ಇರುಳಲಿ ಹುಡುಕುತಿರುವೆ ಹಗಲು ಕಂಡ ನೆರಳನು.
ಬಾನಲಿ ಹುಡುಕುತಿರುವೆ ಎಲ್ಲೋ ಕೇಳಿದ ಹಾಡೊಂದರ ಹೆಜ್ಜೆ ಗುರುತನ್ನು .
ನದೀ ತೀರದಲಿ ಹುಡುಕುತಿರುವೆ ಅಲೆಗಳು ಬಿಟ್ಟು ಹೋದ ಮೊರೆತದ ಸದ್ದನ್ನು.
ಕನಸಲಿ ಹುಡುಕುತಿರುವೆ ಮರೆತು ಹೋದ ನೆನಪೊಂದು ಬಿಟ್ಟು ಹೋದ ಸುಳಿವನ್ನು.
ನನ್ನಲೇ ನಾ ಹುಡುಕುತ್ತಿರುವೆ ನಾನಲ್ಲದ ನನ್ನನ್ನು.-
It's not the things that moves you that's important
Rather it's the things that make you go back for.-
ನೀಳ ನೀಲಾಕಾಶವು ಅವಳ ನಯನಗಳಲಿ ಬಂಧಿಯಾದಂತೆ
ಸೊರ್ಯ ಕಿರಣಗಳ ಕಾಂತಿಯು ತಾ ಮೇಳೈಸಿ ಬಂದಂತೆ
ಪ್ರಕೃತಿಯ ರೂಪಕವೇ ಪ್ರತಿಬಿಂಬವಾದಂತೆ
ಇಳೆಯ ವೈಶಾಲ್ಯತೆಯೇ ಆಕೃತಿಯಾಗಿ ಮೈತೆಳೆದಂತೆ
ಕಾದಂಬನಿಗಳ ಗಮನವನು ಅವಳ ನಡೆ ಅನುಕರಿಸುವಂತೆ
ಅವಳ ನಗು ಅಲೆಯಂತೆ, ಅಸಂಖ್ಯ ಸೆಲೆಗಳ ಭಾವದಂತೆ.
ಅವಳು ಕನಸಂತೆ, ಸಿಹಿ ಊಹೆಗಳ ಸುಂದರ ಜೋಪಡಿಯಂತೆ.
-
Her eyes had a glow of day
His eyes had a gloom of night
Hers scorchingly hot
His serenely cold.
Her eyes sang of happiness
His eyes sang of grief
Hers melodiously lull
His melancholically dismal.
Her eyes, rooted in the present
His eyes, lost in the imagination.
Hers superficially real
His exaggeratingly unreal
Her eyes, vast as sky
His eyes, deep as sea
Hers utterly constant
His exuberatingly turbulent.
When their eyes finally met.
They looked like the reflections of the same image
The difference was mere illusion.-
ಬೀಳದೆ ಉಳಿದ ಮಳೆಹನಿಗಳ ಸಾಲು ಮೋಡದಿ ಅವಿತಿದೆ.
ಹೇಳದೆ ಉಳಿಸಿಕೊಂಡ ಪದಗಳ ಸಾಲು ಹೃದಯದಲಿ ಕೂತಿದೆ.
ತೆರಳದೇ ಹಿಂತಿರುಗಿದ ಸೂರ್ಯ ಕಿರಣಗಳು
ದಾರಿಯೊಂದ ಹುಡುಕುತಿದೆ.
ಸಾಲದೇ ಬಂದ ಭಾವನೆಗಳ ಹಿಂಡು,
ಒರಗಲು ಹೆಗಲೊಂದ ಬಯಸಿದೆ.-
All those mirrors of future,
What are they reflecting?
They are the same images
With different lights
With different colours
And with different dimensions.
The only thing that's common
in them is change.
Only the change is real.
Only the change is truth.
Only the change is constant.-
The thing that's haunting like a glaring and blinding reality. That creeps up late at night and leaves not until the sunrise. That drills a hole in the chest and fills it a while later, leaving no scar.
