Saroja.n.d Doranhali   (ಸರು.ಎನ್.ಡಿ)
15 Followers · 4 Following

ತಾಯಿಯೇ ದೇವರು 👏👏
Joined 11 March 2019


ತಾಯಿಯೇ ದೇವರು 👏👏
Joined 11 March 2019
29 JUN AT 11:11

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶೇಷತಃ ll
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವನಂ ll

-


21 MAY AT 10:54

"ನಾನು ನೀನು"
ನಲ್ಲ ನಾನು ನನ್ನ ನಲ್ಲೆ ನೀನು
ಸಿಹಿ ಜೇನಿನ ಒಲವಲ್ಲೇ,
ನಗುತ ಇರುವ ನಾನು ನೀನು..

ಪ್ರಿಯಕರ ನಾನು ನನ್ನ ಪ್ರೇಮಿ ನಿನ್ನು
ಅಗಲದಂತೆ ಪ್ರೇಮಸೇರೆಯಲಿ,
ಬಂಧಿಯಾಗುವ ನಾನು ನೀನು..

ಪ್ರೇಯಸಿ ನೀನು ನಿನ್ನ ಪ್ರೇಮಿ ನಾನು
ಪ್ರೀತಿಸಿ ಅನುಕ್ಷಣ,
ಒಲವಿನ ಹಕ್ಕಿಗಳಾಗುವ ನಾನು ನೀನು..

ಮಾಯೆ ನೀನು ನಿನ್ನ ಛಾಯೆ ನಾನು
ಪ್ರತೀ ಹೆಜ್ಜೆ ಜೊತೆ ಸೇರಿಸುತ
ಆತ್ಮ ಸಂಗತಿಗಳಾಗುವ ನಾನೂ ನೀನು..!!
- ಸರು.ಎನ್.ಡಿ

-


12 MAR AT 20:13

ಹೇ ಒಲವೇ..
ಮಿಡಿವ ಮಲ್ಲಿಗೆಯ ಹೂವ ರಾಶಿಗೂ
ಗೊತ್ತು ಇವಳ ಮುಡಿಯ ಒಮ್ಮೆ ಬಾಚಿ
ತಬ್ಬಲ್ಲು ಹೂದೋಟದಲ್ಲಿ ಅದೆಷ್ಟು
ಕಾತುರದಿ ಕಾಯುತ್ತಾ ಕುಳಿತಿದ್ದಿತೆಂದು..
ಸಲುಗೆಯಿಂದ ನಲುಗುತ್ತಿರುವ
ಇವಳ ಸೀರೆಯ ನೆರಿಗೆಯೂ ಚೆನ್ನಾಗಿ ಗೊತ್ತು
ಇವಳ ರೂಪದಲ್ಲಿ ಪ್ರತಿರೂಪವಾಗಲು
ಅದೆಷ್ಟು ಕೈಗಳ ತಪ್ಪಿ ಈ ಅಪ್ಸರೆಯ
ಮೈಸೇರಲು ಮನಸಾರೆ ಕಾಯುತಿತ್ತೆಂದೂ...

-


11 MAR AT 22:08

ಹೇ ಒಲವೇ
ಇವಳಂತೂ ಕರ್ಪೂರದ ಗೊಂಬೆ..
ಉರಿಯುತ್ತಿದ್ದರು ಬೆಳಗುವ ಸೂರ್ಯನಂತೆ
ಸದಾ ಕಂಗೊಳಿಸುವ ರಂಬೆ..
ಅತ್ತ ಉದಯಿಸುವ ಸೂರ್ಯ ಇತ್ತ ಆರ್ಭಟಿಸುವ
ಕಡಲು ಇವೆರಡರ ಅಪೂರ್ವ ಸಂಗಮದಲ್ಲಿ ಬಂದ ಅಪರೂಪದ ಅಪ್ಸರೆ...

