ಇನ್ನೆಲ್ಲಿಯ ಕನಸುಗಳು?!
ನಂಬಿಕೆಗಳ ಹೂಡಿಕೆ ಭಾರವಾದಾಗ.
ಭಾವಗಳ ಹೂ ಹುದುರಿ ಬಾಡಿದಾಗ.
ಇನ್ನೆಲ್ಲಿಯ ಬದುಕು?!
ನಾಳೆಗಳ ಹಸಿವು ಕನಸ ಕಸಿಯುವಾಗ.
ಹೆಗಲ ಏರಿದ ಹೊಣೆಯು ಹಸಿಯುವಾಗ.
ಸಾಗುವ ದಾರಿಗೆ ಒಲವಿನ ಬಿಸಿಯು ಈಗ.....
-
ಧರ್ಮಸಂಕಟಗಳಲಿ, ಜೀವಸಮರದಲಿ||
ನಿರ್ವಾಣದೀಕ್ಷೆಯಲಿ,ನಿರ್ಯಾಣಘಟ್ಟದಲಿ|
ನ... read more
ಬಹಳಷ್ಟು ಬರೆಯುವುದೇನಿಲ್ಲ ನಿನ್ನ ಕುರಿತು
ಪ್ರತಿ ಅಕ್ಷರ, ಪದ ಸಾಲು ಸಹ ನಿನ್ನದೇ ಗುರುತು.
ನಾ ಗಳಿಸಿದ್ದೇನಾದರು ಇದ್ದರೆ ನೀ ಅಷ್ಟೇ
ನನ್ನಲ್ಲೇನಾದರು ಉಳಿದಿದ್ದರು ನೀನಷ್ಟೇ......-
ಯಾವ Some ಬಂಧಗಳು ಸಹ ಬಹಳ ಕಾಲ ಉಳಿಯೋದಿಲ್ಲ
ಉಳಿಯೋದೇನಿದ್ರೂ ನೆನಪಿನ ನೆಪವಷ್ಟೇ.....-
ಕಳೆದು ಕೊಂಡವಳ ಹುಡುಕಾಟಕ್ಕೆ ಹೋದವನಲ್ಲ ನಾನು
ಕಳೆದು ಕೊಂಡವಳ ಹುಡುಕಾಟಕ್ಕೆ ಹೋದವನಲ್ಲ ನಾನು.
ಕರೆದರು ಹಿಂದಿರುಗಳೆಂಬ ಸುಳ್ಳಿನ ಹೋರಾಟಕ್ಕೆ ನಲ್ಲ ನಾನು
ನೆನಪಿನ ಯಾತನೆಗೆ ನಗುವೆಂಬ ಒಡನಾಟವ ಕಲಿಸಿದವ ನಾನು......-
ಈ ಯಾಣದ ಪ್ರಯಾಣಿಕಳು ನೀನು
ಹೊಸತೊಂದು ಗಮ್ಯವ ಹುಡುಕಿದೆ ನಾನು.
ನಡೆದು ಬಂದ ಹೆಜ್ಜೆಗಳಿಗಷ್ಟೇ ರಸ್ತೆಯ ಅನುಭವವಾಗಿತ್ತು, ಹೃದಯವೇಕೋ ಸದ್ದಿಲ್ಲದೆ ನೋವ ನುಂಗಿತ್ತು. ಬಿರಿದ ತುಟಿಗಳ ಮದ್ಯ ನಗುವೊಂದು ಚಿಗುರಿತ್ತು,ಕಣ್ಣ ಸರೋವರದ ತುಂಬಾ ಮಡಿದ ಕನಸುಗಳೇ ತೇಲುತ್ತಿತ್ತು.ಬದುಕಿನ ಭಾರ ಹೆಚ್ಚಿತ್ತು, ಮನದ ಕ್ರೂರ ಮಲಗಿತ್ತು.ಜಡದಂತೆ ಬಿದ್ದ ಬದುಕಿನ ಬೀದಿಗೆ ನಿನ್ನೆಜ್ಜೆಯೂ ಇಣುಕಿತ್ತು,ಮತ್ತೆ ಬದುಕುವ ಆಸೆ ಬದುಕಿಗೆ ಬೇಕಿತ್ತು... ಬೇಕಿತ್ತು....-
ಮನದ ಬತ್ತಿಗೇಕೆ ಒಲವಿನ ದೀವಿಗೆ
ನೆನಪಿನ ಉರಿ ಎದೆಯಲ್ಲೇ ಉಸಿರಾಡುವಾಗ.
ಕಗ್ಗತ್ತಲ ಕಾಡಿಗೇಕೆ ಬೆಳದಿಂಗಳ ಬಯಕೆ
ಬೆಳಕಿನ ಗರಿ ತನ್ನೊಡಲಲ್ಲೆ ನಗುವಾಗ.....
-
ಮಾತಿನ ಮೊದಲ ಆಕ್ರಂದನವಾಗಲಿ ಅನಿಸಿಕೆಯಾಗಲಿ,
ಅವಳೆಂದಿಗೂ ಭಾವಿಸಲೆ ಇಲ್ಲ.
ಮನದ ಮೊದಲ ಕನಸಾಗಲಿ ಕೊನೆಯ ನೆನಪಾಗಲಿ,
ಅವಳಂತು ಬದುಕಲ್ಲೇ ಇಲ್ಲಾ......
-
ನಮ್ಮದೆ ಬದುಕು, ಅಸ್ತಿತ್ವ ನಂಬದ ನಾವು.
ಮತ್ತೊಬ್ಬರ ಹೇಳಿಕೆ, ನಂಬಿಕೆ ಕಾಯುವುದೆಷ್ಟು
ಸರಿ......
-
ನಾ ಮೊದಲಿನಷ್ಟು ಪೋಲಿಯಲ್ಲ
ತುಸು ಮೌನಿ...
ನಿನ್ನ ನಗೆಯ ಸದ್ದಲ್ಲಿ ನಿನ್ನಾಲಿಸುವ
ಒಂಥರಾ ಪ್ರೇಮಿ.
ಭಗ್ನಗೊಳಿಸದಿರು ಈ ಒಲವ ತಪವ
ನಾ ನಿನ್ನುಸಿರ ಧ್ಯಾನಿ......-