ಮೇಲಂಗಿ ಒಂದು ಬೇಕಿದೆ
ಮೇಲಂಗಿ ಒಂದು ಬೇಕಿದೆ
ಹರಿದ ಅಂಗಿಯ ಮುಚ್ಚಲು
ಸುಕ್ಕುಗಟ್ಟಿದ ಚರ್ಮ ಮರೆಮಾಚಲು
ಹಸಿದ ಹೊಟ್ಟೆ ಯಾರಿಗೂ ಕಾಣುತ್ತಿಲ್ಲ
ಹರಿದ ಬಟ್ಟೆ ಊರೆಲ್ಲಾ ಡಂಗೂರ ಸಾರಿದೆ
ಅದಕ್ಕೆ ಮೇಲಂಗಿ ಒಂದು ಜರೂರಿದೆ
ಮೇಲಕ್ಕೆ ಏರದ, ಕೇಳಕ್ಕೆ ಇಳಿಯದ
ಎಡಕ್ಕೆ ಸರಿಯದ , ಬಲಕ್ಕೆ ವಾಲದ
ಮೇಲಂಗಿ ಒಂದು ಬೇಕಿದೆ
ಬೆನ್ನಿಗಟ್ಟಿದ ದರಿದ್ರ ತೋರದೆ
ಸಮ ಸಮಾಜದ ತೋರಿಕೆಗೆ
ಮೇಲಂಗಿ ಒಂದು ಬೇಕಿದೆ
ಸುಕ್ಕುಗಟ್ಟಿದ ಮೈ ಮುಚ್ಚಲು
✍️-
Day dreamer night writer
Happily living wit simple principl... read more
ಜೀವನಕ್ಕೆ ಇಂತಹುದೇ ಅಂತಾ ಯಾವುದೇ ಅರ್ಥವಿಲ್ಲ...
ಇದನ್ನೇ ಅರ್ಥ ಮಾಡಿಕೊಳ್ಳಲು ಪ್ರತಿ ದಿನ ಹೋರಾಟ ಮಾಡುವುದೇ ಜೀವನ..-
ಏನಾದರೂ ಹೇಳೋಣ
ಒಂದಿಷ್ಟು ಹರಟೆ
ಒಂದಿಷ್ಟು ಮಾತುಕತೆ
ನಿನ್ನದೇನಿದ್ದರೂ ಹೇಳು
ನನ್ನದೇನಿದ್ದರೂ ಕೇಳು
ಒಂದಿಷ್ಟು ನಗು
ಒಂದಿಷ್ಟು ಅಳು
ಒಟ್ಟಿಗೆ ಕೂತು ನೆನಪಿನ
ದೋಣಿ ಏರಿ ಸುತ್ತಿ ಬರೋಣ
ಹಿಂದಿನ ನೆನಪು ಮಾಸದಿರಲಿ
ಮುಂದಿನ ಭವಿಷ್ಯ ಮೂಡುತಿರಲಿ
ಒಂದಿಷ್ಟು ಭರವಸೆಗಳನ್ನು ನೀಡೋಣ
ಕೈಹಿಡಿದು ಒಟ್ಟಿಗೆ ಮುನ್ನಡೆಯೋಣ
ಸುಖ ದುಖಃ ಗಳ ಹಂಚಿಕೊಳ್ಳೋಣ
ಏಳು ಬೀಳುಗಳ ದಾಟಿ ಸಾಗೋಣ
ಇಡೀ ಜೀವನ ಒಟ್ಟಿಗೆ ಕಳಿಯೋಣ
ಎಂಬ ಸಂಕಲ್ಪ ಮಾಡೋಣ
ನೀ ನನ್ನ ತೋಳುಗಳಲ್ಲಿ
ನಾ ನಿನ್ನ ತೋಳುಗಳಲ್ಲಿ
ಸ್ವಲ್ಪ ಸಮಯ ಕಳಿಯೋಣ
ಪಿಸು ಮಾತುಗಳಿಗೆ ದ್ವನಿಯಾಗೋಣ-
ಮೂರು ಗಂಟು ಹಾಕಿ
ಇಂದಿಗೆ ಮೂರು ವರ್ಷ
ಮದುವೆ ಎಂಬ ಮೂರಕ್ಷರದ
ಬಾಂಧವ್ಯ ಬೆಸೆದ ವಾರ್ಷಿಕೋತ್ಸವ
