ಶೈ ಶೈ   (ಶೈಲ)
433 Followers · 149 Following

read more
Joined 27 July 2018


read more
Joined 27 July 2018
23 JAN 2022 AT 2:57

ನಮ್ಮ ಬೆನ್ನ ಹಿಂದೆ ಮಾತಾಡುವವರಿಗಿಂತ
ಹೆಚ್ಚು ಅಪಾಯಕಾರಿ
ಅದನ್ನ ತಂದು ನಮಗೆ ಹೇಳುವವರು..
ಅಂತಹ ಜನರನ್ನು ಆದಷ್ಟು ದೂರ ಇಡಿ..

-


8 JUN 2019 AT 8:34

ಅವನ
ಹೃದಯ
ಕಾವ್ಯಕೆ
ಅವಳ
ಕಂಗಳ
ದನಿ ಸೇರಿ
ಸುಂದರ
ಪ್ರೇಮಗೀತೆ
ಕೇಳಿತು

-


11 JAN 2022 AT 10:37

ಒಂದು ಹೆಣ್ಣಿನ ಬಗ್ಗೆ ಅಪಪ್ರಚಾರ ಮಾಡುವುದು ಇಬ್ಬರೇ

1) ಅವಳನ್ನು ಪಡೆಯುವ ಯೋಗ್ಯತೆ ಇರದ ಗಂಡು
2) ಅವಳೊಂದಿಗೆ ಸ್ಪರ್ಧೆಗಿಳಿಯುವ ಅರ್ಹತೆ ಇರದ ಹೆಣ್ಣು

-


9 JAN 2022 AT 21:58

ಶತ್ರುವಿನ ಕೊನೆಯ
ಅಸ್ತ್ರವೇ
ಅಪಪ್ರಚಾರ

-


19 DEC 2021 AT 15:34

ಆಗಾಗ ಹೃದಯಕ್ಕೆ ಲಗ್ಗೆಯಾಕುತ್ತಿರು
ಕಣ್ಮುಂದೆ ಸುಳಿದಾಡುತ್ತಿರು
ನೆಪಗಳೇಳುತ್ತಾ ಒಂಟಿಯಾಗಿ
ಬಂದು ಸಂಧಿಸುತ್ತಿರು

ಹೇಳದೆ ಉಳಿದದ್ದು,
ಕೊಡದೇ ಬಿಟ್ಟದ್ದು
ನೂರೆಂಟಿವೆ
ಹೃದಯದ ಸಂಚಲ್ಲೊ
ಕಂಗಳ ಮಿಂಚಲ್ಲೊ
ಇಲ್ಲ
ತುಟಿಗಳ ಅಂಚಲ್ಲೊ
ಎಲ್ಲವನೂ ಹೇಳಿಬಿಡುವೆ
ತುಸು ಭಾರವನ್ನಾದರೂ
ಇಳಿಸಿಕೊಳುವೆ...

-


26 NOV 2021 AT 16:34

ನಿನದೇ ನೆನಪಿನಲ್ಲಿ

-


21 MAY 2021 AT 14:15

ನನಗನಿಸುತ್ತಿತ್ತು
ನೀ ದೂರವಾದರೆ
ದೇವರಾಗಿ ಬಿಡುವೆಯೆಂದು
ಅದು ಸತ್ಯವಾಗಿ ಹೋಗಿದೆ

-


20 MAY 2021 AT 22:12

ಏನೆಂದು ಬರೆಯಲಿ ಕವಿತೆ
ಭಾವನೆಗಳು ಅವಿತೇ ಇರುವಾಗ
ಯಾರೂ ಕಾಣದ ಯಾರೂ ಇಲ್ಲದ
ಊರೊಂದಿದ್ದರೆ ಎಷ್ಟು ಚಂದ ಇತ್ತು
ಬನಾಡಿಗಳಂತೆ ಬಾನೆಲ್ಲ ವಿಹಾರಿಸಬಹುದಿತ್ತ

-


15 NOV 2020 AT 19:23

ಈ ಪ್ರೇಮ ನಿಜವೇ ಆಗಿದ್ದರೆ ಬಿಟ್ಟುಬಿಡು
ಅದು ಬಿಳಿಲು ಬಿಟ್ಟು ಭದ್ರವಾಗುತ್ತಲೇ ಇರಲಿ
ಒಂದೊಮ್ಮೆ ಕಾಮವಾದರೆ
ಆಗಲೂ ಬಿಡು ಅದು ಅಳಿದೇ ಹೋಗಲಿ

-


15 NOV 2020 AT 19:20

ಬಾಗಿಲೇ ಇಲ್ಲದ ಹೃದಯದ ಮುಂದೆ
ಕಾಯುವೆ ಯಾಕೆ ನಿಂತು ಹಿಂದೆ
ಕಣ್ಣ ಮುಂದಿನ ದಾರಿಯಾದರೂ ಹಿಡಿ
ನೀನು ಏಕಾಂಗಿಯಾಗಿಯಾದರೂ ಸರಿ

-


Fetching ಶೈ ಶೈ Quotes