-


8 MAR AT 18:48

ಸುಮದೂರಿನ ಸುಂದರಿ ಸೌಗಂಧಿಕಾ
ನೀ ಯಾಕಾದೆ ಇಸ್ಟೊಂದು ಆಕರ್ಷಕ
ಮುತ್ತಿಕ್ಕುವ ಮುಂಗುರುಳಿಗೆ ಹೇಳಲೇ
ಜೋತು ಬಿದ್ದ ಕಿವಿಯೋಲೆಗೆ ಕೇಳಲೇ..!!

ನಿನ್ನದಂತು ಮೃದು ಮನಸಿನ ಮಲ್ಲಿಗೆ
ಸ್ವಪ್ನವು ಸಹ ನಾಚುವುದು ಮೆಲ್ಲಗೆ
ಕೆನ್ನೆ ಗುಳಿಯ ಕೆಂದಾವರೆ ಚಲುವೆ ಇವಳು
ಮಚ್ಚೆಗು ರಂಗೇರುವಂತೆ ನಗುವ ಚೆಲ್ಲುವಳು.!!

ಸಿಹಿ ಜೇನಿನಷ್ಟೇ ಸಿಹಿಯಾದ ಸ್ವರಮಾಲಿಕೆ
ಪದಗಳು ಸಹ ಪರದಾಡಿದೆ ಸಿಗದೆ ಹೋಲಿಕೆ
ಶ್ವೇತ ವರ್ಣದ ನಗು ಮೊಗದ ಸಿಂಗಾರಿಯೇ
ಪ್ರೀತಿಯ ಮಾತುಗಳನ್ನಾಡುವ ಓ ಪ್ರೀತಿಯೇ..!!

ಕುಡಿ ನೋಟ ಆ ನಿನ್ನ ಕಂಗಳ ಕನ್ನಡಿಯಲ್ಲಿ
ರವಿ ಉದಯ ನೀನಿಡುವ ರಂಗೋಲಿಯಲ್ಲಿ
ನನ್ನ ಮನದಲ್ಲಿ ನಿನ್ನೊಂದು ಹೂ ಮಳೆ
ನಿನ್ನಂತೆಯೇ ಆಗಲಿ ನಿನ್ನೆಲ್ಲ ಬರುವ ನಾಳೆ.!!

ಬೆಂಗಳೂರಿನ ಓ ಸುಂದರ ಸುಮವೆ
ಹೇಳು ನಿನಗೆ ಯಾರಾದರೂ ಸಮವೇ..?
ಮನಸಿಗೆ ಹತ್ತಿರವಾಗಿರುವೆ ನನ್ನ ಮನವೇ
ಹುಟ್ಟು ಹಬ್ಬದ ಶುಭಾಶಯ ನನ್ನೊಲವೆ😘❣️..!!

-


9 DEC 2024 AT 19:53


ಬೆಳಗುತಿರಲಿ ದೀಪದಂತೆ ನಗು
ಸದಾ ಮಿನುಗುತಿರು
ತಾರೆಯಂತೆ ನೀ ಮಗು
ಹರುಷದ ಹೆಚ್ಚು ಸುಖ ನಿನ್ನದಾಗಲಿ
ನಾಳಿನ ಕನಸುಗಳು
ಪ್ರತಿ ಹಾಳೆಯು ನನಸಾಗಲಿ
ಅರ್ಥಪೂರ್ಣ ಜೀವನದಿ ಬಾಳು
ಆಯುಷ್ಯ ಹೆಚ್ಚಾಗಿ ದೇವರು ನೀಡಲಿ
ಆದಷ್ಟು ನಗುನಗುತ
ಬಾಳೋ ಹಕ್ಕಿ ನಿನ್ನಾಗಲಿ
ಹುಟ್ಟು ಹಬ್ಬದ ಶುಭಾಶಯಗಳು
ಡಿಯರ್ ಮೈ ಸ್ವೀಟ್ ಸಿಸ್ಟರ್
💐💐🎂🥰😍

