Sham Aihole   (Sham Aihole)
208 Followers · 86 Following

✍️📸
Joined 27 July 2018


✍️📸
Joined 27 July 2018
2 FEB 2022 AT 21:30

ಸೂರ್ಯನ ಕೋಪಕ್ಕೆ ಬೆಳಕೇ ಬೀಳದ ಜಾಗದಲ್ಲಿ ಮಗನನ್ನು ಬಚ್ಚಿಡಲು ಅವನ ತಾಯಿ ಜಾಗ ಹುಡುಕಿದಳು,
ಶಿವನ ಅನುಗ್ರಹದಿ ಹುಟ್ಟಿ ಬೆಳದ ಮಗುವೆ ಆ ಸೂರ್ಯನ ಕರ್ಮಗಳ ಅನುಸಾರವಾಗಿ ಶಿಕ್ಷೆ ನೀಡಿದ್ದ.— % &

-


26 JAN 2022 AT 23:53

ಊರಿಗೆ ಹೋಗುವ ಮುನ್ನ... ಹೋಗಿ ಬರುವೆ ಎಂದು ಹೇಳಿದಾಗ "ಸರಿ ಉಷಾರು"ಎಂದು ಸಣ್ಣ ದನಿಯಲ್ಲಿ ಅವಳ ಮಾತು ಕೇಳುತ್ತಿತ್ತು.
ಬಿಡದೆ ದೈವ ಕರೆದಾಗ ಅವಳ ಮಾತಿಗೆ ಮತ್ತೆ ಜನ್ಮ ಪಡೆದು ಅವಳ ನಗುವ ನೋಡುವ ಆಸೆ ನನಗಿತ್ತು.

-


25 JAN 2022 AT 19:03

ದಾರಿ ಉದ್ದಕ್ಕೂ ಕಾಣುವ ಮೈಲುಗಲ್ಲಿನ ಮೇಲೆ ನನ್ನವಳ ಹೆಸರೇ ಬರೆದಹಾಗಿತ್ತು,
ಮುಂದೆ ಸಾಗಿದಂತೆಲ್ಲ ಅವಳ ಬಳಿ ಸೇರಲು ಮೈಲುಗಲ್ಲಿನ ಮೇಲಿನ ಸಂಖ್ಯೆ ಕಡಿಮೆ ಆದಂತಿತ್ತು.

-


19 JAN 2022 AT 21:37

ಗಾಳಿ ಬಿಸದೆ ಸ್ಥಬ್ದವಾಗಿ ನಿಂತಿತ್ತು
"ಗಾಳಿ ಮಾತು" ಎನ್ನುವ ಬಿರುದಿಗೆ ಕಾರಣ ತಿಳಿಯಲು,
ಸತ್ಯ ತಿಳಿದ ಗಾಳಿ ಮತ್ತೆ ಗಾಳಿ ಬಿಸತೊಡಗಿತ್ತು.
ಕಾರಣ......ಉಸಿರು ನಿಂತರೂ ಮಾತು ಜೀವಂತವಾಗಿ ಇತ್ತು.

-


16 JAN 2022 AT 11:57

ಬಿತ್ತಿ ಹೋದ ಪ್ರೀತಿಯ ಬೀಜವ ಮೊಳಕೆ ಒಡೆಯುವ ಮುನ್ನವೇ ಮರೆಯಾದೆಯಾ ಗೆಳತಿ,😔
ಆದರೇನಾಯಿತು... ಈ ಹೃದಯ ಇನ್ನೂ ಹದವಾಗಿದೆ ಹೇಳಿಬಿಡು ಗೆಳತಿ ಆ ನಿನ್ನ ಗೆಳತಿಗೆ ಆಗಲು ನನ್ನ ಮನದ ಒಡತಿ.😉

-


14 JAN 2022 AT 14:43

ಬರಲಿ ಹೊಸ ವರುಷದ ಹೊಸ ಕಾಂತಿ
ಬದುಕಲಿ ಸಿಗಲಿ ಸುಖ ಶಾಂತಿ
ಶುಭವಾಗಲಿ ಎಲ್ಲರಿಗೂ ಈ ಸಂಕ್ರಾಂತಿ.

-


11 MAY 2020 AT 22:34

ತೆಪ್ಪದೊಳಗೆ ಕುಳಿತು ದಡ ಸೇರುವ
ತವಕದಲ್ಲಿದ್ದೆ
ಕಾಣದ ಸುಳಿಯೊಳಗೆ ಸಿಲುಕಿ
ಸುತ್ತೋಡೆದು ಮುಳುಗಿಹೋದೆ.

-


4 JAN 2022 AT 20:30

ಮತ್ತೆ ಮತ್ತೆ ಹೆಚ್ಚುತ್ತಿದೆ ಕೊರೊನಾ
ಮಾಸ್ಕ್ ಹಾಕೊಂಡ್ರು ಎಚ್ರ ಇರಬೇಕಪಾ ಅಣ್ಣ
ದೂರ ದೂರ ಇದ್ರು ಸನಿಕ್ ಬಂದ ಸಿನತಾರ್ ಎತ್ತಲಿ ಅವರ ಹೆಣ
ಆಸಿಡ್ ಹಾಕಿ ಕೈ ತೊಳಕೊಂಡ್ರು ಸಾಯುದಿಲ್ಲ ಈ ಕೊರೊನಾ.

-


5 DEC 2021 AT 19:17

ದಟ್ಟಣೆ ಕಾಡು ಎಲ್ಲಡೆ ಹಬ್ಬಿ ಹೂ ಅರಳುವ ಸಮಯದಿ ನಿ ಬಂದರೇ... ನಿ ಬರುವ ದಾರಿಗೆ ಹೂಗಳೆಲ್ಲ ನಿನ್ನ ಪಾದಕೆ ಮುತ್ತಿಟ್ಟವು.

-


14 OCT 2021 AT 12:54

ಒಂದು ಕ್ಷಣ ಕುಶಿ ಕೊಟ್ಟು ನೆನಪೇ ಉಳಿಯದ ಕನಸುಗಳು ಕಣ್ಣು ತೆರೆದಾಗ ಮುಖದಲ್ಲಿ ಏನೋ ಒಂಥರಾ ಮಂದಹಾಸ ಉಲ್ಲಾಸ,
ಬೆವರಿಳಿಸುವ ಮೈ ನಡುಗಿಸುವ ಕನಸುಗಳು ಜೊತೆಗಿದ್ದವರು ನಮ್ಮನ್ನ ಎಚ್ಚಿರಸಿದರೂ ಭಯದಿ ಒದ್ದು ಮತ್ತೆ ಕ್ಷಮೆ ಕೇಳುವುದು ವಿಪರ್ಯಾಸ.

-


Fetching Sham Aihole Quotes