It's a wound,
A wound that has no cause nor the remedy. A wound that spits blood that doesn't flow but rise and vanish. A wound that isn't awful But a terrible art. A wound that's painful, a sense that's felt not by it's feel rather by its mere sight. A wound that isn't a cut but an extension of something that can't be withheld by tissues nor by organs. A wound that isn't durational but exists for a lifetime. A wound that's not septical but infectious. A wound that doesn't kill but gives a purpose to live.-
Walking into the ocean
The sand in my fist
Was emptied out ounce by ounce
By the turbulent waves.
Walking alongside her
The heart in my chest
Drifted away ounce by ounce
By her irresistible gaze.
Is my heart, like sand, too loose to hold ?
Or
Is her gaze, like waves, too Strong to defend ?
-
ಬೂದಿ ಮುಚ್ಚಿದ ಆಕಾಶ
ಸಣ್ಣಗೆ ಹೊಗೆಯುಡುತಿರುವ ಮೋಡಗಳು
ಸಂಭಾಷಣೆಗೆ ವಿರಾಮ ನೀಡಿ
ಮೌನದ ಶಾಲು ಹೊದ್ದಿರುವ ಭೂಮಿ.
ಬಾನಿನ ಒಲವಿನ ಉಲಿಯೇ ಮಳೆಹನಿಗಳಾಗಿ
ಭೂಮಿಯ ವಿರಹದ ಧನಿಯೇ ತಂಗಾಳಿಯಾಗಿ
ಮಧ್ಯಂತರದಲಿ ಮೂಡಿದ ಅಭಿಸಾರದಲಿ
ಪ್ರಣಯಾಪೇಕ್ಷತೆಯಿಂದ ಇವೆರಡೂ ಒಂದಾಗಿವೆ.
ಇಷ್ಟು ತಂಪಿನಲೂ ಹೃದಯದಲಿ ಕಿಡಿಯೊಂದು ಹಚ್ಚಿಕೊಂಡಿದೆ
ಶೀತವು ಅದನು ಕರಗಲು ಬಿಡುತಿಲ್ಲ
ಬಿಸಿಯು ಹೆಪ್ಪುಗಟ್ಟಲು ಬಿಡುತ್ತಿಲ್ಲ.
ಈ ಅನಿಶ್ಚಿತ ಸ್ಥಿತಿಯಲೂ, ಹೃದಯ ಅದೇಕೋ ನಗುತಿದೆ.-
ಅವಳ ಕೂದಲ ಒಳ ಹೊಕ್ಕ ತಂಗಾಳಿ ಹೊರಬರಲೇ ಇಲ್ಲ.
ಸಂಕೀರ್ಣ ಸೆಲೆಗಳ ಸುಂದರ ಸರಣೀ ಸಂಕೋಲೆಗಳಲ್ಲಿ ಸೆರೆಯಾಗಿಬಿಟ್ಟಿದೆ.
ಆ ಬಂಧನದಲಿ ಗಾಳಿಗೆ ಹಿಂದೆಂದೂ ಸಿಗದ ಪ್ರಫುಲ್ಲತೆ ಸಿಕ್ಕಿದೆ.
ಅವಳ ಕೂದಲ ಘಮಕೆ, ಮೊದಲ ಬಾರಿ ಗಾಳಿಗೂ ಉಸಿರಾಡಬೇಕೆನಿಸಿದೆ.
ಅವಳ ಕಂಗಳ ಒಳ ಹೊಕ್ಕ ಬೆಳಕು ಹೊರ ಬರಲೇ ಇಲ್ಲ.
ಬೆಳಕನೇ ಸೀಳುವ ಹರಿತ ಮೊನೆಗಳ ಶುಭ್ರ ಸ್ಫಟಿಕದಂತ ಪಾಪೆಯಲಿ ಸೆರೆಯಾಗಿಬಿಟ್ಟಿದೆ.
ಏಕತೆಯ ಕಳೆದುಕೂಂಡ ಬೆಳಕಿಗೆ ವೈವಿಧ್ಯತೆಯ ಅರಿವಾಗಿದೆ.
ಅವಳ ಕಂಗಳ ಕನ್ನಡಿಯಲಿ, ಬೆಳಕಿಗೆ ಅದರದೇ ಪ್ರತಿಬಿಂಬ ಕಂಡಿದೆ.
-