santhosh vishwamitra   (🇮🇳Santhosh vishwamitra)
130 Followers · 19 Following

read more
Joined 18 October 2017


read more
Joined 18 October 2017
26 NOV 2023 AT 16:11

ಸ್ನೇಹ, ಪ್ರೀತಿ, ಸಂಬಂಧ ಇವುಗಳಿಗೆ ಈಗ ಯಾವ ಮೌಲ್ಯವೂ ಇಲ್ಲ, ಅರ್ಥವೂ ಇಲ್ಲ.
ಹಣದ ಪ್ರಪಂಚದಲ್ಲಿ ಹಣದ ಮುಂದೆ ಬೇರೇನೂ ಇಲ್ಲ.

-


30 MAY 2022 AT 10:04

ಲವ್ ನ ಲೇಟೆಸ್ಟ್ ಟ್ರೆಂಡ್..

ಫಸ್ಟ್ ಡೈಲಾಗ್ ಯು ಆರ್ ಮೈ ಸೋಲ್..
ಲಾಸ್ಟ್ ಡೈಲಾಗ್ ಯು ಆರ್ ಆನ್ ಸೇಲ್!!

ಇದು ಟ್ರೂ ಲವ್ 😂

-


30 MAY 2022 AT 10:01

Latest trend in love..
First dialogue YOU ARE MY SOUL..
Last dialogue YOU ARE ON SALE!!

This is true love 😂

-


28 APR 2022 AT 0:42

If you don't have money or status then stay away from everyone..
Nobody gives a shit about you!!

-


12 OCT 2021 AT 8:53

ಸೂರ್ಯನೂ ಕೂಡಾ ಎಲ್ಲಾ ದಿನವೂ ಒಂದೇ ರೀತಿ ಬೆಳಕು ನೀಡಲು ಸಾಧ್ಯವಿಲ್ಲ. ಬದುಕಿನಲ್ಲಿ ಒಂದೆರಡು ದಿನ ಕಷ್ಟದ ಪರಿಸ್ಥಿತಿ ಬಂತೆಂದರೆ ಅದೇ ಕೊನೆ ಎಂದು ಯೋಚಿಸುತ್ತಾ ಕೂರಬಾರದು. ಕತ್ತಲು ಸರಿದು ಬೆಳಕು ಹೊರಗೆ ಬರಲೇಬೇಕು, ಹಾಗೇ ಕಷ್ಟಗಳೆಲ್ಲಾ ಸರಿದು ಸುಖ ಅನ್ನೋದೂ ಕೂಡಾ ಬರಲೇಬೇಕು.

-


11 OCT 2021 AT 9:06

ನಾವು ಯಾರಿಗಾಗಿಯೂ ಬದುಕುತ್ತಿಲ್ಲ. ಬದಲಾವಣೆ ಸಹಜ ಹಾಗೂ ಅವಶ್ಯಕ. ನಿನ್ನೆ ನಾವಿಲ್ಲದೇ ಬದುಕೋಕೇ ಆಗೋದಿಲ್ಲ ಅಂತ ಹೇಳುತ್ತಿದ್ದವರೆಲ್ಲಾ ಇಂದು ಅವರ ಜೀವನದಲ್ಲಿ ನಮ್ಮ ಅವಶ್ಯಕತೆ ಮುಗಿದ ನಂತರ ನಮ್ಮನ್ನು ಜೀವಂತ ಶವದಂತೆ ನೋಡುವಾಗ ಅವರಿಲ್ಲದೇ ನಾವೂ ಬದುಕಬಲ್ಲೆವು ಅನ್ನೋ ಸಂದೇಶ ನಾವು ಅವರಿಗೆ ನೀಡಬೇಕು, ಹಾಗೇ ಅವರಿಲ್ಲದೇ ಬದುಕಬೇಕು.

