sharath praneshrao   (ಶರ-ಋಣಿ)
138 Followers · 6 Following

Joined 3 October 2017


Joined 3 October 2017
30 MAR AT 17:15

ಪಡೆದು ಕೊಳ್ಳುವ ಹಾದಿಯಲ್ಲಿ
ಕಳೆದು ಕೊಂಡ ಬದುಕದೆಷ್ಟೋ
ಬದುಕ ಕಟ್ಟುವ ಭರಾಟೆಯಲ್ಲಿ
ಕುಟ್ಟಿ ಹೋದ ಕವಡೆಗಳೆಸ್ಟೋ

ಊರ ಬಿಟ್ಟು, ಮನೆಯ ಬಿಟ್ಟು
ದೂರದೂರಿಗೆ ನಡೆಯುತಾ,
ಕೆಲಸ ಹುಡುಕಿ ಮನೆಯ ಕಟ್ಟು
ಬದುಕಿಗಾಗಿ ಪರದಾಡುತಾ

ಇದ್ದದೆಲ್ಲವ ಹಿಂದೆ ಬಿಟ್ಟು
ಹೊಸದದೇನೋ ಮಾಡೋ ಕಿಚ್ಚು
ಗಗನಕೇರಲು ತಿಂದದ್ದದೆಷ್ಟು ಪೆಟ್ಟು
ತಿರುಗಿ ನೊಡಲನಿಸಿತೆಲ್ಲ ಹುಚ್ಚು!

ಯಾರಿಗಾಗಿ ಓಟವಿಂದು
ಮರೆತು ಎಲ್ಲ ಬಳಗ ಬಂಧು!
ಇಂದು ಇರುವೆವು, ನಾಳೆ ಅರಿವೆವು
ಮಸಣ ವೈರಾಗ್ಯವಿದುವೇ ಸುಖದ ಬದುಕಿಗೆಂದು......

-


13 MAR AT 22:50

ಬದುಕೊಂದು ಯುದ್ಧಕಾಂಡವಲ್ಲ
ಪ್ರೇಮದಾಟವೀ ಬದುಕು,
ಸಾವದೊಂದುದಿನ ಯಾರಿಗೂ ತಪಿಲ್ಲ
ಬದುಕಿದಾಗಲಾದರೂ ಬದುಕು.

ಹೂ ದುಂಬಿಗಳ ಪ್ರೇಮದಾಟವೀ ಬದುಕು
ಒಂದಬಿಟ್ಟಿನ್ನೊಂದಕಿಲ್ಲ ಬದುಕು!
ಹೂ ಮುಳ್ಳುಗಳ ಸ್ನೇಹದಾಟವೀ ಬದುಕು
ಬಯಸಲಿಲ್ಲ ಎಂದೂ ಇನ್ನೊಂದಕೆ ಕೆಡಕು.

ಭೂಮಿ ಮೋಡಗಳ ಒಲವಿನಾಟ ಬದುಕು
ಬಿಡಲಾಗದಾ ಬಂಧ ಅದಕು ಇದಕು
ಭೂಮಿ ಚಂದಿರನ ಭಾವದಾಟ ಬದುಕು
ಕಾಯುವಾ ಒಲವಿಗೆ ದಕ್ಕೀತು ಹುಣ್ಣಿಮೆಯ ಬೆಳಕು

ಭಿನ್ನವಿರಲಿ, ಭೇದವಿರಲಿ, ಏನೆಯಿರಲಿ ಬಿರುಕು
ಅವನಾಟದಲಿ ಸಹಬಾಳ್ವೆಯೇ ಬದುಕು,
ಬದುಕಲೆಲ್ಲರು, ನೀನೂ ಬದುಕು;
ಇರುವುದೊಂದೆ ಇದು; ಬದುಕಿದಾಗಲಾದರೂ ಬದುಕು......

-


10 MAR AT 21:52

ಲೋಕದ ನಿಯಮವೆ ಹೀಗೆ
ಬದಲಿಸಲಾಗದು ಹಾಗೆ
ದುಃಖದ ನೆನಪುಗಳೇ ಹಾಗೆ
ಸುಖ ಮರೆತಂತೆ ಮರೆಯದು ಬೇಗೆ

ಬಳ್ಳಿಯು ತನ್ನ ಮರಿ ಹೂವನ್ನ
ಗಾಳಿಗೆ ತೂರಿದ ಹಾಗೆ
ಪರಿಮಳವೆಷ್ಟೇ ಬೀರಿದರು
ಬಳ್ಳಿಯು ಉಳಿಯಿತೆ ಹೂಗೆ!

