ಮನವೆಂಬ ಮರುಭೂಮಿಯಲಿ ಚಿಗುರೊಡೆದ ಲತೆ ಅವಳು
ಅಜ್ಞಾನದ ಅಂಧಕಾರದಲಿ ಬೆಳಕಾದ ಸರಸ್ವತಿ ಅವಳು
ನಾ ಬರೆದ ಕವಿತೆಯ ಸಾರ ಅವಳು
ನಾ ರಚಿಸಿದ ಕಥೆಯ ನಾಯಕಿಯವಳು
ಮನದ ಅಣು ಅಣುವನೂ ಜಯಿಸಿದವಳು
ಕಗ್ಗತ್ತಲ ಜಗದಲಿ ಮಿನುಗುತಿಹ ತಾರೆ ಅವಳು
ಮೌನದಿಂ ಬಳಲುತಿಹ ಮನದ ಮಾತವಳು
ನಾನು ಅತೀ ಹೆಚ್ಚು ಬಯಸಿದರಲ್ಲಿ ಮೊದಲಿಗಳು
ನನ್ನವಳು… ಅವಳೇ ನನ್ನವಳು… ಅವಳು ನನ್ನವಳು…
~ಮೌನ ಮನ-
ಕೈ ತುತ್ತು ಉಣಿಸಿ, ಜೋಗುಳವ ಹಾಡಿ ಮಲಗಿಸುತ್ತಿದ್ದಳವಳು
ಅಣು ಅಣುವಿನಲೂ ಪ್ರೀತಿಯ ಧಾರೆಯೆರೆಯುತ್ತಿದ್ದಳವಳು
ನನಗೆ ಪೆಟ್ಟು ಬಿದ್ದರೆ ಕಣ್ಣೀರ ಸುರಿಸುತಿದ್ದವಳು
ತನಗಿಂತ ನನಗಾಗಿ ಬದುಕುತಿರುವವಳು
ನಿಷ್ಕಲ್ಮಶ ಪ್ರೀತಿಯೇವೆಂದು ಜಗಕೆ ಪರಿಚಯಿಸಿದವಳು
ಯಾರವಳು? ನನಗಾಗಿ ಧರೆಗಿಳಿದ ದೇವತೆಯವಳು
ಯಾರವಳು? ತನ್ನ ಕನಸ ನನಗಾಗಿ ತ್ಯಜಿಸಿದವಳು
ಯಾರವಳು? ಕಗ್ಗತ್ತಲ ಕೋಣೆಯಲಿ ನನ್ನ ಬೆಳಕವಳು
ವಿಷಮಯ ಜಗದಲಿ ಅಮೃತ ಅವಳು
ಇಷ್ಟೇ ಇಷ್ಟು ಹೊಗಳಿಕೆಗೆ ಮನದುಂಬಿ ಹರಸುವಳು
ಅಮ್ಮ… ನಿನ್ನ ವರ್ಣಿಸಲು ಪದಗಳ ಕೊರತೆಯಿದೆ ಕ್ಷಮಿಸಮ್ಮ
~ಮೌನ ಮನ-
ನೆನಪಿನ ಬುತ್ತಿಯಲಿ ನಿನ್ನೇ ತುಂಬಿರುವೆನು
ಕಣಕಣದಲೂ ನಿನ್ನವನೇ ಆಗಿರುವೆನು
ನೀ ಹುಡುಕುತಿಹ ಇನಿಯ ನಾನಲ್ಲವೆನೋ
ನಿನ್ನ ಕಥೆಯಲ್ಲಿ ನಾನಿಲ್ಲವೇನೋ
ನಾ ಹೇಗೆ ಅರ್ಥೈಸಲಿ ನಿನಗೆ
ನೀನೇ ನನ್ನ ಜಗವೆಂದು
ನಿಷ್ಕಲ್ಮಶ ಪ್ರೀತಿಗೆ ಒಡತಿಯಾಗಿಸಿದೆ
ನನ್ನ ಜೀವದ ಗೆಳತಿಯಾಗಿಸಿದೆ
ನನ್ನ ಕಥೆಯ ನಾಯಕನಾಗಲು ಬಯಸಿದೆ
ಆದರೆ ನಾನೇ ಕಥೆಯ ಖಳನಾಯಕನಾದೆ
ಮೌನಿಯಾದೆ, ಮನವ ಸಂತೈಸಲು ಅಸಮರ್ಥನಾದೆ
ಪರಕೀಯವಾದೆ, ನನ್ನವಳಿಗೆ ನಾನೇ ಬೇಡವಾದೆ
ಎಲ್ಲರೊಡನೆ ಇದ್ದೂ ಒಂಟಿಯಾದೆ
ನಾ ಮೌನಿಯಾದೆ, ನಾ… ಮೌನಿಯಾದೆ…
ನಾ… ಮೌನಿ…ಯಾದೆ…
~ಮೌನ ಮನ-
Someone asked me about the person I always talk about. Did you leave her?
I replied, "No, I didn’t, but I had to. I loved her so much that her happiness became more important than mine. I hope she finds her happiness someday. I want her to succeed in the future, so I’m removing the toxicity from her life, that’s none other than me.