-


10 OCT 2021 AT 19:02

ಈಗಿನ ಮನುಷ್ಯನ ಸ್ನೇಹ, ಪ್ರೀತಿ, ಸಂಬಂಧ, ವಿಶ್ವಾಸ, ನಂಬಿಕೆ ಎಲ್ಲಾ ನಿಂತಿರೋದು ಹಣದ ಮೇಲೆ. ನಿಮ್ಮ ಕೈಯಲ್ಲಿ ಹಣ ಇರುವವರೆಗೆ ಮಾತ್ರ ಇವೆಲ್ಲದರ ವ್ಯಾಲಿಡಿಟಿ ಅಷ್ಟೆ. ನಿಮ್ಮಲ್ಲಿ ಹಣವಿಲ್ಲ ಅಂದ್ರೆ ನೀವು 'ಅವರುಗಳ' ಪಾಲಿಗೆ ಬದುಕಿದ್ದರೂ ಒಂದೇ ಸತ್ರೂ ಒಂದೇ. ಅದಕ್ಕಾಗಿಯೇ ಪ್ರಾಣಿಗಳು ಎಷ್ಟೋ ಮೇಲು ಅನ್ನೋದು. ಒಂದು ಹೊತ್ತು ಊಟ ಹಾಕಿಲ್ಲ ಅಂತ ನಿಮ್ಮ ನಾಯಿ ಯಾವತ್ತೂ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.

-


15 SEP 2021 AT 11:59

ನಮ್ಮ ಬದುಕೆಂಬ ಪುಸ್ತಕವು ಕೊನೆಯ ಪುಟದಲ್ಲಿ ಇದೆಯಲ್ಲಾ ಎಂಬ ಹತಾಶ ಭಾವನೆಯಲ್ಲಿ ನಾವಿರುವಾಗಲೇ ದೇವರೆನಿಸಿಕೊಂಡವ ಅದಾಗಲೇ ಹೊಸತೊಂದು ಅಧ್ಯಾಯಕ್ಕೆ ಮುನ್ನುಡಿ ಹಾಕಿರುತ್ತಾನೆ.. 😊🙏

-


6 AUG 2021 AT 22:00

ಮನಸ್ಸಿಗೆ ಎಷ್ಟೇ ಹತ್ತಿರದ ವ್ಯಕ್ತಿಯಾದರೂ ನಾವಿರುವಾಗ ಒಂದು ರೀತಿಯಲ್ಲಿ ಮಾತನಾಡಿ ನಾವಿಲ್ಲದಿರುವಾಗ ನಮ್ಮ ಬಗ್ಗೆಯೇ ಇನ್ನೊಂದು ರೀತಿ ಮಾತನಾಡುವ ವ್ಯಕ್ತಿಯನ್ನು ಮನಸಿನಿಂದ ಮಾತ್ರವಲ್ಲ ನಮ್ಮ ಬದುಕಿನಿಂದಲೇ ಹೊರಗಟ್ಟುವುದು ಒಳ್ಳೆಯದು.
ಇಲ್ಲವಾದರೆ ಇಂತಹ ಜನರೇ ಸಮಯ ನೋಡಿ ನಮ್ಮ ಬೆನ್ನಿಗೆ ಚೂರಿ ಹಾಕಿ ನಮ್ಮನ್ನೇ ನಾಶ ಮಾಡುತ್ತಾರೆ.

-


6 AUG 2021 AT 19:34

ಹೊರ ಜಗತ್ತಿಗೆ ನಾವೆಷ್ಟೇ ದೊಡ್ಡ ವ್ಯಕ್ತಿ ಆಗಿದ್ದರೂ ಅಥವಾ ದೊಡ್ಡ ವ್ಯಕ್ತಿಗಳೆಂದು ತೋರಿಸಿಕೊಂಡರೂ ಕನ್ನಡಿಯ ಮುಂದೆ ನಿಂತಾಗ ನಮಗೆ ಮಾತ್ರ ಕಾಣುವ ನಮ್ಮ ಆತ್ಮಸಾಕ್ಷಿಯೇ ನಮ್ಮ ನಿಜವಾದ ವ್ಯಕ್ತಿತ್ವ, ನಮ್ಮ ನಿಜವಾದ ಮುಖ.
ನಾವೆಷ್ಟೇ ಬಚ್ಚಿಟ್ಟರೂ ಒಂದಲ್ಲ ಒಂದು ದಿನ ನಮ್ಮ ಆ ನಿಜವಾದ ಮುಖ ಹೊರಗೆ ಬರಲೇಬೇಕು.

-


Fetching santhosh vishwamitra Quotes