ಮೀನಿಗೆ ನೀರದೆ ಜೀವನವು
ದಡಕದನು ದಬ್ಬಿದರೆ ಹೇಗೆ
ಬದುಕೆಲ್ಲ ಶ್ರಮಿಸಿ, ಮಧು ಸೇರಿಸಿ ಜೇನ್ ನೋಣವು
ಯಾರದೋ ಕಾಟಕೆ ಬಿಟ್ಟೋಗೋ ಹಾಗೆ

ಹನಿಗಳ ಮೋಡವೆ? ಮೋಡದಿ ಹನಿಯೇ?
ಉಳಿಯದು ಯಾವುದು ಕೊನೆಗೆ
ಭೂಮಿಗೆ ಚಂದಿರ, ಚಂದ್ರಗೆ ಭೂಮಿಯೇ
ಮುನಿಯಲು ಬರಿ ಕತ್ತಲೆ ಬಾನೊಳಗೆ.

ಲೋಕದ ನಿಯಮವೆ ಹೀಗೆ
ಬದಲಿಸಲಾಗದು ಹಾಗೆ

-


30 JAN AT 0:28

ಬದುಕೆಂದರೇನು?
ಅರಿತವನು ಮೌನಿಯಾದನು
ಅರಿಯದವ ಅವ,
ನಾ ಬಲ್ಲೆನೆಂದೋಡಿ ಬಂದನು!

ಅರಿತವನೆಲ್ಲರಲಿ ಮಮತೆಯ ಹಂಚಿದನು
ಆರಿಯದವ ಅವ,
ನಾನೆಂಬ ದರ್ಪದಿಂದಲೆ ಮೆರೆದನು!
ಅರಿತವನು 'ಇಂದು' ಬದುಕಿಹನು
ಅರಿಯದವ ನಾಳೆಯನು ಕಾಯುತಿಹನು.

ಅಶಾಶ್ವತತೆಯ ಬದುಕ ಅರಿತವಗೆ,
ಅರಿವೇ ಗುರುವಂತೆ,
ಶಾಶ್ವತತೆಯ ಕನಸ ಕುದುರೆಗೆ
ಗುರುವಿದ್ದರೂ ಅರಿವು ಬರದಂತೆ!


-


22 JAN AT 11:16

ರಾಮ ಬರುತಿಹ ಮನೆಗೆ ಮರಳಿ
ಶ್ರೀ ರಾಮ ಬರಲಿ ಮನಕೆ ಮರಳಿ

ಕಾದದ್ದೆಷ್ಟೆ ವರುಷಗಳಿರಲಿ
ಕೊನೆಗೂ ಬರುತಿಹ ರಾಮ ಮರಳಿ
ಕಾದ ಶಬರಿಗೆ ಮುಕ್ತಿಯದರಲಿ
ರಾಮ ಬರುತಿಹ ಮನೆಗೆ ಮರಳಿ

ಮನೆಯಲಿರುವನು ರಾಮ ಇನ್ನು
ಮನಕೆ ಇಳಿಸಿರಿ ಸತ್ವವನ್ನು
ಸಕಲ ಸತ್ವದ ಶಿಖರ ಅವನು
ಮನವ ಮುಟ್ಟಲಿ ರಾಮತ್ವದ ಪ್ರಖರವಿನ್ನು

ವಾಯುಪುತ್ರ, ಅಸಾಧಾರಣ ಶಕ್ತಿವಂತ
ಧಾರೆಯೆರೆದಿಹ ಶಕ್ತಿಯೆಲ್ಲವ ರಾಮಗಂತ
ಹುಡುಕಿರೊಮ್ಮೆ ನಿಮ್ಮೊಳಗಿನಾ ಹನುಮಂತ
ಕಾಯುತಿಹನು, ರಾಮ ಬರುವನೇ ಮನಕೆ ಅಂತ

ಪ್ರತಿ ಮನೆಗಳಲ್ಲೂ ರಾಮನಿರಲಿ
ಮನಗಳೆಲ್ಲವು ದಶರಥಗೆ ಸಿಕ್ಕ ಮಗನಂತಿರಲಿ,
ಪತ್ನಿಗೆ ಸೀತೆಯ ಪತಿಯಂತಿರಲಿ
ಭರತ ಲಕ್ಷ್ಮಣರ ಅಣ್ಣನಿರಲಿ
ಪ್ರಜೆಗೆ ಪ್ರಜಾಪತಿಯಂತಿರಲಿ
ಬೇಡುವವಗೆ ಅಭಯವ ನೀಡುತಿರಲಿ
ರಾಮ ಬರುತಿಹ ಮನೆಗೆ ಮರಳಿ
ಶ್ರೀ ರಾಮ ಬರಲಿ ಮನಕೆ ಮರಳಿ.......

