Shashikala.B Smile   (ShashiBsmile😊)
53 Followers · 45 Following

read more
Joined 30 June 2021


read more
Joined 30 June 2021
28 FEB 2024 AT 14:28

ಹೇ ಮಂಕೆ ,
ಮಾತೇ ಅರ್ಥವಾಗದ ನಿನ್ನವರಿಗೆ
ಮೌನವೆಲ್ಲಿ ಅರ್ಥವಾದಿತು?

-


18 JAN 2023 AT 17:02

ನೀ ಬಯಸಿದ್ದೆಲ್ಲವೂ ನಿನ್ನದಲ್ಲ
ನೀ ಪಡೆದಿರುವುದಸ್ಟೆ ನಿನ್ನದು
ಚಿಂತಿಸುವ ಅಗತ್ಯ ಇಲ್ಲ....

-


12 JAN 2023 AT 17:28

ನಾ ಕಟ್ಟಿದ ಪ್ರೀತಿಯ ಆಶಾಗೋಪುರ ಬಿರುಗಾಳಿಯಲ್ಲಿ ತೂರಿದ ದೂಳಿನಂತೆ ಹಾರಿತು...
ತಪ್ಪು ನಾನಿಟ್ಟ ನಂಬಿಕೆಯದ್ದೋ..?
ಅಥವಾ ನೀ ನನಗೆ ಕೊಟ್ಟ ಮಾತಿನದೊ..??

-


12 JAN 2023 AT 17:03

ಕಣ್ಣೆದುರಿನ ಸ್ನೇಹ
ಸಾಮಾಜಿಕ ಜಾಲತಾಣಗಳಿಗೆ
ಸೀಮಿತವಾಗದಿರಲಿ...

-


5 SEP 2022 AT 7:35

ನೆಲಕ್ಕೆ ಬಿದ್ದ ಬೀಜ ಮೊಳಕೆ ಒಡೆಯುವುದು ಸಹಜ,
ಆದರೆ ಆ ಮೊಳಕೆಗೆ ಪೋಷಣೆಯ ಅಗತ್ಯ ಇದೆ..
ಆ ಮೊಳಕೆಗೆ ವಿದ್ಯೆ ಎಂಬ ನೀರೆರೆದು ಜ್ಞಾನ ನೀಡಿ ಉತ್ತಮ ವ್ಯಕ್ತಿಯನ್ನಾಗಿಸಿದ ಗುರುವಿಗೆ ನಮನ ..🙏

Happy teacher's day..

-


3 FEB 2022 AT 0:13

ಮುಂಜಾನೆ ಬರುವ ಸೂರ್ಯನ ಕಿರಣ....
ನಿನಗೆ ಸುಖ,ಸಂತೋಷ ಹೊತ್ತು ತರಲಿ...
ಆ ಸಂತೋಷ ಸದಾಕಾಲವೂ ಜೊತೆ ಇರಲಿ...
ದುಃಖ ದೂರವಿರಲಿ... ನಗುವೆಂದು ಜೊತೆ ಇರಲಿ....
ಇಂದು ನಿನ್ನ ಜನ್ಮ ದಿನ....
ಜನ್ಮ ದಿನದ ಶುಭಾಶಯಗಳು ಗೆಳತಿ...
ನಗುತಿರು ಗೆಳತಿ ಸದಾಕಾಲ....
ಇಂತಿ ನಿನ್ನ ಆತ್ಮೀಯ ಗೆಳತಿ 🌙🎨...

-


29 OCT 2021 AT 7:19

ಮೂರು ವರ್ಷದ ಡಿಗ್ರಿ ಜೀವನ... ಕೊನೆಯ ದಿನಗಳ ಎಣಿಕೆ
ಮುಗಿದೆ ಹೋಯಿತು ಡಿಗ್ರಿ...
ಮುಗುಳುನಗೆಯಲ್ಲಿ ಪರಿಚಯ.. "ಡಿಫರೆಂಟ್" ಆಗಿರೋ ನಮ್ ಮದ್ಯ "ಕಾಮನ್" ಆಗಿ ಸಿಕ್ಕಿದ್ದು ಫ್ರೆಂಡ್ ಶಿಪ್
ಮತ್ತೆ ಸಿಗತ್ತಿವೊ ಇಲ್ವೋ ಗೊತ್ತಿಲ್ಲ.. ಸಿಗತ್ತೀವಿ ಅನ್ನೊ ಭರವಸೆಯು ಇಲ್ಲ... ಯಾವ್ದೋ ಗುರಿ ಇಟ್ಟು ಡಿಗ್ರಿಗೆ ಬಂದವರು ಕೆಲವರು ಆದ್ರೆ ಡಿಗ್ರಿ ಮಾಡಿ ಆಮೇಲೆ ಮುಂದೆ ನೋಡಣ ಅಂತ ಬಂದವರೇ ಜಾಸ್ತಿ...
ಯಾರೊ ಆಡಿದ್ ಒಂದು ಮಾತನ್ನ ಹೈಲೈಟ್ ಮಾಡಿ ವಾರ ಪೂರ್ತಿ ಗೊಳ್ ಆಡ್ಸಿದ್ದು ...
ಸೈಲೆಂಟ್ ಆಗಿ ಮಾತಾಡ್ದೆ ಇದ್ದೋರು ನಮ್ ಜೊತೆ ಸೇರಿ ಜಾಸ್ತಿ ಮಾತಾಡಿದ್ದು... ಮದ್ಯ ಮದ್ಯ ಬಂದಿದ್ ಫ್ರೆಂಡ್ ಬರ್ತಡೇ...
ಮದ್ಯ ಬಂದ CORONA ಲಾಕ್ ಡೌನ್
CORONA ದಿಂದ ಶುರು ಆಗಿದ್ ಅನ್ ಲೈನ್ ಕ್ಲಾಸ್
ನೆಟ್ ವರ್ಕ್ ಹುಡ್ಕಿ ಅಲೆದಾಡಿ ಬೇಸತ್ "ಕಾಲೇಜ್ ಯಾವಾಗ್ ಒಪನ್ ಅಪ್ಪಾ ಅಂತ ಕಾದಿದ್ದು..
ನಮ್ ಹಿಂದೆ ಓದಿದ್ ಎಲ್ರಿಗೂ ಸಿಕ್ಕಿದಷ್ಟು ಟೈಮ್ ನಮ್ಗೆ ಕಾಲೇಜ್ ಅಲ್ಲಿ ಸಿಗದೇ ಇದ್ರು ಸಿಕ್ಕಿದ್ ಟೈಮ್ ಅಲ್ಲೆ ಖುಷಿ ಆಗಿ ಕಳೆದ್ ಕಾಲೇಜ್ ಜೀವನ...
ಮುಜುಗರದಲ್ಲೇ ಮೂರ್ ವರ್ಷ ಸುಮ್ಮನಿದ್ದು ಕೊನೆಯ ಒಂದ್ ಎರೆಡು ವಾರದಲ್ಲಿ ಜಾಸ್ತಿ ಮಾತಾಡಿದ್ ಹುಡುಗ ಹುಡುಗಿಯರು., ಮೂಡಿದ ಹೊಸ ಸ್ನೇಹ ಸಂಬಂಧ
ಕೊನೆಯಗದಿರಲಿ ಕೊನೆವರೆಗೆ ಇರಲಿ ಸ್ನೇಹ ಸಂಬಂಧ..
ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ...

