ತಪ್ಪಿದವನಿಗೆ ದಾರಿ ಸಿಕ್ಕಾಗ
ಸಮುದ್ರದ ಮದ್ಯದಲಿ ಸಿಲುಕಿರುವವನಿಗೆ ಭೂಮಿ ಕಂಡಾಗ
ಮುಖದಲ್ಲಿ ಮೂಡುವ ನಗುವೆ ಸಂತೃಪ್ತಿ ನಗು..
-
ಕಾಲ
ಅವಕಾಶವಾದಿಗಳು ಹೆಚ್ಚಾಗಿರುವ ಕಾಲದಲ್ಲಿ
ನಿಸ್ವಾರ್ಥಿಗಳಿಗೆ ಬೆಲೆ ಇರುವುದಿಲ್ಲ
ತಾಳಕ್ಕೆ ತಕ್ಕಂತೆ ಕುಣಿಯೋರ ನಡುವಿನಲ್ಲಿ
ಸರಿಯಾಗಿ ನಡೆಯೋರಿಗೆ ಕಾಲವಿಲ್ಲ-