ಪ್ರೀತಿಯ ಪ್ರತಿ ರೂಪಾ ಹೆಣ್ಣು
ಸಹನಾ ಮೂರ್ತಿ ಹೆಣ್ಣು
ಕಷ್ಟಗಳಿಗೆ ಕೈ ಜೋಡಿಸುವಳು ಹೆಣ್ಣು
ಕ್ಷಮೆಯ ಧರಿತ್ರಿ ಹೆಣ್ಣು
ಇಗೋ ನಿನಗೆ ಅನಂತಾನಂತ ನಮನಗಳು
ಪ್ರಕೃತಿಯ ಪ್ರತಿರೂಪ ಹೆಣ್ಣು
ಸಂಸಾರದ ನೊಗ ಹೋರುವಳು ಹೆಣ್ಣು
ಆನಂದದ ಆಶಾಕಿರಣ ಹೆಣ್ಣು
ದುಃಖದ ಕಣಜ ಹೆಣ್ಣು
ಇಗೋ ನಿನಗೆ ಅನಂತಾನಂತ ನಮನಗಳು
ಜನ್ಮದಾತೆ ಹೆಣ್ಣು
ತನ್ನವರಿಗಾಗಿ ಸ್ವಾರ್ಥ ತೋರುವಳು ಹೆಣ್ಣು
ಸಾಧನೆಯ ಪ್ರತಿ ರೂಪ ಹೆಣ್ಣು
ಆದಿಶಕ್ತಿ ಸ್ವರೂಪಿ ಹೆಣ್ಣು
ನಿನಗೆ ನೀನೇ ಸರಿಸಾಟಿ.
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
- ಕನಸಿನ ರಾಧೆ
8 MAR 2019 AT 10:58