-


2 OCT 2021 AT 17:37

ಒಪ್ಪಿಕೊಳ್ಳಲು ಕಠಿಣ ಆದರೂ ಕಟು ಸತ್ಯ.
ಪರಿಸರ ಪ್ರೇಮಿಯಂತೆ ನೈಸರ್ಗಿಕ ಸಂಪನ್ಮೂಲ ಉಳಿಸುವ ಬಗ್ಗೆ ಭಾಷಣ ಮಾಡಿದ ವ್ಯಕ್ತಿ,
ಹೊರಟಿದ್ದು ಮಾತ್ರ ಒಬ್ಬನೇ ತನ್ನದೇ ಸ್ವಂತ ಕಾರು ಏರಿ...
ಸಮಾಜ ಸೇವಕ ಎಂದು ಹೇಳುವ ವ್ಯಕ್ತಿ,
ಸಮಾಜ ಸೇವೆ ಮಾಡುವುದು ಪ್ರಚಾರಕ್ಕಾಗಿ ಮಾತ್ರ..

-


1 OCT 2021 AT 20:51

ನೋಯಿಸುವ ಗುಣ ನಿನ್ನದಾದರೆ..
ನೋವಿಗೂ ನಗು ಕಲಿಸುವ ಗುಣ ನನ್ನದು..

-


30 SEP 2021 AT 21:54

ಅನಿರೀಕ್ಷಿತ ಬೇಟಿ, ಮರೆಯಲಾಗದ ಸಿಹಿ ಕಹಿ ನೆನಪು
ಸಮಯ ಬಂದಾಗಿದೆ ಬೀಳ್ಕೊಡಲು... ನಮ್ಮದೆ ಕಾಲೇಜು ಹೋಗಲಾರೆವು ಬೇರೆಡೆಗೆ ಎನ್ನುವಂತಿಲ್ಲ... ಜೂನಿಯರ್ಸ್ ಬಂದು ಹೇಳುವರು ಅಕ್ಕಾ, ಅಣ್ಣಾ ನೀವಿನ್ನೂ ಹೊರಡಿ ಈ ಕಾಲೇಜು ಈಗ ನಮ್ಮದು ನೀವಿನ್ನೂ ಹಳೆ ವಿದ್ಯಾರ್ಥಿ ಅಷ್ಟೆ.. ಈಗ ಉಳಿದಿದೆ ಕೇವಲ ನೆನಪಿನ ಬುತ್ತಿ.. ಕಳೆದ ಕ್ಷಣ ಮತ್ತೆ ಬರಲಾರದು.. ಆದರೆ ನೆನಪಂತು ಸದಾ ಇರುವುದು...😍 ನೆನಪಿನ ಬುತ್ತೀಯ ಹೊತ್ತು... 😍 ಮೂರು ವರ್ಷ ಲೆಕ್ಕವಿಲ್ಲದಷ್ಟು ನೆನಪು... ಹೊಸ ಗೆಳೆಯ ಗೆಳತಿಯರು ಈಗ ಒಡಹುಟ್ಟಿದವರಂತೆ.. ಶಿಕ್ಷಕರ ಕಡೆಗೆ ಮೊದ್ ಮೊದಲು ಭಯದ ನೋಟ ಈಗ ಅವರೊ ನಮ್ಮ ಮೆಚ್ಚಿನ ಶಿಕ್ಷಕರು
ಮೂರು ವರ್ಷ ಸದಾ ಜೊತೆ ಇರುವ ಬೆಟ್ಟದಷ್ಟು ನೆನಪು...
#last day of college life

-


Fetching Shashikala.B Smile Quotes