ಪ್ರತಿಷ್ಠಿತ ಹೊಳೆವ ತಾರೆಗಳ ನಡುವೆ
ಶಾಂತ ಸ್ವಭಾವದ ಅವಳ ಮಂದಹಾಸವು ಒಂದು!..
...!❤-
ಅಂದವ ಹೊಗಳಲು
ಪದಗುಂಜವೇ ಬೇಕಂತಿಲ್ಲಾ
ನೀ ಎದುರಿಗೆ ಕಂಡಾಗ
ನಾಚಿ ನೀರಾದರೆ ಸಾಕು!...
...!❤🙈-
ಸಮಯ ಬಿಡುವಿದ್ದಾಗ
ಭಗವಂತನೇ ಕುದ್ದಾಗಿ ರೂಪಿಸಿದಂತಿದಿಯಾ
ಬಹುಶಃ ಮೂಗುತಿಯಾಗಿ ಜನಿಸಿದ್ದರೆ ನಾನು
ನಿನ್ನಂದಕೆ ದೃಷ್ಟಿಯಾಗಿ
ನಿನ್ನಲ್ಲಿಯೇ ಇರ್ಬಹುದಿತ್ತೊ ಏನೋ...
...!❤😌
-
ತಂಗಾಳಿಗೆ ಜೀವ ತುಂಬಿ
ಮುಂಗುರುಳ ತಾಕುವ
ತವಕ ಏತಕೊ ಹೃದಯಕೆ
ಪ್ರಾಯಶಃ ಬದುಕಿರಬಹುದು
ನಿನದೆ ಯಾತನೆಯ ಗುಂಗಿನಲಿ!..
...!❤😌
-
ಪುಟದ ಮೊದಲ ಮುನ್ನುಡಿಯಲ್ಲಿ
ನಿನ್ನದೆ ಹೆಸರೊಂದಿಗೆ ಶ್ವಾಸ ಮಿಡಿದ ಹೃದಯ
ಇಂದಿಗು ಜೀವಿಸುತಿಹುದು
ನಿನ್ನದೆ ನೆನಪುಗಳ ಕೊನೆಯ ಪುಟದಲ್ಲಿ...
ಮಾಯಾವಿ!...
...❤😌-
ಹೃದಯದ ಖಾಲಿ ಹಾಳೆಯ ಮೇಲೆ
ಗೀಚಿದ ಮೊದಲ ಪರಿಚಯ ನೀನು,
ಮರೆಮಾಚಿದ ಮುಂಗುರುಳ ತುಸು ಮೆಲ್ಲ ಸರೆಸಿ
ಕದ್ದು ನೋಡಿದ ಆ ನಿನ್ನ ಮುಗುಳ್ನಗೆಯ ಭಾವನೆ
ಹೇಗೆ ವಿಸ್ತರಿಸಲಿ ನಾನು!...
...!❤😌-
ನಿನ್ನಂದವ ಹೊಗಳಲೆಂದೆ
ಕೆಲವು ಭಾವನಾತ್ಮಕ ಪದಗಳು
ಸ್ತಬ್ಧವಾಗಿ ಮನದಲ್ಲೆ ಉಳಿದಿರುಹುದು,
ಜೊತೆಯಲಿ ಕೂತು ಕೇಳುವುದಾದರೆ ಹೇಳು
ಕವಿತೆಗಳ ಸರಮಾಲೆಯೇ
ಕೊರಳಲಿ ತಾರೆಗಳಂತೆ ಮುತ್ತಾಗಿ ಹಾಕುವೆ!...
...!❤😌-
ಬಾನಿನ ತಾರೆಯಂತಿರುವ
ಅವಳ ಮೃದು ಹೃದಯ ಮರೆಮಾಚಿದಂತಿದೆ
ಎನ್ನೆದೆಯ ಭಾವನೆ
ತಂಗಾಳಿಯಾಗಿ ಅವಳ ಸುತ್ತ ಸುತ್ತುವಾಗ!..
...!❤😌-
ಒಲವ ಮೌನದಿ
ಕಡಲ ತೀರದ ಅಲೆಯೊಂದು
ಅಬ್ಬರಿಸಿ ಪಾದಕೆ ಅಪ್ಪಳಿಸಿದಾಗ
ಅವಳ ಮುಗುಳುನಗೆ ಕಣ್ಮುಂದೆ ಎದುರಾಗುತಿದ್ದಂತೆ
ಹೇಗೆ ತಿಳಿಸಲಿ ನರಕವೆಂಬ ಬಿಸಿ ಉಸಿರಿನ ವೇದನೆಯ!.
....!❤😌-