She gave her all yet ended up with a broken heart. I treated her rudely, yet she always treated me like an angel. It’s a bit impossible for her to leave me, but I became the villain and made her the victim so she could free herself from those bindings.
Now it’s easier for her to hate me with her whole heart, and I can live with the memories of us for the rest of my life. I will immerse myself in those sweet memories. When I wake up, I will leave this world with those cherished moments.
Yes, I still love her, and I will continue to love her. But I couldn’t express myself or treat her the way she wanted. And here we are now—at least she got what she deserved, and I hope she gets everything she wants.
~mouna_mana-
Give me your tears; I'll give you my smile
Give me your broken pieces; I'll give you my heart
Give me your pain; I'll give you my relief
Give me your sorrows; I'll give you my happiness
Give me your hand; I'll give you show you heaven
Give me your love; I’ll give you my life
Show me your world; I’ll make you my world
~mouna_mana-
“One day I'll be on my deathbed, reminiscing about my life in the last few minutes. My memory takes me back to the first time I saw you, the first time I said 'I love you,' the first hug we shared, and our first kiss. I then think of our marriage, our sweet home, and our two little kids, which symbolize our eternal love. I reminisce about our children growing up. Remembering these sweet memories will make me feel complete. At the last moment, I realise that I've got a second mother. I'll blush slightly with happy tears in my eyes, completing the last seven minutes of my life. Beep… beep… beep…!"
~mouna_mana-
I don’t need a thousand girls to love me,
I just want you to love me in a thousand ways!
I don't need a luxurious bed to sleep peacefully,
I just want to be wrapped in your arms!
I don't want everyone to acknowledge my work,
I just want you to seal your lips on mine!
I will become everything you ever wished for,
In return, I just want you to be mine, now and forever.
I do agree that I'm a kid who never listens to his mom,
but if it's you, then I'll follow you without asking a single thing!
I may be drowning in chaos and sorrow,
but by holding your hands I'll get a ray of hope.
I need you by my side in every small step.
I just wanted to say you're my everything,
Am I your something?
~mouna_mana-
No one will knock on the innermost door of your heart so desperately,
It’s just that you’ve to let them in, at the right time!
~Mouna_mana-
ಅಪ್ಪಾ ನೀನು ಸ್ವಾರ್ಥಿಯಲ್ಲವೇ?
ನೀ ಅತ್ತು ನನಗೆೆ ನಗುವುದ ಕಲಿಸಿದೆ
ನಿ ಹಸಿದು ನನಗೆ ತುತ್ತ ನೀಡಿದೆ
ನಿ ಬರಿಗಾಲಲ್ಲಿ ನಡೆದು ನನ್ನ ಕಾಲಿಗೆ ಚಪ್ಪಲಿ ತೊಡಿಸಿದೆ
ನನ್ನ ಪಾಲಿನ ಬೆವರನೂ ನೀನೇ ಸುರಿಸಿದೆ
ಜಗದಗಲವ ಪರಿಚಯಿಸಿ ಬದುಕ ಕಲಿಸಿದೆ
ನಿನ್ನ ಜೀವನವನ್ನೆ ನನಗೆ ಮುಡಿಪಾಗಿರಿಸಿದೆ
ಸರಿ ತಪ್ಪುಗಳ ಜ್ಞಾನ ನೀಡಿದೆ
ಎಪ್ಟೇ ಕಷ್ಟ ಬಂದರೂ ನನ್ನೊರೆಗೆ ಬರದಂತೆ ತಡೆದೆ
ಆಲದ ಮರದಂತೆ ಬಿಸಿಲ ತಾಪವನ್ನು ಸಹಿಸಿ
ನೆರಳ ತಂಪನ್ನು ನನಗೆ ನೀಡಿದೆ
ಅಪ್ಪಾ ಎಲ್ಲವನ್ನು ನಿನೊಬ್ಬನೇ ಅನುಭವಿಸಿದೆ
ಹೇಳು… ನೀನು ಸ್ವಾರ್ಥಿಯಲ್ಲವೇ?
~ ಮೌನ ಮನ-
ಚಲಿಸುವ ಮೋಡವು ನೀನು
ಕರಗಿಸುವ ಸೂರ್ಯನು ನಾನು
ಮೀನುಗುವ ತಾರೆಯು ನೀನು
ನೆಲಕಪ್ಪಳಿಸುವ ಕ್ಷುದ್ರಗ್ರಹವು ನಾನು
ಮೈನವಿರೇಳಿಸುವ ಚಿಗುರು ನೀನು
ಉದುರುವ ತರಗೆಲೆಯು ನಾನು
ರೋಮಾಂಚನಗೊಳಿಸುವ ಆಕಾಶವು ನೀನು
ಬರಡು ಭೂಮಿಯು ನಾನು
ನಾನಿರುವಲ್ಲಿ ನೀ ಬರಲಾಗದು
ನೀನೆಲ್ಲೋ ನಾನಲ್ಲೇ ಇರ ಬಯಸಿಹೆನು
ನಾ ಬರುವವರೆಗು ಕಾಯುವೆಯಾ?
ನನಗಾಗಿ? ನಮಗಾಗಿ?
ಕಾ…ಯು…ವೆ…ಯಾ…
~ಮೌನ ಮನ-