-


24 DEC 2023 AT 22:54

ಗುಡಿ ಗೋಪುರಗಳ ವೈಭವದ ಮುಂದೋರ್ವ
ದೀನನಿಹನು, ದರಿದ್ರನಿಹನು
ಬದುಕಿಗಾಗಿ ಬೇಡುತಿಹನು,
ಅವನಿರುವವರೆಗೆ
ದೀನ ರಕ್ಷಕನು ಗುಡಿಯೊಳಿಹನೇ?
ನಿತ್ಯ ಜೋಗುಳಕೆ ಮಲಗುವವನೇ?
ಮಡಿ ಪಂಚೆ ಭಸ್ಮ ನಾಮಗಳ
ವೈಭವದಿ ನಲಿಯುತಿಹನೇ?

ಗುಡಿಗಳಿಂದ ಹೊರಗಿಹನು,
ಜನಮಾನಸದ ಮನಗಳಲಿ ನೆಲೆಸಿಹನು
ಒಳಗಡೆಗೆ ಬಿಟ್ಟಿಹನು ಎಲ್ಲರನ್ನೂ,
ತಮ್ಮಿಚ್ಛೆಯಂತೆ ಕುಣಿದು, ಅವನ್ ಹೆಸರಲ್ಲಿ ನಲಿವರನ್ನು
ತಾನಿಹನು ಹೊರಗೆ, ನಿಜ ಭಕ್ತನೆಡೆಗೆ
ಬಡವ ಬಾಗಿದವನ ಕಡೆಗೆ
ಇದೇ ಆ ಕರುಣಾಮಯಿಯ ನಡಿಗೆ......

-


12 DEC 2023 AT 7:37

ಕಣ್ತುಂಬಿ ನಿದ್ದೆ ಬರುವವಗೆ ನಿದ್ದೆಯೊಂದೆ,
ಬರದವಗೆ ಕಾಡುವುದದು ಕೊರತೆ ಒಂದೇ,
ಹಸಿದ ಹೊಟ್ಟೆಗದು ತೃಷೆ ಒಂದೇ,
ತುಂಬಿದೊಟ್ಟೆಯಲಿ ಎಲ್ಲರಿಗು ಹಸಿವೂಂದೇ.

ದೀನ ದರಿದ್ರರಿಗೆ ಏನಿರದ ನೋವೊಂದೆ,
ಸಿರಿವಂತರಿಗೆ ಕಳೆದೋಗೋ ಚಿಂತೆಯೊಂದೆ,
ಮನದ ಭಾವಗಳು ಎಲ್ಲರಿಗು ಒಂದೇ,
ಭವಾನಾತೀತರಿಗೆ ಅಂತರಂಗ ಒಂದೇ.

ನೊಂದ ಜೀವಕದು ಮನಸೊಂದೆ,
ಓಹ್ ಮಾನವ! ನೋವಿನಲು ಭೇದವೆಲ್ಲಿಂದ ತಂದೆ?
ನೆಲ ಒಂದೇ, ಜಲ ಒಂದೇ, ಕುಡಿವ ಗಾಳಿಯೊಂದೆ,
ನಡುವೆ ನಾನು ನನ್ನದೆಂಬುದನು ಎಲ್ಲಿಂದ ತಂದೆ?

ಆತ್ಮವೊಂದೆ, ಆ ಪರಮಾತ್ಮನೊಂದೆ,
ಹುಡುಕೊ ದಾರಿಗಳು ಬಿನ್ನವಿಹುದು, ಗುರಿ ಒಂದೇ.
ದ್ವಂದ್ವವಿರದ ಮಾತದೇ ಸತ್ಯ, ಅದು ಒಂದೇ,
ಬಿಡು ಸುಳ್ಳಿನರಮನೆಯ ಸಂಸಾರ ಸುಖವಿಂದೆ!

ಬಿಡು ಭೇದವನು ಎಲ್ಲರೂ ಒಂದೇ, ಎಲ್ಲವೂ ಒಂದೇ,
ಕಾಣಲಾ ಪರಮಾತ್ಮನನು ಇಹುದೊಳ ಮಾರ್ಗ ಒಂದೇ.

-


6 DEC 2023 AT 19:12

ಸಾವ ದವಡೆಯನು ಕಂಡವಗೆ,
ಸಾವಿರಾ ಆಸೆ ಉಳಿಯುವುದೇ
ಬದುಕಿನರ್ಥವ ತಿಳಿದವಗೆ
'ನಾ'ನೆಂಬ ಗರ್ವ ಅಳಿಯದಿಹುದೇ

ಬಂದದ್ದು ಹೇಗಿಲ್ಲಿ? ಹೋಗುವುದು ಮುಂದೆಲ್ಲಿ?
ನಡುವಿನಂತರವೆ ಬದುಕು.
ಬಂಧನದ ಬಂಡಿ ಇದು, ಸಾಗಿಹುದು ಸಮಯದಲ್ಲಿ
ಏನುಂಟು ನಿನಗಿಲ್ಲಿ ಹಕ್ಕು!