-


12 OCT 2024 AT 21:16

ನನ್ನಂತರಂಗದ ಪರಿಪೂರ್ಣ ಪಂಚಾಯ್ತಿಗೆ
ನೀನೇನೇ ಅಧ್ಯಕ್ಷೆ,
ನನ್ನೆಲ್ಲಾ ಸವಿ ಸಂತಸಗಳಿಗೆ
ನಿನ್ನ ಇರುವಿಕೆಯೇ ಶ್ರೀರಕ್ಷೆ,,

-


8 OCT 2024 AT 16:03

ಅವಳೆಂದರೆ
ಅದ್ಭುತ ಆಕರ್ಷಣೆಯ
ಅಕ್ಷಯ ಪಾತ್ರೆ,
ಅಪ್ಸರಾಲೋಕದಲ್ಲಿ
ಅವಿಸ್ಮರಣೀಯ ಜಾತ್ರೆ..!!

-


24 MAR 2024 AT 22:12

ಬೆಳಗುತಿರಲಿ ದೀಪದಂತೆ ನಗು
ಸದಾ ಮಿನುಗುತಿರು
ತಾರೆಯಂತೆ ನೀ ಮಗು
ಹರುಷದ ಹೆಚ್ಚು ಸುಖ ನಿಮ್ಮದಾಗಲಿ
ನಾಳಿನ ಕನಸುಗಳು
ಪ್ರತಿ ಹಾಳೆಯು ನನಸಾಗಲಿ
ಅರ್ಥಪೂರ್ಣ ಜೀವನದಿ ಬಾಳು
ಆಯುಷ್ಯ ಹೆಚ್ಚಾಗಿ ದೇವರು ನೀಡಲಿ
ಆದಷ್ಟು ನಗುನಗುತ
ಬಾಳೋ ಹಕ್ಕಿ ನಿನ್ನಾಗಲಿ
ಹುಟ್ಟು ಹಬ್ಬದ ಶುಭಾಶಯಗಳು
ಡಿಯರ್ ಮೈ ಸ್ವೀಟ್ ಸಿಸ್ಟರ್
💐💐🎂🥰😍

-


29 FEB 2024 AT 20:11

ನನ್ನವಳು ದೇವತೆ..!!
ನನ್ನವಳು ದೇವರಂತೆಯೆ ಮೌನಿ...!!
ದೇವರನ್ನು ಮನದಲ್ಲಿ ಭಜಿಸುವ ರೀತಿಯಲ್ಲೇ.
ನಾನವಳ ಮನದಲ್ಲೇ ಧ್ಯಾನಿಸುವ ಧ್ಯನಿ...!!

ದೇವರಿಗೆ ಹಣ್ಣು ಕಾಯಿ ನೈವೇದ್ಯ ನೀಡುವಂತೆ,
ನಾನವಳಿಗೆ ತನು ಮನವೆಲ್ಲವ ಧಾರೆದರು
ಸ್ವೀಕಾರ ಮಾಡಿದವಳು ನನ್ನವಳು ದೇವರಂತೆ..!!

ದೇವರ ಬಳಿ ಜನರ ಭಾದೆಗಳ ಹೇಳಿಕೊಳ್ಳುವಂತ,
ನಾನವಳ ಬಳಿ ನನ್ನೆಲ್ಲಾ ಭಾವನೆಗಳ ಹೇಳಿಕೊಂಡರು
ಸ್ಪಂದಿಸಿದಳು ನನ್ನವಳು ಬಿಲ್ಕುಲ್ ದೇವರಂತೆ..!!

ದೇವರನ್ನು ಕಾಣದಿದ್ದರೂ ಇರುವನೆಂಬ
ನಂಬಿಕೆಯಲ್ಲಿ ಜನರು ಪೂಜಿಸುವಂತೆ..
ನನ್ನೊಳಗೆ ಸದಾ ಇರುವಳೆಂಬ
ನಂಬಿಕೆಯಲ್ಲಿ ನಾನವಳನ್ನು ಪ್ರೀತಿಸುವೇನು.
ಆರಾಧಿಸುವೇನು ಕಾರಣ ನನ್ನವಳು ದೇವರಂತೆ..!!

-


Fetching Saroja.n.d Doranhali Quotes