ಜೀವನ ಎಂಬ ಮೂರಕ್ಷರದ ಪಯಣದಲ್ಲಿ
ಸಂಸಾರ ಎಂಬ ಮೂರಕ್ಷರದ ದೋಣಿ ಏರಿ
ಹೆಂಡತಿ ಎಂಬ ಮೂರಕ್ಷರದ ಗೆಳತಿಯಾಗಿ
ಜೊತೆ ಜೊತೆಯಾಗಿ ಬಾಳಲು ಕೈ ಹಿಡಿದ ದಿನವಿದು
ಮಮತೆಯ ಮಡಿಲಲ್ಲಿ ಮಗಳನ್ನಿತ್ತು
ರಾಘವಿಗೆ ತಾಯಿಯಾದೆ ನೀನು
ತಂದೆ ಎಂಬ ಗೌರವ ನೀಡಿದೆ ನೀನು
ಬಾಳಿಗೊಂದು ಅಮೂಲ್ಯ ಉಡುಗೊರೆ ಅದು
ಮೂರು ವರ್ಷಗಳು ಕಳೆಯಿತು ಈಗ
ನೂರು ವರ್ಷದ ಕನಸಿದೆ ಇನ್ನೂ
ಪ್ರೀತಿ ತುಂಬಿದ ಬದುಕು ಸಾಗಲಿ
ಪ್ರೇಮದಿಂದ ಜೀವನ ನಡೆಯಲಿ
ಸೋಲು ಗೆಲುವು ಪಕ್ಕಕ್ಕಿಟ್ಟು
ಖುಷಿ ಖುಷಿಯಿಂದ ಅನುದಿನವೂ ನಕ್ಕು
ಕಷ್ಟ ನಷ್ಟ ದೂರ ಸರಿದು
ನೋವು ನಲಿವು ಒಲವು ತಂದು
ಸಾಗಲಿ ಜೀವನ ಸಾಕ್ಷಾತ್ಕಾರದ ಕಡೆಗೆ
ಇರಲಿ ಹಿರಿಯರ ಹಾರೈಕೆ ನಮಗೆ
ಮದುವೆಯ ವಾರ್ಷಿಕೋತ್ಸವ ಇಂದು
ಶುಭಾಶಯಗಳು ಬಾಳ ಸಂಗಾತಿಗೆ ಎಂದೆಂದೂ..
✍️ ಶಿವಾನಂದ ವಾಯ್ ಆದಾಪೂರ-
ತುಂಬಿದೆ ಮನೆ ಮನವೆಲ್ಲಾ
ಈಗ ಮಕ್ಕಳದೇ ರಾಜ್ಯಭಾರ
ನಿತ್ಯವೂ ನೂತನ ಅನುಭವ
ಇಲ್ಲಿ ಯಾರಿಗೂ ಇಲ್ಲ ಪರಾಭವ
ಹಿರಿಯವನಾದ 'ಜೀವನ'
ಸದಾ ಚಟುವಟಿಕೆಯ 'ಚೇತನ'
ಮೊದಲ ಬಾರಿ ಚುಂಬಿಸಿದರು
ಮನೆಯಲ್ಲಿ ಸಂತಸದ ಸಿಂಚನ
ಶ್ವೇತ ವರ್ಣದ ಸುಂದರ
'ಸಾತ್ವಿಕ' ಪ್ರೀತಿಯ ಪ್ರತಿಬಿಂಬ
'ರುತ್ವೀಕ'ನೊಂದಗಿನ ಅನುಬಂಧ
ಪ್ರೇಮ ಗುಡಿಗೆ ಹಾಕಿದೆ ಹಂದರ
ರಾಗ ತಾಳ ಮದ್ದಳೆ
'ರಾಘವಿ' ಎಂಬ ಮುದ್ದು ಮಗಳೇ
ಹರಿಯುತಿದೆ ನಗುವಿನ ಅಲೆ
ಕಟ್ಟಲಾದೀತೆ ಇದಕ್ಕೆಲ್ಲಾ ಬೆಲೆ
ಮಕ್ಕಳಿರಬೇಕು ಮನೆಯ ತುಂಬಾ
ನಗು ವಿರಬೇಕು ಮನದ ತುಂಬಾ
ನಲಿಯುತ ಇರಲಿ ಹೀಗೆ ಬದುಕಿನ ಬಂಡಿ
ಜೊತೆಯಾಗಿ ಇರಲಿ ಹೀಗೆ ಭವಿಷ್ಯದ ಕೊಂಡಿ-
ಮಗಳು ರಾಘವಿ
