ನಿನ್ನ ನೆನೆದಾಗಲೆಲ್ಲ ಕಣ್ಣಂಚಲ್ಲಿ
ಹನಿಯೊಂದು ಜಮವಾಗಿಬಿಡುತ್ತದೆ,
ಕಣ್ಣಿಂದ ಜಾರಲು ಅದಕ್ಕೊಂದು
ನೆಪವಷ್ಟೇ ನಿನ್ನ ನನಪು..!!-
ತೋಚಿದ್ದನ್ನ ಗೀಚಿಬಿಡುವಾಸೆ
ಕಲ್ಪನೆಯ ಬರವಣಿಗೆಯ
ಪುಟ್ಟ ಮೆರವಣಿಗೆ ಅಷ್ಟೇ😊
ಅದೆಷ್ಟೋ ಸಂಗತಿಗಳು
ಅಳಿದುಳಿದರೂ,
ನಿನ್ನ ನೆನಪೊಂದೆ ಜೀವಿಸುವಂತೆ
ಕಾಡುತ್ತಿರುತ್ತೆ ಮತ್ತೆ ಮತ್ತೆ..!!-
ಕಣ್ಣಲ್ಲೇ ಸಾವಿರ ಕನಸ
ಒಟ್ಟಿಗೆ ಕಾಣುವ ಹಾಗೆ ಕಾಡುವನು,
ಮನದಲ್ಲೇ ಮಂಟಪ ಮಾಡಿ
ನನ್ನ ಅನುಮತಿಯ ಕೇಳುವನು,
ನನ್ನ ಮನದ ಗುಡಿಯೊಳಗೆ
ನನಗರಿವಲ್ಲದೇ ಬಂದು ಸೇರಿದವನು,
ಪ್ರತಿ ಕ್ಷಣವೂ ನನ್ನೊಂದಿಗೆ
ಇರಲು ಚಡಪಡಿಸುವನು,
ಉಸಿರ ಪ್ರತಿ ಏರಿಳಿತದಲ್ಲೂ
ನನ್ನ ಸಂಪೂರ್ಣ ಆವರಿಸಿರುವನು,
ಇಂದು ನನ್ನ ಕೊರಳಲ್ಲಿ ಮಾಂಗಲ್ಯವಾಗಿ,
ಹಣೆಯಲ್ಲಿ ಸಿಂಧೂರವಾಗಿ
ನನ್ನೊಳಗೊಂದಾಗಿರುವ ಸದಾ
ಒಲುಮೆಯ ಚಿಲುಮೆ ನನ್ನವನು.....-
ಎಲ್ಲೋ ಸಿಕ್ಕು ತುಂಬಾ ಹರಟಿ,
ಮುದ್ದು ಪೆದ್ದಾಗಿ ಜಗಳ ಮಾಡಿ,
ನೋವಲ್ಲಿ ಸಾಂತ್ವನವಾಗಿ ,
ನಗುವಲ್ಲಿ ಪಾಲುದಾರಳಾಗಿ,
ಕೋಪದಲ್ಲಿ ಬೈದು ನಂತರ ನೈಸಾಗಿ
ಕೊನೆತನಕ ಹೀಗೇ ಇರೋಣ ಅಂತ ಹೇಳಿ,
ನನ್ನ ಪ್ರತಿದಿನದ ಆಗುಹೋಗುಗಳಿಗೆ
ಕನ್ನಡಿಯಂತೆ ಇರುವೆ ನೀ ನನ್ನ ಸ್ನೇಹಿತೆ....
ನಿನಗಾಗಿ ಈ ಪುಟ್ಟ ಸಾಲುಗಳು ಗೆಳತಿ❤-
ನೀ ಹೀಗ್ ಕಾಡ್ಬೇಡ್ವೋ ಹುಡುಗ
ಕಣ್ಣಾಮುಚ್ಚಾಲೆ ಸಾಕಾಗಿದೆ,
ನಿನ್ ಎದುರು ಬಂದ್ರೆ ಕಳ್ದೋಗ್ತೀನಿ
ಅನ್ನೋ ಭಯ ಕಾಡ್ತಿದೆ..!!-
ಅಂದದ ಕಣ್ಣೊಂದರಲ್ಲಿ
ಕಾತುರದ ಕಾಯುವಿಕೆ,
ಕಣ್ಣ ಹನಿಯೊಂದು ಜಾರಿದಾಗ
ತಿಳಿಯಿತು ಅವನೊಂದು ಮರೀಚಿಕೆ...!!-
ಮನದ ಹೋಯ್ದಾಟದಲ್ಲಿ ತುಂಬಿದ
ಕಣ್ಣುಗಳ ನಡುವೆ ಬಂದಂತ ರೆಪ್ಪೆಗಳು,
ಯಾರಿಗೂ ಕಾಣದಂತೆ ನೋವಿನ
ಹನಿಯನ್ನು ತನ್ನಲ್ಲೇ ಬಚ್ಚಿಟ್ಟು
ಪರಿತಪಿಸುತಿವೆ...!!-
ಸಂದಣಿಯಲ್ಲೂ
ನಿನ್ನಿರುವಿಕೆಯ
ಅರಿಯುವವಳು ನಾ,
ಜೊತೆಯಿದ್ದರೂ
ನಿರ್ಲಕ್ಷಿಸಿ ದೂರ
ಸರಿವವನು ನೀ..!!-