ಕಾಣೆಯಾಗಿರುವ ಪ್ರೀತಿಯನ್ನೇ ಹುಡುಕಿ
ಹೊರಟ ಅಲೆಮಾರಿ ನಾನು....-
ಮೌನಕ್ಕೂ ಮೌನ ಕಲಿಸೋ ಮೌನಿ ನಾನು..
ಹೆಸರು:- ಸೌಮ್ಯ ಪಟ್ಟಣಶೆಟ್ಟಿ
ಹುಟ್ಟಿದ್ದು:... read more
ನಿನ್ನ ಮನಸ್ಸಲ್ಲಿ ನಾನಿಲ್ಲದ ಮೇಲೆ
ನನ್ನ ಕನಸ್ಸಲ್ಲಿ ಬರಲು ನಿನಗೆ ಆಹ್ವಾನ ನೀಡಿದವರಾರು..?-
ನನಗೂ ನಿನಗೂ ಇಷ್ಟೇ ವ್ಯತ್ಯಾಸ
ನಾನು ನಿನ್ನನ್ನು ನಿರೀಕ್ಷಿಸುತ್ತಿರುವೆ
ನೀನು ನನ್ನನ್ನು ನಿಲ೯ಕ್ಷಿಸುತ್ತಿರುವೆ....-
ಮುಗಿಯದ ಕವಿತೆ ನೀ ನನ್ನೊಳಗೆ
ಅರಸಿ ಹಾಡುವೆನು ಪದದೊಳಗೆ
ಹೇಳುವ ಆಸೆ ಮನದೊಳಗೆ
ಆಗಿದೆ ನಿರಾಸೆ ಎದೆಯೊಳಗೆ....
ಬಾರದೆ ನೀ ನನ್ನ ಕನಸೊಳಗೆ
ಕಾಯುತ್ತಿರುವೆ ನಾ ನಿನಗಾಗಿ ನಿದ್ದೆಯೊಳಗೆ
ಕನವರಿಕೆಯೂ ಮೂಡಿದೆ ನಿನ್ನ ಹೆಸರೊಳಗೆ
ಕರೆದರೂ ನೀ ಬರದಿರಲು ನನ್ನ ಮನೆಯೊಳಗೆ....
ಮರೆಯಲಾಗದ ಪದವೂ ನೀ ನನ್ನೊಳಗೆ
ಅದಕ್ಕಾಗಿ ವಣಿ೯ಸಿರುವೆ ನಿನ್ನ ನಾ ಕವಿತೆಯೊಳಗೆ
ಕರೆಯದೆ ಬಂದ ಬಂಧು ನೀ ನನ್ನೊಳಗೆ
ಮರೆಯಲಾಗದೆ ಉಳಿದಿರುವೆ ನೀ ಮನದೊಳಗೆ....-
ನಿನಗೆ ಯಾವುದನ್ನು ನಂಬುವುದಕ್ಕೆ ಆಗುವುದಿಲ್ಲವೋ ಅದೇ “ ಸತ್ಯ ”.....
-
ಸಾವು....?
ಬರುವಾಗ ಹೇಳೋದಿಲ್ಲ..
ಬಂದಾಗ ನಾವೇ ಇರೋದಿಲ್ಲ....-
ನೀ ನನ್ನಿಂದ ದೂರವೇ ಇದ್ರು ಹತ್ತಿರವೇ
ಇದ್ರು ಈ ಭಾವನೆಗಳ ನಂಟು ಎಂದು ಬದಲಾಗುವುದಿಲ್ಲ....-
ಅಪ್ಪ....?👨👧❤️🌍
ಜಗತ್ತಿನ ಅದ್ಬುತ ಬಂಧು ನನ್ನ “ಅಪ್ಪ”👨👧
ನಿನ್ನ ವಣಿ೯ಸಲು ಪದಗಳಿಲ್ಲಾ
ಪದಗಳಿಗೂ ಮಿಗಿಲಾದ ಬಾಂಧವ್ಯ ನಿನ್ನದು..👨👧♥️
ನನ್ನ ಪುಟ್ಟ ಮನಸ್ಸಲ್ಲಿ ನೀನೆ ಪ್ರಪಂಚ..🌍
ನಿನ್ನ ಪ್ರೀತಿಯ❤️ಪ್ರಪಂಚದಲ್ಲಿ🌍
ನಾ ಒಂದು ಪುಟ್ಟ ಹಕ್ಕಿ..🐤
ನನ್ನ ಜೀವನದ ಅದ್ಬುತ ಬಂಧು..👨👧
ನನ್ನ ಪ್ರಪಂಚ🌍,,ನೀನೆ,,👉 “ಅಪ್ಪ”❤️🌍-
ಮೂಡಲಿ
ಖುಷಿಯ
ಚಿತ್ತಾರ
ದೂರವಾಗಲಿ
ಬದುಕಿನ
ಅಂಧಕಾರ
ತುಂಬಲಿ ಮನೆ
ಮನಗಳಲ್ಲಿ
ಸಡಗರ....-