ನಿತ್ಯ ಹಸನ್ಮುಖಿ
ಚಂದ್ರನ ಬೆಳಕು
ಹಾಲು ಗಲ್ಲದ ನಗು
ನಿಷ್ಕಲ್ಮಶ ಮನಸ್ಸು
ಪ್ರೀತಿ ತುಂಬಿದ ಕೂಸು
ನಕ್ಕರೆ ಅದೇ ಸ್ವರ್ಗ
ಅದು ನಿತ್ಯ ಸಂತಸದ ಮಾರ್ಗ
ಅಂಬೆಗಾಲಿಡುವ ಕುವರಿ
ಅವಳು ನಕ್ಕಾಗ ನೋ ವರಿ
ಮರೆಯಾಗಿಸುವುದು ಎಲ್ಲ ನೋವು
ಅವಳ ನಿತ್ಯ ನೂತನ ನಗುವು
ಮಗು ನೀ ನಗುತಿರು
ಜಗವೆಲ್ಲಾ ನೀ ಮೆರೆಯುತ್ತಿರುವ
ನಿನ್ನಾಗಮನ ತಂದಿದೆ ಸಂತಸ ನಮಗೆ
ಆಕಾಶ ಭೂಮಿ ಎರಡನ್ನು ಬೆಸೆದಿದೆ-
🤍
One day you'll just be a memory to some people, do your best to be a good one !
🤍-
ಸರ್ವ ಸ್ವತಂತ್ರ ಸುಂದರ ರಾಜ್ಯ
ಸರ್ವ ಜನಾಂಗದ ಸರ್ವತೋಮುಖಿ
ಅಭಿವೃದ್ಧಿಯ ಅಡಿಪಾಯ ಸ್ವರಾಜ್ಯ
ನಲ್ಮೆಯ ಒಲುಮೆಯ ಸುರಾಜ್ಯ
ಇತಿಹಾಸದ ಪುಟಗಳನ್ನೊಮ್ಮೆ ತಿರುವಿದರೆ
ತೆರೆಯುವುದು ತೊರೆದ ಜೀವಗಳ
ಅಸಂಖ್ಯಾ ಬಲಿದಾನಗಳ ಕೊಡುಗೆ
ಸ್ಥಾಪಿಸಲು ನಮ್ಮ ಈ ಸ್ವರಾಜ್ಯ
ನವಭಾವ ನವಶಕ್ತಿ ನವ ವಿಚಾರಗಳ ಅನಾವರಣಕೆ
ಆಧುನಿಕತೆಯ ಆಡಂಬರಕ್ಕೆ ಜೋತು ಬೀಳದೆ
ನಿರ್ಮಿಸಬೇಕಿದೆ ಸುಸಂಸ್ಕೃತ ಸಾಂಸ್ಕೃತಿಕ ಸಂಸ್ಕಾರಯುತ ನವಭಾರತ
ಓ ಭಾರತದ ನವ ಉಲ್ಲಾಸದ ನವ ಯುವಕರೇ
ಉದಯವಾಗಿದೆ ಆಧುನಿಕ ಭಾರತದ ಆರಂಭ
ರಾಮ ರಾಜ್ಯವ ಸ್ಥಾಪನೆ ಮಾಡಲು ಎಲ್ಲರೂ ಮುಂದಾಗಿ
ಜಾತಿ ಮತ ಭೇದ ಭಾವಗಳ ತೊರೆದು
ಮೇಲು-ಕೀಳು ದೀನ ದಲಿತ ಎನ್ನದೆ ಎಲ್ಲರೂ ಒಂದಾಗಿ
ಮತೀಯ ಧರ್ಮದ ದ್ವೇಷವನ್ನು ಮಟ್ಟ ಹಾಕಿ
ಜಾತೀಯತೆಯ ಸಂಕೋಲೆಗಳ ಕಳಚಿ ಹಾಕಿ
ರಾಷ್ಟ್ರೀಯತೆಯ ಬೀಜವನ್ನು ಹೃದಯದಿಬಿತ್ತಿ
ಕಟ್ಟೋಣ ವಸುದೈವ ಕುಟುಂಬ ಎಲ್ಲರೂ ಒಗ್ಗೂಡಿ
ಶಿವಾನಂದ ಆದಾಪೂರ-