ಶಿವ  
45 Followers · 38 Following

Joined 18 November 2017


Joined 18 November 2017
26 AUG 2021 AT 22:37

ಮಳೆಯ ಮುತ್ತು ಇಳೆಗೆ ಸೋಕಿದ ಆ ಕ್ಷಣ...
ಮಲೆಯ ಮಡಿಲೊಳಿರುವ ಹಸಿರಂಚಿನ ಉಸಿರ ಸಂಭ್ರಮ...
ಹಸುಗೂಸಿನ ನಗುವಿನ ಸಿರಿಯ ಹೊತ್ತ ಮಲೆಯ ನರ್ತನ...
ನವಿಲ ನಾಚಿಸಿ ಶೃಂಗಾರದ ಮೆರವಣಿಗೆಯ ಹೊರಡಿಸಿದ ಯೌವ್ವನ...
ತಾಯ್ಮೊಗುವಿನ ಸಂಬಂಧದ ಅಂದವ ತೋರುತಿದೆ ಈ ಇಳೆಮಳೆಮಲೆಯ ಬಂಧ...

-


26 AUG 2021 AT 21:28

ಏನೆಂದು ಹೇಳಲಿ ಮನದಾಳದ ಪಿಸು ಮಾತು ತುಸು ಹೊತ್ತಿನಲ್ಲಿ...
ಜೊತೆಯಾಗುವಾಸೆ ಮತ-ಭೇದದಾಚೆ ಪ್ರೀತಿಯ ಸೇತುವೆಯ ಮೇರೆಗೆ...
ಕಾಣದ ಕಣ್ಣಲ್ಲಿ ಚಿತ್ರಿಸಿದೆ ಮಂದಹಾಸ ತುಂಬಿದ ಆ ನಿನ್ನ ಮೊಗವ..
ಮಾಯದ ಮರೆಯಲ್ಲಿ ಮರೆಯಾದೆ ನಿನ್ನ ಮೋಹಕ ನಗುವಿಗೆ, ಶರಣಾಗತನಾಗಿರುವೆ ಅದಕೆ...
ಪ್ರೀತಿಯ ಪಾಯವ ಹಾಕಿರುವೆ ಪ್ರೇಮದ ಮನೆಕಟ್ಟಲು...
ಆ ಮನೆಯ ನಗುವಿನ ಸೊಬಗಾಗಿ ಬಾ ಸೇರು ನನ್ನ ನಲ್ಮೆಯ ಗೆಳತಿ...

-


8 JAN 2021 AT 13:08

ಪ್ರೀತಿಯ ಒಡಲಿಗೆ
ಯಾತನೆಯ ಮರೆಸಿ
ಕನಸಿನ ಗೂಡಿಗೆ
ಹರುಷವ ಹೊತ್ತು ತಂದು
ಅಂಕಗಳ ಮರೆಸುವ ಅಂಕಿಣಿ






-


8 JAN 2021 AT 12:46

ಮನಸು ಜಾರಿತು ನಿನ್ನೊಲವಿನ ಮಧುವಿಗೆ
ಕನಸು ನಾಚಿತು ಮಧುವಿನ ಮೋಹಕೆ
ಒಲವು ಮೂಡಿತು ಮಮತೆಯ ಕೂಗಿಗೆ
ಹೃದಯ ಹಾಡಿತು ಅರಗಿಣಿಯ ಮಾತಿಗೆ
ಜಗವೇ ಮರೆತಂತಾಯಿತು ಕಂಗಳ ಸಲುಗೆಗೆ...

-


20 NOV 2020 AT 22:11

ಇಳಿ ಸಂಜೆಯಲಿ ಮೇಘಗಳ ಮರೆಯಲಿ ಮುಗುಳ್ನಗುತ್ತಿರುವ ಚಂದದ ಚಂದಿರನ ನೋಟವೇ ಆ ನಿನ್ನ ಕಣ್ಣನೋಟ ...
ಬಾನಿನ ದೀಪವಾಗಿರುವ ರವಿಯ ಹಾಗೆ ಕಂಗೊಳಿಸುತ್ತಿವೆ ನಿನ್ನ ನೀಲ ನಯನ...
ಮನದ ಬಾಗಿಲು ಮುಲಾಜಿಲ್ಲದೆ ತೆರೆದಿದೆ ನಿನ್ನ ಮುದ್ದು ಮುಖದ ನಗುವಿನ ಸದ್ದಿಗೆ...

