Sandeep Shetty   (Sandy Shetty)
92 Followers · 4 Following

read more
Joined 6 March 2019


read more
Joined 6 March 2019
2 AUG AT 22:51

ತುಳಿದ ಹಾದಿಯ ಮತ್ತೆ ಹಾಯಲು
ಇರದು ಯಾವುದೆ ಅಂಜಿಕೆ
ಇರದ ದಾರಿಯ ಹುಡುಕಿ ನಡೆಯಲು
ಸ್ವಲ್ಪ ಬೇಕಿದೆ ನಂಬಿಕೆ...

-


29 JUN AT 22:03

ದೂರವಿರೊ ಜೀವಗಳಿಗೆ
ಸನಿಹದಾಸೆ...
ಸನಿಹವಿರೊ ಜೀವಗಳಿಗೆ
ದಿನನಿರಾಸೆ...
ಸ್ಮರಿಸಿ ಕಾಯುವ ಮನಕೆ
ಅರಿತು ಬಾಳುವ ಬಯಕೆ
ಹೊಸತು ದಿನಗಳಲ್ಲು ಇಹುದು
ಆಸೆ-ನಿರಾಸೆ...

-


28 JUN AT 22:16

ನಿನ್ನೊಳಗೆ ನೀನಿರಲು
ನಿನಗ್ಯಾರು ಬೇಕು...
ನೋವಲ್ಲು ನಲಿವಲ್ಲು
ಜೊತೆಯಾಗಿರೆ ಸಾಕು...

ಕಿವಿ ನೀಡಬೇಕು ನೀ
ನಿನ್ನೊಳಗಿರೊ ಧ್ವನಿಗೆ...
ದನಿಯಾಗಬೇಕು ಆ
ಮನದ ಕಡಲ ಅಲೆಗೆ...

-


24 JUN AT 21:46

ಇರುಳಲ್ಲಿ ಬೆಳಕಿಗೆ ಬೆಲೆ
ನೋವಿರಲು ನಗುವಿಗೆ ಬೆಲೆ
ಇರುವಾಗ ತಿಳಿಯದು ಅದರ ಪ್ರಾಮುಖ್ಯತೆ
ಕಳೆದಾಗ ನೆನಪಿನಲ್ಲೆ ತೀರದ ವ್ಯಥೆ


-


19 JUN AT 21:34

ಇದ್ದು ಬಿಡಲೇ ನಾ ಹಾಗೆ
ತಿಳಿದೂ... ತಿಳಿಯದವನಂತೆ...
ಉಳಿಯ ಪೆಟ್ಟಿಗೆ ಶಿಲ್ಪವಾಗಲು
ಅಲುಗದೇ ನಿಂತ ಶಿಲೆಯಂತೆ...

ನೀ ಸರಿಯಿದ್ದರು, ಜನ ತಪ್ಪೆಂದರೆ
ಚಿಂತನೆ ಬದಲಿಸೊ ನರಿಯಂತೆ...
ಸ್ವಂತ ನಿಲುವಿಗೂ ಮಾತೆ ಆಡದಿರೊ
ಮೌನದೂರಿನ ದೊರೆಯಂತೆ...

-


14 JUN AT 20:56

ಕಾರಣಗಳಿಗೋಸ್ಕರ ಮಾತಾಡುವುದಕ್ಕೂ
ಮಾತಾಡಲು ಕಾರಣಗಳ ಹುಡುಕುವುದಕ್ಕೂ
ಸ್ವಾರ್ಥಕ್ಕೂ - ಪ್ರೀತಿಗೂ ಇರುವಷ್ಟು
ಅಂತರವಿದೆ...



-


11 JUN AT 20:18

ಹುಡುಕಬಹುದೇ ನಾವು
ಕಳೆದ ನಮ್ಮನೆ...
ಸಿಕ್ಕಿಯು ಸಿಗದಿರುವಂತ
ಮನದ ಕಡಲನೇ...

ಅರಿಯ ಹೊರಟಷ್ಟು ಇದು
ದೂರ ಸರಿಯುತಿರೆ...
ತಿಳಿಯೂದೆ ಆಳದ ನೋವು
ದಡದಿ ಕುಳಿತರೆ...

-


7 JUN AT 23:15

ಹೂ ಅರಳುವ ಮುನ್ನ
ಇರದು ಬೆಲೆ ಅದಕೆ
ಅರಳಿ ಮುದುಡಿದ ಮೇಲು
ಸಿಗದು ಸ್ಥಾನ ಅದಕೆ...

ನಮ್ಮ ಪಾತ್ರವು ಹಾಗೆ ಕೆಲವರ ಬದುಕಲಿ
ಇದ್ದು ಅರಳಿದಾಗ ಮಾತ್ರ ಬೆಲೆ ಅಲ್ಲಿ
ಮುದೂಡಲದು ಶುರುವಾದರೆ
ಹೂವೂ, ಕಸದ ರಾಶಿಯಲ್ಲಿ...

-


24 MAY AT 0:34

ಖುಷಿಯ ಬದುಕಿಗೆ
ಹೆಗಲಾಗುವರು ನೂರು
ಕುಸಿದ ಬದುಕಿಗೆ
ಹೆಗಲಾಗುವರು ಯಾರು

ತಾನಿಲ್ಲ, ತನದಿಲ್ಲ
ಕೇಳುವರೆ ತನಗಿಲ್ಲ
ಜೊತೆಯಾಗದಿರೆ ತನ್ನ ಸಂಗಾತಿಯೂ
ವಿಧಿಯು ಕೈ ತೊರೆದಿರೆ ಸಾಂಗತ್ಯವು

-


21 MAY AT 21:37

ಮಾತುಗಳೇ ಬೇಕಿಲ್ಲ
ನೋವ ಬಿಂಬಿಸಲು
ಮೌನದಾ ಕಾರ್ಮೋಡ ಸಾಕು
ಮನದ ಕತ್ತಲ ಬಣ್ಣಿಸಲು

ಪರರದೇನು ತಪ್ಪಿಲ್ಲ
ನೋವ ಉಣ್ಣಿಸುವಲ್ಲಿ
ಇದು ನಮ್ಮದೇ ಬಯಕೆಗಳು
ಕತ್ತು ಹಿಸುಕುವ ಬಳ್ಳಿ


-


Fetching Sandeep Shetty Quotes