ನೆನ್ನೆಯು ಕೈಲಿಲ್ಲ, ನಾಳೆಯದು ತಿಳಿದಿಲ್ಲ,
ಸ್ವರ್ಗ ನರಕಗಳು ಬೇರೆಲ್ಲೂ ಇಲ್ಲ.
ಪ್ರತಿ ಕ್ಷಣವೂ ಬದುಕುವವಗದುವಿಲ್ಲೆ ಸ್ವರ್ಗ,
ನಾಳೆಗೆ ಕಾಯುತಿಹುದು ನರಕದಾ ವರ್ಗ.

ಇರುವ ಸಮಯದಲಿ ನಗು ನಗುತಾ ಬಾಳು,
ಬಾಳೊಂದು ಭಾಗ್ಯ; ಇಹುದೆಲ್ಲರಿಗು ಗೋಳು.
ನಾನು ನನ್ನದೆಂದೆಸ್ಟು ದಿನ,
ಅವ ಕರೆದರೆ ಉಳಿಯಲಾಗದಿನ್ನೊಂದು ಕ್ಷಣ......

-


4 DEC 2023 AT 18:23

ಮನೆಯೆಲ್ಲ ಮೌನ ಆವರಿಸಿದಾಗ,
ಮಾತುಗಳವೆ ಭಾರವಾದಾಗ,
ಬಂಗಾರದಿದ್ದರೇನಂತೆ ಗೋಡೆಗಳು
ನೊಂದ ಮನಗಳಿಗವೆ ಜೈಲ ಕಂಭಿಗಳು.

ನಾವ್ ನಿನಗೆ, ನೀ ನಮಗೆ,
ಬಯಸಿದಂತಿರಲು ಎಲ್ಲವೂ ನಮ್ಮೊಳಗೆ.
ಅಲೆ ಇರದೆ ಇದ್ದೀತೆ ಶಾಂತ ಸಾಗರವು,
ಏರಿಳಿತವಿರದ ಬದುಕದು, ಕಲಿಸೀತೆ ಒಲವು!

ಬಂಗಾರದ್ದಾದರೇನಂತೆ,
ಪಂಜರವೆ ಗಿಳಿಗದು.
ಎಸ್ಟೇ ದೊಡ್ಡದಿರಲಿ, ಏನಿದ್ದರೇನಂತೆ,
ಬರಿ ಗೊಡೆಗಳೆ ಮನೆ, ಮುರಿದ ಮನಕದು.

ಪ್ರೀತಿ ಇರಲಾದೀತೆ ಬಯಸಿದಂತಿರದಿರಲು?
ಪ್ರೀತಿಯಾದೀತೇ ಅದು? ಬಯಕೆಗಳಿರಲು......
ಮನೆಗೆ ಮನದ ಗೋಡೆ, ಒಲವ ಕಿಟಕಿ ಬಾಗಿಲುಗಳು,
ಮನೆಯದುವೆ, ನೆಮ್ಮದಿಯ ನೆಲೆ, ಖುಷಿಯೇ ತುಂಬಿರಲು......

-


18 OCT 2023 AT 22:53

ಯಾರಿಗಾಗಿ ಇಷ್ಟು ದಿನ,
ಸವೆಸಿ ಪೂರ್ತಿ ತನು-ಮನ
ಉಳಿದದ್ದಿಷ್ಟೆ ಒಂಟಿ ತನ
ಸಂಸಾರ ಸಾಗರವಿದಿನ್ನೆಷ್ಟು ದಿನ!

ಮೊಡಕೇಕೆ ಸೂರ್ಯ ಬೆಸುಗೆ,
ಖಾಲಿಯಾಗೊವರೆಗಷ್ಟೆ ಜೊತೆಯ ನಡಿಗೆ
ಸುರಿಸಿ ನೀರ ಸಾಗೊವರೆಗೆ,
ಇದ್ದ ಸೂರ್ಯನಿಲ್ಲ ಜೊತೆಗೆ!

ಬೇಕೆ ಹೂವ್ಗೆ ತನ್ನ ಜೇನ ನಂಟು?
ತಾನೇ ಮಾಡಿ ಇಟ್ಟ ಗಂಟು.
ಕೊನೆಗೆ ಬೆಸೆದು ಜೇನು ಹುಳದ ನಂಟು
ತೊರೆದು ಹೂವ ಹೊರಡೊದುಂಟು

ಬರುವುದಿಲ್ಲಿ ಒಬ್ಬನೇ,
ತೊರೆದು ಹೊರಡಬೇಕು ಒಬ್ಬನೇ
ನಡುವೆ ಮಾಯಾ ಮೋಹ ಬಂಧ,
ಜಯಿಸಿದವನ ಬದುಕದಷ್ಟೆ ಚೆಂದ!

-


Fetching sharath praneshrao Quotes