-


29 OCT 2020 AT 21:23

ನಲ್ಮೆಯ ಗೆಳತಿಯೇ...
ನಗುಮೊಗದ ಒಡತಿಯೇ...
ಹಸುಗೂಸು ಕೂಗಿದ ದನಿಯೊಳವಿತಿರುವ ಮಾಧುರ್ಯದ ಸ್ವಾದವೇ ಆ ನಿನ್ನ ಕಂಠಸಿರಿಯೇ...
ತಾರೆಗಳನ್ನು ನಾಚಿಸಿ ನನ್ನ ಮನಸೆಳೆವ ಮನಮೋಹಕವಾದ ನಯನದೊಡತಿ ...
ಮನದ ಮರೆಯಲಿ ಮಮತೆಯ ಮುನಿಸು ಮರೆಸುವ ಮನೋಲ್ಲಾಸಿನಿಯೇ...
ಮನದಾಳದಿಂದ ಮನಮೋಹಿತೆಗೆ ಮನಬಿಚ್ಚಿ ಹೇಳಲು ಒಂದು ದನಿ ಮನದೊಳವಿತಿದೆ..
ಈ ದಿನ ನಿನ್ನ ಕನಸುಗಳೆಲ್ಲಾ ಸಂತಸಗೊಂಡು ನಿನ್ನೆದುರು ಬರಲಿ... ಕನಸಿನ ಲೋಕದ ಅರಸಿಯೇ...
ಜನುಮದಿನದ ಶುಭಾಶಯಗಳು 💐💐🌹💐💐

-


21 OCT 2020 AT 14:00

ಕೋಗಿಲೆ ವರ್ಣವ ಮೀರಿಸುವ ಚೆಲುವ
ಸಿಂಧೂರವ ಧರಿಸಿ ಧರೆಗಿಳಿದ ಮೋಹನ
ನೂರು ನಾರಿಯರ ಮನಗೆದ್ದ ಮುರಳೀಧರ
ಕೊಳಲೂದದೆ ಕೋಗಿಲೆಯ ಕಂಠವ ಮೀರಿಸುವ ಮನೋಹರ..

-


20 OCT 2020 AT 20:24

ಅರಿಯದೆ ನಾ ನಿನ್ನ ನಯನಗಳ ಕಾಂತಿಗೆ ಮನಸೋತು ಪ್ರೇಕ್ಷಕನಾಗಿರುವೆ ನಯನಂದಕೆ...
ಕಿರುನಗೆಯ ಸುಕುಮಾರಿಯ ಸೌಕ್ಯವ ವಿಚಾರಿಸುವ ಅಲೆ ಎದ್ದಿದೆ ಮನದ ಮರೆಯಲಿ..
ಕನಸಿನ ಪುಟಗಳು ತೇಲಿದೆ ಬಾನಂಗಳದಿ ಮರೆಯಾಗಿ...
ನನಸಿನ ಬಾಗಿಲ ತೆರೆದೆ ನಿನ್ನ ಕಣ್ಣಂಚಲಿ ಕುಮಾರಿ...

-


14 OCT 2020 AT 0:28

ತೇಲಾಡಿದೆ ಮನಸಿನ ಮೌನ
ಅದ ಆವರಿಸಿದೆ ನಿನ್ನ ಕಂಗಳ ನೀಲನೋಟ..
ಉಲ್ಲಾಸದ ಗೂಡಾಗಿದೆ ಮೌನದ ಉಗಿಬಂಡಿ...
ವಿಧಿಯ ಸಲ್ಲಾಪ ಮೌನದ ಜೊತೆಗೂಡಿ ಆಸೆಯ ಆಸರೆಯ ಕನಸಾಗಿದೆ..
ನೀನಿಲ್ಲದ ನಾಳೆಯ ನೆನಪಿಸುವ ನೆಪಗಳು ಹರಡಿದೆ ಹಾದಿಯ ತುಂಬಾ...
ಇರುಳಲ್ಲಿ ಹುಡುಕಿದ ರವಿಯಂತೆ ನೀನು ಅರಿಯದೆ ಹುಡುಕಿದೆ ನೂರಿರಳು ನಾನು...

-


13 OCT 2020 AT 11:39

ಭಾವನೆಗಳೇ ಸಾಕಾಗದೆ ಭಾವನಂಥರಾಳದ ಸುಳಿಗೆ ಸಿಕ್ಕು
ಬಯಕೆಯ ಬೇಲಿಯೊಳಗೆ ಬಂಧಿತನಾದ ಖೈದಿಯಾಗಿರುವೆ

-


Fetching ಶಿವ Quotes