ಬದುಕೇ ಹಾಗೆ ಬೇಡವಾಡದ್ದನ್ನು ಮತ್ತೆ ಮತ್ತೆ ಕೊಡುತ್ತಿರುತ್ತದೆ...
-
ವಿಶ್ವಾಸಕ್ಕೆ ಅರ್ಹವಲ್ಲದವರು ದಿನಾಲೂ
ಹೋಳಿಯನ್ನು (ಬಣ್ಣ ಬದಲಾಯಿಸುವವರು)
ಆಚರಿಸುತ್ತಾರೆ...-
ವೃಕ್ಷವೊಂದು ನಗುತ್ತಿತ್ತು
ಎನ್ನ ಕೈ ಕಾಲ್ (ರಂಬೆ ಕೊಂಬೆ ) ಕತ್ತರಿಸಿದರೆನ್
ಎನ್ನ ಕಾಯಕವಾ ನಾ ಬಿಡುವನೇನ್
ಎನ್ನ ಕಡಿವವರೇ
ಉಸಿರಾಡುವರ್ ಎನ್ನ ಉಸಿರಿಂದ
ನೆರಳ್ ಕೊಡುವೆ ವಿಶ್ರಾಂತಿಸಲ್
ಸುಗಂಧದ ಹೂ ಬಿಡುವೆ ಮುಡಿಯಲ್
ಕಾಯಾಗಿ ಹಣ್ಣು ಕೊಡುವೆ ಬದುಕಲ್
ಎನ್ನ ಕಾಯಕವೇ ನಾ ಮಾಡುವೆ
"ನೀ ಕಡಿದರೆನ್
ನಾ ಮಡಿವೆನೇನ್
ಎನ್ನ ಬೀಜವು ಬಿತ್ತಿ
ಮತ್ತೆ ಮತ್ತೆ ಚಿಗಿದು
ಎದ್ದು ನಿಲ್ಲುವೆನ್ " ...-
ನಡೆಯುತಿರು ಮನವೆ
ಎಲ್ಲಿಯು ಎಡವಿ ಬೀಳದಂತೆ,
ಒಂದು ವೇಳೆ ಬಿದ್ದರೂ
ನಡೆಯುತಿರು
ಪುಟಿದೇಳುವಂತೆ...-
ನಾವು ಆಗಲಾರದನ್ನು ಅಂದುಕೊಂಡು
ಆಗಲಿಲ್ಲವೆಂದು ಬೇಸರ ಪಡುತ್ತೇವೆ,
ಇದೇ ಜೀವನದ ವ್ಯಥೆ...-
ಬೇಕೆ ಬೇಕಿತ್ತಾ ಕರುಳಿನ ಕುಡಿಯ
ಬೇಕೆಂದರೆ ಕೊಡುತ್ತಿದ್ದೆ ನನ್ನದೆ ಎಡೆಯ
ಬರಡು ಜೀವದ ಚಿಗುರು ಕನಸದು
ಕುರುಡಾಗಿಯೆ ಚಿವುಟಿ ಹೋದೆಯ
ಯಾವ ತಪ್ಪಿಗೆ ಈ ಕೂಸಿಗೆ
ಯಾರ ಕರ್ಮಕೆ ಈ ಶಿಕ್ಷೆ
ಮರುಗಿದೆ ಜೀವ ಮೈ ಮರೆತು
ಮುಂದೆ ಮೆರೆವ ಜೀವಗಳ ಹೊತ್ತು
ಇದ್ದಾಗ ಭಾರವೆನಿಸದ ಹೃದಯ
ತೊರೆದ ಮೇಲೆ ಭಾರವಾಗಿದೆ
ಧರೆಗಿಳಿದಾದರೂ ಬಂದು ನೋಡ
ಕರುಳ ಕುಡಿಯು ಮಲಗಿದ ಪಾಡ
ಬಾ ಎಬ್ಬಿಸು ಜನಕ
ಅಮ್ಮ ಎನ್ನುವ ತನಕ...-
ನಾವು ಹೇಗೆ ಬದುಕಬೇಕೆಂಬುದನ್ನು,
ಸ್ವತಃ ದೇವರೇ ಬಂದು ಬದುಕಿ ತೋರಿಸಿದ್ದಾರೆ...
🙏ಕೃಷ್ಣಂ ವಂದೇ ಜಗದ್ಗುರುಂ ☝️-