ಅನ್ನವನಿಕ್ಕಿ ಹಸಿವ ನೀಗಿಸಿದ
ಸೂರು ನೀಡಿ ವಸತಿ ಕಲ್ಪಿಸಿದ
ವಿದ್ಯೆ ನೀಡಿ ಜಗವ ತೋರಿಸಿದ ....
ಗುರುವೇ ನಿಮಗೆ ನನ್ನ ಕೋಟಿ ನಮನ-
ಬಿಟ್ಟೊಗ್ಬೇಡ .........ಬಿಟ್ಟೊಗೋದೆ..... ಬೇಡ
ಸರಳ ರೇಖೆಯಲಿ ಸುಂದರವಾಗಿದ್ದೆವು ನಾವು
ಮಂಜುಳಗಾನದಂತೆ ಮಧುರವಾಗಿದ್ದೆವು
ದೀಪದಂತೆ ಬೆಳಕು ನೀಡುತ್ತಿದ್ದೆವು
ನಿತ್ಯ ಕಿರಿಕಿರಿಯಲ್ಲು ಶುಭ ಸಂದೇಶದಂತಿದ್ದೆವು
ಸಿಂಹಗಳಿದ್ದರು ಸೈಲೆಂಟಾಗಿದ್ದವು
ಎಲ್ಲದಕು ಕಾರಣನು ನಮ್ಮ ಶ್ರೀ ಶ್ರೀನಿವಾಸನು...-
ಬೈಕೊಂಡ್ರು ರೇಖ ಮನಸಿಗೆ ಬಂದಂಗೆ
ಹೇಳ್ಬಿಟ್ರು ಶುಭಕ್ಕ ಸ್ನೇಹ ಶುರುವಾಗ್ತಿದಂಗೆ
ಮಾತಾಡಲೆ ಇಲ್ಲ ಮಂಜುಳಕ್ಕ ಮೌನ ಗೌರಿಯಂಗೆ
ಸುಮ್ನೆ ನೋಡ್ತಿದ್ರು ದೀಪಕ್ಕ ಚಿಕ್ಕ ಮಗುಹಂಗೆ-
ಅಮ್ಮ ಮಾಡಿದ ಉಪ್ಪಿಟ್ಟು
ನನಗಂತು ಉಪ್ಪಿಟ್ಟೆ ಪೇವರಿಟ್ಟು
ಅರೋಗ್ಯಕ್ಕಿಲ್ಲ. ಎಡವಟ್ಟು
ತಿನ್ನಬೇಕು ಎಲ್ಲ ಚಿಂತೆ ಬಿಟ್ಟು...
ಅಮ್ಮ ಮಾಡ್ತಾರೆ ಉಪ್ಪಿಟ್ಟು
ಅವರ ಪ್ರಿತೀನ ಅದರಲ್ಲಿ ಬಚ್ಚಿಟ್ಟು
ಆಗಲೆ ಬೇಕು ರಾಷ್ಟೀಯ ತಿಂಡಿ ಉಪ್ಪಿಟ್ಟು....
.ಸುಮ್ಮೆ ತಿನ್ನಬೇಕು ಗಾಂಚಲಿ ಬಿಟ್ಟು...
-
ಉತ್ತರ ಇಲ್ಲದ ಪ್ರಶ್ನೆಗಳು
ಅರ್ಥವಿಲ್ಲದ ನೋವುಗಳು
ನಿದ್ದೆ ಇಲ್ಲದ ರಾತ್ರಿಗಳು
ನೆಮ್ಮದಿ ಇಲ್ಲದ ಹಗಲುಗಳು
ಮರೆತು ಹೋದ ಮನಸುಗಳು
ಮರೆಯದೆ ಬರುವ ಕಣ್ಣ ಹನಿಗಳು
ಕಳೆದು ಹೋದ ನೆನ್ನೆಗಳು
ಕಾಣದೆ ಬರುವ ನಾಳೆಗಳು
........ಆದರೂ ಸದ್ದಿಲ್ಲದೆ ಸಾಗುತಿದೆ ಜೀವನದ 👣👣...-
ಉತ್ತರವಿಲ್ಲದ ಪ್ರಶ್ನೆಗಳಿಗೆ
ಉತ್ತರವಾಗಿ
ಅರ್ಥವಿಲ್ಲದ ನೋವುಗಳಕೊಂದು
ಒಲವಿಂದ ಹತ್ತಿರವಾಗಿ
ನೆಮ್ಮದಿಯ ನಿದ್ದೆ ಇಲ್ಲದ ಕಣ್ಣಿಗೆ ರೆಪ್ಪೆಗಳಾಗಿ
ಹಗಲು ರಾತ್ರಿಗಳೆಲ್ಲಾ ಸುಖದ ಸ್ವಪ್ನಗಳಾಗಿ
ಮರೆತಂತೆ ನಟಿಸಿ ಮನದ ಮುಗಿಲಲ್ಲಿ ಮುನ್ನೂರು ಕಾವ್ಯ ಗೀಚಿ
ಕಾಮನ ಬಿಲ್ಲೇರಿ
ನೆನ್ನೆಯ ನೆನೆಪುಗಳ ಕಣ್ಣೀರಿಗೆ ಪನ್ನೀರ ಚೆಲ್ಲಿ ಹಸಿರಾಗಿಸಿ
ನಾಳೆಯ ಕನಸ್ಸುಗಳ ನನಸಾಗಿಸಿ
ಸದ್ದಿಲ್ಲದ ಹೆಜ್ಜೆಗಳಿಗೆ ನಲಿವಿನ ಗೆಜ್ಜೆಗಳಕಟ್ಟಿ
ಒಲವಿನ ಬಂಡಿಯ ನೊಗಕ್ಕೆ
ಹೆಗಲಾಗಿ ಹೆಜ್ಜೆ ಹಾಕೋಣ-
ಕಲಿಯುವಾಗ ವಿನಯವಂತಿಕೆಯಿರಬೇಕು
ಕಲಿತ ಮೇಲೆ ವಿಧೇಯತೆ ಇರಬೇಕು
ಕಲಿಸುವಾಗ. ಸೃಜನಶೀಲತೆ ಇರಬೇಕು...-
ಯುಗಾದಿಯ ಹೊಸ ವರುಷ
ತರಲಿ ಬಾಳಲ್ಲಿ ಹರುಷ
ನಗುನಗುತಿರಿ ಪ್ರತಿ ನಿಮಿಷ
ತೊಲಗಲಿ ಎಲ್ಲಾ ಕಲ್ಮಶ
ಚಿಗುರಲಿ ಹೊಸ ಕನಸು
ನನಸಾಗಲಿ ನಿಮ್ಮ ಕನಸು
ರೈತರ ಬಾಳಲ್ಲಿ ಹೆಚ್ಚಲಿ ಸೊಗಸು
ಬೇವು ಬೆಲ್ಲ ಹಂಚಿ ಸಂತೋಷದಿಂದ ಬಾಳಿ ...ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು ....-
ನೀ ಮಗುವಿನ ಹಾಗೆ
ನೀ ನಗುತಿರು ಹೀಗೆ
ನಾ ನಿನ್ನಯ ಕಂದ
ನಿನ್ನ ತುಂಟಾಟವೆ ಚೆಂದ-